ಮಡಿಕೇರಿ: ಮೂರನೇ ಅಲೆ ಭಯದ ನಡುವೆಯೂ ಶಾಲಾ-ಕಾಲೇಜುಗಳು ಆರಂಭವಾಗಿದೆ. ಅದರಲ್ಲೂ ಪ್ರೈಮರಿ ಶಾಲೆಗಳು ಆರಂಭವಾಗಿದ್ದು, ಪೋಷಕರಲ್ಲಿ ಆತಂಕವೂ ಇದೆ, ಮಕ್ಕಳ ಭವಿಷ್ಯದ ಪ್ರಶ್ನೆಯೂ ಅಡಗಿದೆ. ಹೀಗಾಗಿ ಶಾಲೆಗೆ ಮಕ್ಕಳನ್ನ ಸುರಕ್ಷಿತೆ ನೋಡಿಕೊಂಡು ಕಳುಹಿಸುತ್ತಿದ್ದಾರೆ. ಆದರೂ ಅಲ್ಲೊಂದು ಇಲ್ಲೊಂದು ಶಾಲೆಯಲ್ಲಿ ಕೊರೊನಾದ ಕೇಸ್ ಗಳು ಪತ್ತೆಯಾಗುತ್ತಲೆ ಇವೆ.
ಜಿಲ್ಲೆಯ ಗಾಳಿಬೀಡು ಗ್ರಾಮದಲ್ಲಿ ನವೋದಯ ಶಾಲೆಯಿದೆ. ನವೋದಯ ಶಾಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಕ್ಕಳು ಶೀತ, ಜ್ವರದಿಂದ ಬಳಲುತ್ತಿದ್ದಾರೆ. ಟೆಸ್ಟ್ ಮಾಡಿಸಿದಾಗ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ನಿನ್ನೆ ಕೂಡ 21 ಮಕ್ಕಳಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಇಂದು ಮತ್ತೆ 10 ಮಕ್ಕಳಲ್ಲಿ ಪಾಸಿಟಿವ್ ದೃಢವಾಗಿದೆ.
ಸೋಂಕಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 270 ವಿದ್ಯಾರ್ಥಿಗಳ ಪೈಕಿ 31 ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದ್ದು, 7 ದಿನಗಳ ಕಾಲ ಮಕ್ಕಳ ಮೇಲೆ ನಿಘಾ ವಹಿಸಲಾಗುವುದು. ಹಾಗೆ ಎಲ್ಲಾ ಸಿಬ್ಬಂದಿಗಳಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುತ್ತೆ ಅಂತ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.