Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BBK10: ಕಾರ್ತಿಕ್ ವಿಚಾರಕ್ಕೆ ಮೈಕಲ್ ಜೊತೆಗೆ ಬ್ರೇಕಪ್ ಮಾಡಿಕೊಂಡ ಇಶಾನಿ..!

---Advertisement---

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮಕ್ಕೇನು ಕೊರತೆಯಿಲ್ಲ. ಪ್ರತಿ ಸೀಸನ್ ನಲ್ಲೂ ಪ್ರೇಮ ಪಕ್ಷಿಗಳು ಸಿಕ್ಕಿ ಬೀಳುತ್ತವೆ. ಅದರಂತೆ ಈ ಬಾರಿಯ ಸೀಸನ್ ನಲ್ಲಿ ಆರಂಭದಲ್ಲಿಯೇ ಮೈಕಲ್ ಹಾಗೂ ಇಶಾನಿ ತಾವೂ ಪ್ರೇಮಿಗಳು ಎಂದು ಅನೌನ್ಸ್ ಮಾಡಿದ್ದು. ಈಗ ಅದೇ ಪ್ರೀತಿ ಕಾರ್ತೀಕ್ ವಿಚಾರಕ್ಕೆ ಬ್ರೇಕಪ್ ಆಗಿದೆ.

 

ಸಂಗೀತಾ ಕಳಪೆ ತೆಗೆದುಕೊಂಡು ಜೈಲಲ್ಲಿ ಇದ್ದಾರೆ. ಕಾರ್ತಿಕ್ ಹಾಗೂ ತನಿಷಾ ಅಡುಗೆ ಮಾಡುವ ಜಾಗಕ್ಕೆ ಬಂದ ಇಶಾನಿ, ಪಪೇಟ್ ಎಂದಿದ್ದಾರೆ. ಇದು ಕಾರ್ತಿಕ್ ಗೆ ಇಷ್ಟ ಆಗಿಲ್ಲ. ‘ನೀನು ಒಂಟಿಯಾಗಿ ಇಲ್ಲಿ ಆಟವಾಡಿ ತೋರಿಸು. ಅದಕ್ಕೆ ನಿನಗೆ ತಾಕತ್ತು ಇಲ್ಲ’ ಎಂದು ಕಾರ್ತಿಕ್ ಸವಾಲು ಹಾಕಿದ್ದಾರೆ. ಈ ಮಾತನ್ನ ಇಶಾನಿ ಒಬ್ಬ ಹುಡುಗಿಯಾಗಿರುವುದಕ್ಕೆ ಈ ರೀತಿ ಎಲ್ಲಾ ಹೇಳುತ್ತಾ ಇದ್ದೀಯಾ ಅಲ್ವಾ ಅಂತ ತಪ್ಪಾಗಿ ಭಾವಿಸಿ, ನಮ್ರತಾರನ್ನು ಕರೆದು ತಂದಿದ್ದಾರೆ. ಎಲ್ಲರ ಮುಂದೆ ಜೋರು ಮಾಡಿದ್ದಾರೆ. ಕಣ್ಣೀರು ಹಾಕಿದ್ದಾರೆ.

 

ಮೈಕಲ್ ಕೂಡ ಅಲ್ಲಿಯೇ ಇದ್ದ ಕಾರಣ, ಕಾರ್ತೀಕ್ ಹೇಳಿದ್ದು ಆ ರೀತಿ ಅಲ್ಲ ಅಂದಿದ್ದಾರೆ. ಇದು ಇಶಾನಿಯನ್ನ ಮತ್ತಷ್ಟು ಕೆರಳಿಸಿದೆ. ನನ್ನ ಕಡೆಗೆ ಮಾತನಾಡುವುದನ್ನು ಬಿಟ್ಟು ಕಾರ್ತೀಕ್ ಕಡೆಗೆ ಮಾತನಾಡುತ್ತಾನೆ. ಥೂ ನೀನು ಒಬ್ಬ ಬಾಯ್ ಫ್ರೆಂಡ್ ಹ. ನನಗೆ ನೀನು ಬೇಡವೇ ಬೇಡ ಎಂದಿದ್ದಾರೆ.

 

ಮೈಕಲ್ ಗೆ ಇಶಾನಿಯನ್ನು ನೋಡಿ ನೋಡಿ ಸಾಕಾಗಿದೆ. ಕೋಪಗೊಂಡ ನೈಕಲ್, ಸೈಕೋ ಅಂತ ಪದ ಬಳಕೆ ಮಾಡಿ ಮುಂದೆ ಹೋಗಿದ್ದಾರೆ. ಈ ಪದ ಕೇಳಿ ಇಶಾನಿ ಇನ್ನಷ್ಟು ಕಣ್ಣೀರು ಹಾಕಿದ್ದಾರೆ. ‘ನೋಡಿ ನನನೆ ಸೈಕೋ ಅಂತಾನೆ. ಯಾರಾದರೂ ತನ್ನ ಹುಡುಗಿಗೆ ಹೀಗೆ ಹೇಳುತ್ತಾರಾ. ಸೈಕೋ ಅನ್ನೋರೆಲ್ಲ ನಂಗೆ ಬೇಡವೇ ಬೇಡ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...