Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಿಮಾ ಕೊಲೆ ಹಿಂದೆ ರಾಜಕೀಯ ಕೈವಾಡ :  ಸಿಬಿಐ ತನಿಖೆ‌ಗೆ ಅಂಬಿಕಾ ದಿನೇಶ್ ಒತ್ತಾಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ. 08 : ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಹಸಿರು ಪಟಾಕಿ ಬಳಕೆಗೆ ಸರ್ಕಾರ ಕಡ್ಡಾಯ ಕ್ರಮ ಜಾರಿಗೊಳಿಸಬೇಕು, ಹುಲಿ ಉಗುರು ಪ್ರಕರಣದಲ್ಲಿ ರಾಜಕಾರಣಿಗಳು / ಸ್ಟಾರ್ ನಟರು – ಘಟಾನುಘಟಿ ಉದ್ಯಮಿಗಳ ತನಿಖೆ ಮಾಡುವಂತೆ ಸರ್ಕಾರವನ್ನು ಪರಿಸರ ಮತ್ತು ವನ್ಯ ಜೀವಿ ಸಂರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಅಂಬಿಕಾ ದಿನೇಶ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್, ಆಪಾರ್ಟಿಟ್ ನಲ್ಲಿ ಗಣಿ-ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನವೆಂಬರ್ 4ರ ರಾತ್ರಿ 8.30 ಪ್ರತಿಮಾ ಅವರನ್ನು ಮನೆಯ ಮುಂಭಾಗ ಉಸಿರುಗಟ್ಟಿಸಿ, ಕತ್ತು ಇರಿದು ಕೊಲೆ ಮಾಡಲಾಗಿತ್ತು. ಇದೀಗ ಘಟನೆ ಸಂಬಂಧ ಪ್ರತಿಮಾ, ಕಾರು ಚಾಲಕ ಕಿರಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಆತನೆ ಕೊಲೆ ಮಾಡಿದ್ದಾರೆ ಎಂದು ಹೇಳುತ್ತಿದ್ದರೂ ಇದರ ಹಿಂದೆ ರಾಜಕೀಯ ಕೈವಾಡ ಇದ್ದು ಸಿಬಿಐ ತನಿಖೆಯಾಗಲಿಯಾಗಬೇಕಿದೆ ಎಂದು ಆಗ್ರಹಿಸಿದರು.

ಗಣಿ-ಭೂವಿಜ್ಞಾನಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರ್.ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನರ ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನರನ್ನು ವಿಚಾರಣೆ ನಡೆಸುವಂತ ಒತ್ತಾಯಿಸಿದ್ದು, “ಕೊಲೆಯಾಗಿರುವ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಅವರು ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಮುನಿರತ್ನ ವಿರುದ್ಧ ಆಕ್ರಮ ಸ್ಫೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿದ್ದು ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವೇದಿಕೆಯ ನಿರ್ದೇಶಕರಾದ ಮಧುಕುಮಾರ್ ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ಮನೆಗಳಲ್ಲಿ ದೀಪ ‘ಬೆಳ, ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಪಟಾಕಿ ಸಿಡಿಸುವ ವಿಚಾರವಾಗಿ ಪರಿಸರ ಕಾಳಜಿ ಅಗತ್ಯ ಪಟಾಕಿ ಹಾರಿಸಬೇಡಿ ಬದಲಿಗೆ ಪರಿಸರಕ್ಕೆ ಪೂರಕವಾಗುವ ಪಟಾಕಿಗಳನ್ನು ಹಾರಿಸಿ ಸಿಡಿಸುವಂತೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2018ರ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ 2020ರಲ್ಲಿ ಅಂದಿನ ಸರ್ಕಾರ ಪಟಾಕಿ ನಿಷೇಧಿಸಿತ್ತು. ಅಲ್ಲದೆ ಹಸಿರು ಪಟಾಕಿ ಸಿಡಿಸುವಂತೆ ಸೂಚಿಸಿತ್ತು. ಈ ಬಗ್ಗೆ ಪರಿಸರ ಮತ್ತು ತನ್ನಜೀವಿ ಸಂರಕ್ಷಣಾ ವೇದಿಕೆಯು ನಾಗರೀಕರಿಗೆ ಪರಿಸರ ದೀಪಾವಳಿ ಆಚರಿಸುವಂತೆ ಮನವಿ ಮಾಡಿದ್ದಾರೆ.

