Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮುಕೇಶ್ ಅಂಬಾನಿಗೆ ಮೂರನೇ ಬಾರಿ ಬೆದರಿಕೆ : ರೂ.400 ಕೋಟಿಗೆ ಬೇಡಿಕೆ…!

Facebook
Twitter
Telegram
WhatsApp

ಸುದ್ದಿಒನ್ :  ಮುಖೇಶ್ ಅಂಬಾನಿ, ಭಾರತದ ದಿಗ್ಗಜ ಉದ್ಯಮಿ, ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಸರಣಿ ಬೆದರಿಕೆಗಳು ಬರುತ್ತಿವೆ. ಸೋಮವಾರ ಬೆಳಗ್ಗೆ ಮತ್ತೆ ಜೀವ ಬೆದರಿಕೆ ಬಂದಿದೆ. ಈ ಬೆದರಿಕೆ ಈ ಮೇಲ್

(e – mail) ಮೂಲಕ ಬಂದಿದೆ ಎಂದು ತಿಳಿದುಬಂದಿದೆ. ಈಗ ಆಗಂತುಕ ನೇರವಾಗಿ 400 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ. ಅಕ್ಟೋಬರ್ 27 ಮತ್ತು 28 ರಂದು ಬೆದರಿಕೆಗಳು ಬಂದ ವ್ಯಕ್ತಿಯಿಂದಲೇ ಮೇಲ್ ಬಂದಿದೆ. ನಿಮ್ಮ ಭದ್ರತೆ ಎಷ್ಟೇ ಬಲವಾಗಿದ್ದರೂ ನಮಗೆ ಅದು ಬೇಕಾಗಿಲ್ಲ. ನಮ್ಮ ಸ್ನಿಪರ್‌ಗಳಲ್ಲಿ ಒಬ್ಬರು ನಿಮ್ಮನ್ನು ಕೊಲ್ಲುತ್ತಾರೆ. ಈ ಬಾರಿ ನಮಗೆ ರೂ. 400 ಕೋಟಿ ಅಗತ್ಯವಿದೆ. ಪೊಲೀಸರಿಗೆ ನನ್ನ ಜಾಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಬಂಧಿಸಲೂ ಸಾಧ್ಯವಿಲ್ಲ’ ಎಂದು ಮೇಲ್‌ನಲ್ಲಿದೆ.

ಆಗಂತುಕರ ಸರಣಿ ಬೆದರಿಕೆಗಳ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸದ ಮುಂದೆ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅಕ್ಟೋಬರ್ 27 ರಂದು ಅಂಬಾನಿಗೆ ಮೊದಲ ಬೆದರಿಕೆ ಬಂದಿತ್ತು. ಆಗ ರೂ. 20 ಕೋಟಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಮ್ಮಲ್ಲಿ ಅತ್ಯುತ್ತಮ ಶೂಟರ್‌ಗಳು ಇದ್ದಾರೆ ಎಂದು ಈ ಮೇಲ್ ನಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈನ ಗಾಂದೇವಿ ಪೊಲೀಸ್ ಠಾಣೆಯಲ್ಲಿ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 387, 506(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಇದಾದ ನಂತರ ಅಕ್ಟೋಬರ್ 28 ರಂದು ಅಂಬಾನಿಗೆ ಎರಡನೇ ಬಾರಿಗೆ ಬೆದರಿಕೆ ಮೇಲ್ ಬಂದಿತ್ತು. ಈ ಬಾರಿ ಮೊದಲಿನ ಬೆದರಿಕೆಯನ್ನು ಕಡೆಗಣಿಸಲಾಗಿದ್ದು, ಸೂಕ್ತ ಸ್ಪಂದನೆ ದೊರೆಯದ ಕಾರಣ ಎಚ್ಚರಿಕೆ ನೀಡಿ ಶಂಕಿತ ಆರೋಪಿ ರೂ. 200 ಕೋಟಿಗೆ ಬೇಡಿಕೆ ಇಟ್ಟಿದ್ದ. ಇದೀಗ ಮೂರನೇ ಬಾರಿಗೆ ಬೆದರಿಕೆ ಬಂದಿದೆ.

ಆದರೆ ಅಂಬಾನಿಗೆ ಬೆದರಿಕೆಗಳು ಬಂದಿರುವುದು ಇದೇ ಮೊದಲಲ್ಲ. 2022 ರಲ್ಲಿ, ಅಪರಿಚಿತ ವ್ಯಕ್ತಿಯೊಬ್ಬರು ಸರ್ ಹೆಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆ ಮಾಡಿ ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಅದೇ ವರ್ಷದ ಆಗಸ್ಟ್‌ನಲ್ಲಿ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆಭರಣ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದರು.

ಈ ಹಿಂದೆ ಫೆಬ್ರವರಿ 2021 ರಲ್ಲಿ, ಅಂಬಾನಿ ಅವರ ಆಂಟಿಲಿಯಾ ನಿವಾಸದ ಮುಂದೆ ಸ್ಫೋಟಕಗಳನ್ನು ತುಂಬಿದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಪತ್ತೆಯಾಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇದೆಲ್ಲಾ ಮಾಡಿಸಿದ್ದು ಡಿಕೆಶಿ.. ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ : ವಕೀಲ ದೇವರಾಜೇಗೌಡ ಶಾಕಿಂಗ್ ಹೇಳಿಕೆ..!

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡರನ್ನು ಪೊಲೀಸರು ಅರೆಸ್ಟ್ ಮಾಡಿ, ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಇಂದು ಕೋರ್ಟ್ ಮುಂದೆ ದೇವರಾಜೇಗೌಡರನ್ನು ಹಾಜರುಪಡಿಸಿದ್ದರು. ಹೆಚ್ಚಿನ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರವನ್ನು ಕೆಡವಲಿದೆ : ನರೇಂದ್ರ ಮೋದಿ

ಸುದ್ದಿಒನ್ : ದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿದೆ. ಚುನಾವಣೆ ಅಂತಿಮ ಘಟ್ಟ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಮತ್ತು ಪ್ರತಿಪಕ್ಷಗಳು ಪರಸ್ಪರ ಟೀಕೆಗಳ ಮೂಲಕ ಪ್ರಚಾರದ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ

ಮೋದಿ ಬಗ್ಗೆ ಹೊಗಳಿದ್ದ ನಟಿ : ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ..!

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದಾರೆ ಮೋದಿ. ಈ ಮಧ್ಯೆ ರಶ್ಮಿಕಾ ಮಂದಣ್ಣ ಮೋದಿಯವರ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಚರ್ಚೆಗೆ ಬಂದಿದ್ದು, ಪರ-ವಿರೋಧ ಕೇಳಿ ಬರುತ್ತಿದೆ. ರಶ್ಮಿಕಾ

error: Content is protected !!