Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 68 ನೇ ಕನ್ನಡ ರಾಜ್ಯೋತ್ಸವ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.01 : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 68 ನೇ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಆಚರಿಸಲಾಯಿತು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ 1973 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸುರವರು ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿ ಇಂದಿಗೆ ಐವತ್ತು ವರ್ಷಗಳಾಗಿರುವುದರಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಕೆಂಪು ಹಳದಿ ಬಣ್ಣದಲ್ಲಿ ರಂಗೋಲಿ ಬಿಡಿಸಿ ದೀಪ ಬೆಳಗುವ ಮೂಲಕ 68 ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯನವರು ಘೋಷಿಸಿದಂತೆ ಐದು ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ಕೂಡಲೆ ಈಡೇರಿಸಿದ್ದಾರೆ. ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಇದು ಪಕ್ಷಕ್ಕೆ ವರದಾನವಾಗಲಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಕರ್ನಾಟಕವೆಂದು ನಾಮಕರಣವಾಗಿ ಇಂದಿಗೆ ಐವತ್ತು ವರ್ಷಗಳಾಗಿರುವುದು ಈ ಬಾರಿಯ 68 ನೇ ಕನ್ನಡ ರಾಜ್ಯೋತ್ಸವದ ವಿಶೇಷ. ಮದ್ರಾಸ್, ಬಾಂಬೆ, ಹೈದರಾಬಾದ್ ಭಾಗದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸುವಲ್ಲಿ ಅನೇಕ ಹಿರಿಯರ ತ್ಯಾಗ ಬಲಿದಾನವಿದೆ. ಕನ್ನಡ ರಾಜ್ಯೋತ್ಸವದಂದು ಅಂತಹ ಮಹನೀಯರುಗಳನ್ನು ನೆನಪಿಸಿಕೊಳ್ಳಬೇಕೆಂದರು.

ಕರ್ನಾಟಕಕ್ಕೆ ಐವತ್ತು ವರ್ಷಗಳ ಸಂಭ್ರಮದ ಸುದಿನದಲ್ಲಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತಗಳಿಂದ ಅಧಿಕಾರಕ್ಕೆ ಬಂದಿರುವುದು ಒಂದು ವಿಶೇಷ ಎಂದು ಸಂತಸ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ. ಜಮೀರ್ ಮಾತನಾಡುತ್ತ ಆಲೂರು ವೆಂಕಟರಾಯರು, ಗೋಪಾಲಗೌಡ, ಗಾಂಧಿವೀರಪ್ಪ, ಕೆಂಚವೀರಪ್ಪ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರು ಕರ್ನಾಟಕದ ಏಕೀಕರಣಕ್ಕಾಗಿ ಬಹಳಷ್ಟು ವರ್ಷಗಳ ಕಾಲ ಹೋರಾಟ ನಡೆಸಿದ್ದರಿಂದ ನಾವುಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಕುವೆಂಪು, ರಾಘವಾಂಕ, ರನ್ನ, ಡಿ.ವಿ.ಗುಂಡಪ್ಪ, ದಾ.ರಾ.ಬೇಂದ್ರೆ ಇವರುಗಳ ಕೊಡುಗೆ ಕನ್ನಡಕ್ಕೆ ಸಾಕಷ್ಟಿದೆ. ಎಲ್ಲರನ್ನು ಸ್ಮರಿಸಿಕೊಳ್ಳುವ ಸುದಿನವೇ ಕನ್ನಡ ರಾಜ್ಯೋತ್ಸವ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷೆ ನಜ್ಮತಾಜ್, ಕೆ.ಪಿ.ಸಿ.ಸಿ. ಕುಶಲಕರ್ಮಿಗಳ ವಿಭಾಗದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಅಲ್ಲಾಭಕ್ಷಿ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೊಹಿದ್ದೀನ್(ಚೋಟು) ನ್ಯಾಯವಾದಿ ಗಂಗಾಧರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಡಾ.ರಹಮತ್‍ವುಲ್ಲಾ, ನೇಮತ್‍ವುಲ್ಲಾ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ಮೋಕ್ಷರುದ್ರಸ್ವಾಮಿ, ಪಿ.ಕೆ.ಮೀನಾಕ್ಷಿ, ಭಾಗ್ಯಮ್ಮ, ಸುಧಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರೇಣುಕಶಿವು ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹನುಮಾನ್ ಅವತಾರದಲ್ಲಿ ರಿಷಭ್ ಶೆಟ್ಟಿ : ಹೊಸ ಅವತಾರ ನೋಡಿ ಕರ್ನಾಟಕದ ಫ್ಯಾನ್ಸ್ ಶಾಕ್

ಕಾಂತಾರಾ ಸಿನಿಮಾ ಮಾಡಿ ಇಡೀ ದೇಶದಾದ್ಯಂತ ಹೆಸರುವಾಸಿಯಾದ ರಿಷಬ್ ಶೆಟ್ಟಿ ಹೊಸ ಅವತಾರವೆತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಈಗ ಜೈ ಹನುಮಾನ್ ಆಗಿ ಬರ್ತಿದ್ದಾರೆ. ನಟ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್

ಏನು ಇಲ್ಲ ಎಂದವರಿಗೆ ಹನುಮಂತು ಎಂಥಾ ಆಟ ತೋರಿಸಿದ್ರು ನೋಡಿ : 2ನೇ ಸಲ ಕ್ಯಾಪ್ಟನ್.. ಮನೆ ಮಂದಿ ಶಾಕ್..!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕುರಿಗಾರ್ ಹನುಮಂತು ಬಂದಿರೋದು ನಿಮ್ಗೆಲ್ಲಾ ಗೊತ್ತೆ‌ ಇದೆ. ಪಕ್ಕಾ ಉತ್ತರ ಕರ್ನಾಟದ ಗ್ರಾಮೀಣ ಭಾಗದ ಪ್ರತಿಭೆಯೇ ಸರಿ. ಬಿಗ್ ಬಾಸ್ ಮನೆಯಲ್ಲೂ ಸದಾ ಪಕ್ಕ

ಮಗನ ಆತ್ಮಕ್ಕೆ ಶಾಂತಿ ಸಿಗಲಿ : ರೇಣುಕಾಸ್ವಾಮಿ ತಂದೆ ಹೇಳಿದ್ದೇನು ?

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ನಟ ದರ್ಶನ್ ಸದ್ಯ ಮಧ್ಯಂತರ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಬಳ್ಳಾರಿ ಜೈಲು ಸೇರಿದ ಮೇಲೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದರು. ಜೈಲು ಅಧಿಕಾರಿಗಳು ಮೆಡಿಕಲ್

error: Content is protected !!