Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರೀಮತಿ ಇಂದಿರಾಗಾಂಧಿಯವರ 39ನೇ ಪುಣ್ಯ ಸ್ಮರಣೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಅಕ್ಟೋಬರ್. 31 :
ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗಾಗಿ ಜಾರಿ ಮಾಡಿದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸುವಂತ ಕಾರ್ಯವಾಗಬೇಕಿದೆ. ಇದರೊಂದಿಗೆ ಅವರ ತತ್ವಗಳು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವನ್ನು ಮಾಡಿದಾಗ ನಿಜವಾದ ಅರ್ಥದಲ್ಲಿ ಅವರಿಗೆ ಶ್ರದ್ದಾಂಜಲಿಯನ್ನು ಸಲ್ಲಿಸಿದಂತೆ ಆಗುತ್ತದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿ ಗೌಡ ರವರು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಮಹಿಳಾ ಕಾಂಗ್ರೇಸ್ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ, ಎಐಸಿಸಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಇಂದಿರಾಗಾಂಧಿಯವರ 39ನೇ ಪುಣ್ಯ ಸ್ಮರಣೆ ಮತ್ತು ಸರ್ದಾರ ವಲ್ಲಭಾಯಿ ಪಟೇಲ್ ರವರು 149ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಗಳಾಗಿದ್ದಾಗ ಬಡವರಿಗಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರ ಮೂಲಕ ಬಡವರ ಪ್ರಗತಿಗೆ ಪೂರಕವಾಗಿದ್ದರು. ತತ್ವ ಸಿದ್ದಾಂತದ ಅಡಿಯಲ್ಲಿ ಧೇಯೋದ್ದೇಶದಿಂದ ಉತ್ತಮವಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇಂದಿನ ದಿನಮಾನದಲ್ಲಿ ಇತಿಹಾಸವನ್ನು ಮರೆಯುವರು ಜಾಸ್ತಿಯಾಗಿದ್ದಾರೆ. ಅಂತಹರಿಗೆ ಪಕ್ಷದವರು ತಳಿಸುವಮತ ಕಾರ್ಯವನ್ನು ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಿಗೆ ಕಾಂಗ್ರೆಸ್ ಇತಿಹಾಸದ ಬಗ್ಗೆ ತಿಳಿಸುವಮತ ಕಾರ್ಯವಾಗಬೇಕಿದೆ. ಅದರ ಬಗ್ಗೆ ಅರಿವನ್ನು ಮೂಡಿಸಬೇಕಿದೆ. ಇಂದಿರಾರವರು ಪಂಚವಾರ್ಷಿಕ ಯೋಜನೆಯನ್ನು ಜಾರಿ ಮಾಡುವುದರ ಮೂಲಕ ಡ್ಯಾಂ, ಉತ್ತಮವಾದ ಕಟ್ಟಡಗಳನ್ನು ನಿರ್ಮಾಣ ಮಾಡಿದರು ಎಂದರು.

ದೇಶದಲ್ಲಿ ಆಹಾರ ಕೂರತೆ ಕಂಡು ಬಂದಾಗ  ಹೊರ ದೇಶದಿಂದ ಅಹಾರವನ್ನು ತರಿಸುವುದರ ಮೂಲಕ ಜನತೆಯ ಹಸಿವನ್ನು ತಣಿಸುವುದರ ಮೂಲಕ ದೇಶದ ಪ್ರಗತಿಗೆ ಕಾರಣರಾಗಿದ್ದಾರೆ. ಹುಟ್ಟಿನಿಂದ ಶ್ರೀಮಂತರಾದರು ಸಹಾ ಬಡವರ ಪರವಾದ ಕಾಳಜಿಯನ್ನು ಹೊಂದುವುದರ ಮೂಲಕ ಅವರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದರು. ನ.19 ರಂದು ಇಂದಿರಾಗಾಂಧಿಯವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದೆಂದು ಶ್ರೀಮತಿ ಗೀತಾ ನಂದಿನಿ ಗೌಡ ತಿಳಿಸಿದರು.

ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶೀ ಸಂಪತ್ ಕುಮಾರ್ ಮಾತನಾಡಿ, ಇಂದಿರಾಗಾಂಧಿಯವರು ದಿಟ್ಟ ಮಹಿಳೆಯಾಗಿದ್ದರು ದೇಶದ ಪರವಾಗಿ ದಿಟ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಕಾರಣರಾಗಿದ್ದರು. ದೇಶದಲ್ಲಿ 20 ಅಂಶಗಳನ್ನು ಜಾರಿ ಮಾಡುವುದರ ಮೂಲಕ ಎಲ್ಲರ ಸರ್ವತೋಮುಖವಾದ ಬೆಳವಣಿಗೆಗೆ ಕಾರಣರಾದರು. ಇದುವರೆವಿಗೆ ಇಂತಹ ನಿರ್ಧಾರಗಳನ್ನು ಯಾವ ಪ್ರದಾನ ಮಂತ್ರಿಯೂ ಸಹಾ ತೆಗೆದುಕೊಂಡಿಲ್ಲ, ಉಗ್ರಗಾಮಿಗಳನ್ನು ಸದೆ ಬಡಿಯುವುದರ ಮೂಲಕ ದೇದ ರಕ್ಷಣೆಯನ್ನು ಮಾಡಿದ್ದಾರೆ ಎಂದರು.

