Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸವಿತಾ ಸಮಾಜಕ್ಕೆ ಎಸ್ಸಿ ಮೀಸಲಾತಿ ನೀಡಿ : ಮುಖಂಡರಿಂದ ಮುಖ್ಯಮಂತ್ರಿಗೆ ಮನವಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವಂಬರ್. 07 : ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಎಸ್ಸಿ. ಮೀಸಲಾತಿ ನೀಡಬೇಕು. ನಮ್ಮ ಮೇಲೆ ಜಾತಿನಿಂದನೆ ಮಾಡುವವರ ವಿರುದ್ದ ಕೇಸು ದಾಖಲಿಸುವಂತೆ ಕಾಯಿದೆ ಜಾರಿಗೆ ತರಬೇಕೆಂದು ಜಿಲ್ಲಾ ಹಾಗೂ ತಾಲ್ಲೂಕು ಸವಿತಾ ಸಮಾಜದಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕುಲಕಸುಬನ್ನೆ ನೆಚ್ಚಿಕೊಂಡು ಇಂದಿಗೂ ಬದುಕುತ್ತಿರುವ ಸವಿತಾ ಸಮಾಜ ಕೊರೋನಾ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಸಾಕಷ್ಟ ಸಂಕಟ ಎದುರಿಸಬೇಕಾಯಿತು. ಹಾಗಾಗಿ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಈ ಹಿಂದೆಯೂ ಮನವಿ ಮಾಡಿಕೊಂಡಿದ್ದರೂ ರಾಜ್ಯ ಸರ್ಕಾರದಿಂದ ಸ್ಪಂದನೆಯಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸಿದರು.

ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಆರ್.ಶ್ರೀನಿವಾಸ್, ಎನ್.ಶ್ರೀನಿವಾಸ್, ನಾಗರಾಜು, ಘನಶ್ಯಾಂ, ರಂಜಿತ, ಬೆಳಗಟ್ಟ ಶ್ರೀನಿವಾಸ್, ಧರ್ಮಣ್ಣ, ಸಾಯಿನಾಥ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

ಆತ್ಮಹತ್ಯೆ ಮಾಡಿಕೊಂಡ KAS ಆಫೀಸರ್ ಪ್ರಕರಣ : ಪೊಲೀಸರಿಗೆ ತಲೆನೋವಾದ ಕೇಸ್..!

  ಬೆಂಗಳೂರು: ನಿನ್ನೆ ಹೈಕೋರ್ಟ್ ವಕೀಲೆ ಚೈತ್ರಾ.ಬಿ. ಗೌಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಕೀಲೆಯಾಗಿ, ಮಾಡೆಲ್ ಆಗಿ ಚೆನ್ನಾಗಿದ್ದ ವಕೀಲೆ ಇದ್ದಕ್ಕಿದ್ದ ಹಾಗೇ ಹೀಗೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸಂಜಯನಗರ ಪೊಲೀಸರು

error: Content is protected !!