ವೇದಿಕೆಯ ರಾಜ್ಯ ಸಂಚಾಲಕರಾದ ಟಿ.ರುದ್ರಮುನಿ ಮಾತನಾಡಿ, ತನ್ನ ಜೀವಿಗಳು ದೇಶದ ಭಾಗಗಳು ಬಹಳ ಹಿಂದಿನಿಂದಲೂ ವ್ಯಾಪಾರದ ವಸ್ತುಗಳಾಗಿವೆ. ಹುಲಿ ಉಗುರಿನ ಲಾಕೆಟ್ ಮಾಡಿಕೊಳ್ಳುವುದು, ಹುಲಿಗಳ ಹಲ್ಲು, ಆನೆ ದಂತ, ಬೆಂಕಿ ಹಾಗೂ ಕಡವೆಗಳ ಕೊಂಬು, ಹುಲಿ ಜಿಂಕೆಗಳ ಚರ್ಮ, ಆನೆÀ ಕೂದಲುಗಳಿಂದ ಉಂಗುರ ತಯಾರಿಸಿಕೊಳ್ಳೋದು… ಹೀಗೆ ಪ್ರಾಣಿಗಳ ದೇಹದ ಭಾಗಗಳನ್ನ ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ತಾರೆ. ಜಿಂಕೆ ಹಾಗೂ ಕಡವೆಗಳ ಕೊಂಬುಗಳನ್ನು ಹಿಂದಿನ ಕಾಲದಲ್ಲಿ ಮನೆಯ ಗೋಡೆಗಳಲ್ಲಿ ನೇತು ಹಾಕಿದ್ರು, ತಾವೇ ಕೊಂದು ಹಾಕಿದ ಹುಲಿ ಚರ್ಮವನ್ನ ಬೆಂಕೆಗಳ ಚರ್ಮವನ್ನು ಮನೆಯಲ್ಲಿ ಪ್ರದರ್ಶನಕ್ಕೆ ಇಡ್ತಿದ್ರು, ಇದೀಗ ಇದು ಆಪರಾಧವಾಗಿದೆ.  1972ರಿಂದ ದೇಶದಲ್ಲಿ ವನ್ಯಜೀವಿ ರಕ್ಷಣಾ ಅಧಿನಿಯಮ ಜಾರಿಯಲ್ಲಿದೆ. ಈ ಕಾನೂನು ಕಾಡಿನ ಮಾಣಿಗಳ ರಕ್ಷಣೆಗೆ ಬದ್ಧವಾಗಿದೆ. ಕಾಡು ಪ್ರಾಣಿಗಳ ಬೇಟೆ, ಮಾಂಸ ಭಕ್ಷಣೆ ಹಾಗೂ ಅವುಗಳ ದೇಹದ ಬಿಡಿ ಭಾಗಗಳ ಮಾರಾಟವನ್ನ ತಡೆಯೋದಕ್ಕಾಗಿ ಈ ಕಾನೂನು ರೂಪಿಸಲಾಗಿದೆ ಎಂದರು.

ಹುಲಿ, ಉಗುರು ಧರಿಸಿದ ಹಲವು ನಟರು. ನಿರ್ಮಾಪಕರು ರಾಜಕಾರಣಿಗಳು ಹಾಗೂ ಘಟನಾಘಟ ಉದ್ಯಮಿಗಳ ವಿರುದ್ಧವೂ ಹುಲಿ’ ಉಗುರಿನ ಲಾಕೆಟ್ ಧರಿಸಿದ ಆರೋಪ ಇದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಸರ್ಕಾರ ಇನ್ನಷ್ಟು ಬಲ ತುಂಬಿದೆ. 2022ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಹಲವು ಲೋಪದೋಷಗಳನ್ನು ಸರಿಪಡಿಸಲಾಗಿದೆ. ಹುಲಿಗಳ ಮಾನವನ ಧನದಾಹಕ್ಕೆ ಅಮಾಯಕ ವನ್ಯ ಜೀವಿಗಳು ಬಲಿಯಾಗುತ್ತಲೇ ಇವೆ. ಇದನ್ನು ಕಾನೂನಿನ ಮೂಲಕ ರಕ್ಷಣೆಯನ್ನು ಮಾಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!