ಮತ್ತೋರ್ವ ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ ಮಾತನಾಡಿ, ಅಂದಿನ ಕಾಲದಲ್ಲಿ ಇಂದಿರಗಾಂಧಿಯವರ ಹೆಸರನ್ನು ಹೇಳಿಕೊಂಡು ಚುನಾವಣೆಯನ್ನು ನಡೆಸಲಾಗುತ್ತಿತು. ಇವರ ನಂತರ ಬಂದ ರಾಜೀವಗಾಂಧಿಯವರು ಸಹಾ ಉತ್ತಮವಾದ ಆಡಳಿತವನ್ನು ನೀಡಿದರು. ಗಾಂಧಿಯವರ ಮನೆತನ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ ಆದರೆ ಬಿಜೆಪಿಯವರು ಯಾರು ಸಹಾ ದೇಶಕ್ಕಾಗಿ ಪ್ರಾಣವನ್ನು ನೀಡಿಲ್ಲ, ಗಾಂಧಿ ಮನೆತನದ ತ್ಯಾಗ ಬಲಿದಾನದಿಂದ ದೇಶ ಉತ್ತಮವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜ್‌ಪೀರ್ ಮಾತನಾಡಿ, ಇಂದಿರಗಾಂಧಿ ಮತ್ತು ಸರ್ದಾರ ವಲ್ಲಬಾಯಿ ಪಟೇಲ್ ರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ದೇಶ ವಿಭಜನೆಯನ್ನು ವಿರೋಧಿಸಿ ಹೋರಾಟವನ್ನು ಮಾಡಿದರು. ಉಗ್ರವಾದಿಗಳನ್ನು ಬಗ್ಗು ಬಡಿದಿದ್ದಕ್ಕೆ ಅವರ ಪ್ರಾಣವನ್ನು ತೆಗೆಯಲಾಯಿತು. ಬಡತನ ನಿರ್ಮೂಲನೆಗಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಜಾರಿ ಮಾಡಿದರು.

ಗಾಂಧಿ ಕುಟುಂಬ ಅಧಿಕಾರ ಆಸೆಯನ್ನು ಇಟ್ಟುಕೊಂಡಿಲ್ಲ ಅಧಿಕಾರವನ್ನು ತ್ಯಾಗ ಮಾಡಿದ್ದಾರೆ. ಇಂದಿರಾಗಾಂಧಿಯವರ ಬಗ್ಗೆ ಪಕ್ಷದವರು ಸರಿಯಾದ ರೀತಿಯಲ್ಲಿ ತಿಳಿದುಕೊಂಡಾಗ ಬೇರೆಯವರಿಗೆ ತಿಳಿಸಲು ಸಹಾಯವಾಗುತ್ತದೆ ಎಂದರು.
ಸರ್ದಾರ್ ವಲ್ಲಬಾಯಿ ಪಟೇಲ್‌ರವರು ಉಕ್ಕಿನ ಮನುಷ್ಯರೆಂದು ಹೆಸರು ಪಡೆದಿದ್ದರು.

ಗೃಹ ಮಂತ್ರಿಯಾಗಿದ್ದಾಗ ಆರ್‌ಎಸ್‌ಎಸ್‌ನ್ನು ರದ್ದು ಮಾಡಿದ್ದರು. ತಮ್ಮ ಕರ್ತವ್ಯ ಸಮಯದಲ್ಲಿ ನಿರ್ಲಕ್ಷ್ಯವನ್ನು ವಹಿಸಿರಲಿಲ್ಲ, ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದರು ಎಂದು ತಾಜ್‌ಪೀರ್ ತಿಳಿಸಿದರು.

ನಾಯಕತ್ವ ಶಿಬಿರ :  ಇಂದಿನ  ಯುವ ಕಾರ್ಯಕರ್ತರಿಗೆ ಕಾಂಗ್ರೆಸ್ ಇತಿಹಾಸದ ಬಗ್ಗೆ ಮತ್ತು ಪಕ್ಷದ ಬಗ್ಗೆ ತಿಳಿಸಿಕೊಂಡುವ ಸಲುವಾಗಿ ನವಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರದುರ್ಗದಲ್ಲಿ ನಾಯಕತ್ವ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು, ಇದಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಪ್ರತ್ಯೇಕವಾಗಿ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಇದು ರಾಜ್ಯದಲ್ಲಿ ಶಿಬಿರಗಳನ್ನು ನಡೆಸಲು ಮುಂದಾಗಿದೆ ಈ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿಯೇ ಪ್ರಥಮ ಶಿಬಿರವಾಗಲಿ ಎನ್ನಲಾಗುತ್ತಿದ್ದು ಇದಕ್ಕಾಗಿ ನಿಜಲಿಂಗಪ್ಪರವರ ಸ್ಮಾರಕದ ಬಳಿ ಜಾಗವನ್ನು ಹನುಮಂತಪ್ಪರವರಿಗೆ ಕೇಳಲಾಗಿದೆ ಅವರು ಸಮ್ಮತಿಸಿದ ನಂತರ ಶಿಬಿರವನ್ನು ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಮೀನಾಕ್ಷಿ, ಚೋಟು, ಅಬ್ದುಲ್, ರವಿಕುಮಾರ್ ಎನ್.ಡಿ.ಕುಮಾರ್, ನರಸಿಂಹಮೂರ್ತಿ, ಭಾಗ್ಯಮ್ಮ, ಸುಧಾ, ರತ್ನಮ್ಮ ಇಂದಿರಾ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!