ಸುದ್ದಿಒನ್, ಚಿತ್ರದುರ್ಗ: ಶಿಕ್ಷಣ ಸಂಸ್ಥೆಯಾದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್‍ಇ ಕ್ಲಸ್ಟರ್ ವಿಭಾಗದ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಕೆಲ ಸ್ಥಾನ ಪಡೆದುಕೊಂಡು ಮತ್ತು ರಾಷ್ಟ್ರಮಟ್ಟದ ಆಯ್ಕೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
1.ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆ ಆಯೋಜಿಸಿದ್ದ ಸೌತ್ ಜ್ಹೋನ್ ಸೆಕೆಂಡ್ ಚೆಸ್ ಪಂದ್ಯಾವಳಿಯು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯ ಶಾಲೆಗಳು ಭಾಗವಹಿಸಿದ್ದು ಸೆಮಿಫೈನಲ್ ಅಂತಿಮ ಸುತ್ತಿನಲ್ಲಿ 33 ಶಾಲೆಗಳ ಪಟ್ಟಿಯಲ್ಲಿ ನಮ್ಮ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಡಿಸೆಂಬರ್ 22, 23ರಂದು ಉತ್ತರಪ್ರದೇಶದ ನೋಯ್ಡದಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ವಿದ್ಯಾರ್ಥಿನಿಯರು ತರಗತಿ ಸ್ಫರ್ಧೆ ಸೆಮಿಫೈನಲ್‍ನಲ್ಲಿ ಪಡೆದಸ್ಥಾನ
ನೋಮಿಕ ಆರ್ 4 ನೇ ತರಗತಿ ಚೆಸ್ ದ್ವಿತೀಯ ಸ್ಥಾನ
ಮಧುಲೇಖ ಜಿ .4 ನೇ ತರಗತಿ ಚೆಸ್ ದ್ವಿತೀಯ ಸ್ಥಾನ
ಎಸ್ ಆರ್ ಅಪೇಕ್ಷ 6 ನೇ ತರಗತಿ ಚೆಸ್ ದ್ವಿತೀಯ ಸ್ಥಾನ
ಹಾಸಿನಿ ಅಜಿತ್ 8 ನೇ ತರಗತಿ ಚೆಸ್ ದ್ವಿತೀಯ ಸ್ಥಾನ
“ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಿಬಿಎಸ್‍ಇ ಶಾಲೆ” ದಾವಣಗೆರೆಯ ಸಿಬಿಎಸ್‍ಇ ಅಥ್ಲೇಟಿಕ್ಸ್ ಸ್ಫರ್ಧೆಗಳನ್ನು ಆಯೋಜಿಸಿದ್ದು ನಮ್ಮ ಶಾಲೆಯ ವಿದ್ಯಾರ್ಥಿಗಳು ಸೆಮಿಫೈನಲ್‍ನಲ್ಲಿ ಕೆಲ ಸ್ಥಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ವಿದ್ಯಾರ್ಥಿ ತರಗತಿ ಸ್ಫರ್ಧೆ ಪಡೆದಸ್ಥಾನ
ವೈಷ್ಣವಿ ಎಮ್ ಕುಂಬಾರ್, 9 ನೇ ತರಗತಿ 100 ಮತ್ತು 200 ಮೀಟರ್ ಓಟ ಸೆಮಿ ಫೈನಲ್ ದ್ವಿತೀಯ ಸ್ಥಾನ
ಸಿದ್ಧಾರ್ಥ್ ಈ ಟಿ 8 ನೇ ತರಗತಿ 200 ಮೀಟರ್ ಓಟ ಸೆಮಿಫೈನಲ್ ದ್ವಿತೀಯ ಸ್ಥಾನ
ಗಗನ್ ದೀಪ್ ಎ10 ನೇ ತರಗತಿ ಎತ್ತರ ಜಿಗಿತನಾಲ್ಕನೇ ಸ್ಥಾನ
ಯುವಜನ ಕ್ರೀಡಾ ಇಲಾಖೆ ಮತ್ತು ಸಬಲೀಕರಣ” ಆಯೋಜಿಸಿದ್ದ ಶಿಕ್ಷಣ ಕರ್ನಾಟಕ ಸ್ಟೇಟ್ ಟೆಕ್ವೆಂಡೋ ಚಾಂಪಿಯನ್‍ಶಿಫ್ 2023-24 “ಸ್ಫರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಕೆಲವು ಸ್ಥಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ವಿದ್ಯಾರ್ಥಿತರಗತಿಸ್ಫರ್ಧೆಪಡೆದಸ್ಥಾನ
ಸಾಥ್ವಿಕ್ ಹೆಚ್ 8 ನೇ ತರಗತಿ ಟೆಕ್ವೆಂಡೋದ್ವಿತೀಯ ಸ್ಥಾನ
ನಿವೀಕ್ಷನಯನ ಕೋಟೆಲ್ 3 ನೇ ತರಗತಿ ಟೆಕ್ವೆಂಡೋಪ್ರಥಮ ಸ್ಥಾನ
ವಿದ್ಯಾರ್ಥಿಗಳ ಅಮೋಘ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ. ಬಿ.ಎ. ಲಿಂಗಾರೆಡ್ಡಿ ಹಾಗೂ ಕಾರ್ಯದರ್ಶಿ ಶ್ರೀಮತಿ ಸುಜಾತಾಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಅಮೋಘ್ ಬಿ.ಎಲ್ ಹಾಗೂ ಆಡಳಿತಾಧಿಕಾರಿ ಡಾ|| ಟಿ ಎಸ್ ರವಿ, ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಪ್ರಭಾಕರ್ ಎಂ.ಎಸ್. ಶಾಲೆಯ ಟೆಕ್ವೆಂಡೋ ತರಬೇತುದಾರರಾದ ಸ್ವಾಮಿ ಸರ್ ಹಾಗೂ ದೈಹಿಕ ಶಿಕ್ಷಣ ವಿಭಾಗ ಮತ್ತು ಬೋಧಕವರ್ಗವು ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡುವುದರೊಂದಿಗೆ ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿಗಳು ಅಭಿನಂದಿಸುವುದರೊಂದಿಗೆ ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.