ಗದಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರ ಸರ್ಕಾರ ಹೊಸದಾಗಿ ಬಂದಾಗೆಲ್ಲಾ ಜೋರಾಗುತ್ತದೆ. ಇದೀಗ ಮತ್ತೆ ಹೋರಾಟ ಜೋರಾಗುವ ಸಾಧ್ಯತೆ ಇದೆ. ಮೀಸಲಾತಿಗಾಹಿ ಇಂದು ಗದಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಒತ್ತಾಯಿಸಿದ್ದಾರೆ. ಮೀಸಲಾತಿ ಹೋರಾಟಗಾರರು ಬಸವ ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಪೂಜೆ ಮಾಡಿದ್ದಾರೆ.
ಪಂಚಮಸಾಲಿಯವರ ನೋವು ಏನು ಎಂಬುದು ಸಚಿವ ಎಚ್ ಕೆ ಪಾಟೀಲ್ ಅವರಿಗೆ ಗೊತ್ತು. ಎಚ್ ಕೆ ಪಾಟೀಲ್ ಅವರಿಂದ ನಮಗೆ ಒಳ್ಳೆಯದ್ದೇ ಆಗುತ್ತೆ ಎಂಬ ಭರವಸೆ ಇದೆ. ಪಂಚಮಸಾಲಿ ಹೋರಾಟದಲ್ಲಿ ಬಂದು ಭಾಗಿಯಾಗಿದ್ದಾರೆ. ಸಿಎಂ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ.
ಆದರೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸುತ್ತೀವಿ ಅಂತ ಹೇಳಿ ಸುಮ್ಮನೆ ಆಗಿದ್ದಾರೆ. ಈಗ ಕಾನೂನು ಸಚಿವರೇ ಬಂದು ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸಬಹುದು ಎಂದುಕೊಂಡಿದ್ದೇನೆ. ಸಿಎಂ ಅವರಿಂದ ಪೂರಕವಾದ ಪ್ರತಿಕ್ರಿಯೆ ಬಂದರೆ ಶಾಂತಿಯುತ ಹೋರಾಟ ಮಾಡುತ್ತೇವೆ. ಪೂರಕವಾಗಿ ಬೆಳವಣಿಗೆಯಾಗದೆ ಹೋದರೆ ಇನ್ನುಳಿದ 26 ಜಿಲ್ಲೆಯಲ್ಲಿ ಹೋರಾಟ ಮಾಡುತ್ತೇವೆ. ನವೆಂಬರ್ ಒಳಗೆ ಒಂದು ಸುತ್ತಿನ ಮಾತುಕತೆ ನಡೆಯಬೇಕು. ಈ ಹಿಂದೆ ಬಿಜೆಪಿಯವರು ಕೂಡ ನಿರ್ಲಕ್ಷ್ಯ ಮಾಡಿದ್ದರು. ಪಂಚಮಸಾಲಿಯವರು ನಮ್ಮನ್ನು ಬಿಟ್ಟು ಇನ್ನೆಲ್ಲಿಗೆ ಹೋಗುತ್ತಾರೆ ಎಂದುಕೊಂಡಿದ್ದರು ಬಿಜೆಪಿಯವರು. ಆದರೆ ಈಗ 11 ಜನ ಗೆದ್ದಿದ್ದಾರೆ. ಇಬ್ಬರು ಮಂತ್ರಿಗಳಾಗಿದ್ದಾರೆ. ಈಗ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಮಾತುಕತೆ ನಡೆಸಬೇಕು, ಸಮಸ್ಯೆ ಸರಿಪಡಿಸಬೇಕು ಎಂದಿದ್ದಾರೆ.