ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ಇತಿಹಾಸ ಅಕಾಡೆಮಿಯ ಅತ್ಯುನ್ನತ ಇತಿಹಾಸ ಸಂಸ್ಕೃತಿ ಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಚಿತ್ರದುರ್ಗದ ಸಂಶೋಧಕ ಡಾ.ಬಿ.ರಾಜಶೇಖರಪ್ಪನವರನ್ನು ಅವರ ನಿವಾಸದಲ್ಲಿ ಕೋಟೆ ವಾಯುವಿಹಾರಿಗಳ ಸಂಘದಿಂದ ಸನ್ಮಾನಿಸಲಾಯಿತು.
ಬಿ.ರಾಜಶೇಖರಪ್ಪನರನ್ನು ಸನ್ಮಾನಿಸಿ ಮಾತನಾಡಿದ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಸಂಶೋಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ
ಬಿ.ರಾಜಶೇಖರಪ್ಪನವರು ಇನ್ನು ಹೆಚ್ಚು ಸಂಶೋಧನೆಗಳನ್ನು ಕೈಗೊಂಡು ಇತಿಹಾಸಕ್ಕೆ ನಿರಂತರ ಸೇವೆ ಸಲ್ಲಿಸುವಂತಾಗಲಿ. ಇವರ ಸೇವೆಯನ್ನು ಗುರುತಿಸಿ ಇತಿಹಾಸ ಅಕಾಡೆಮಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ಒಂದು ಲಕ್ಷ ರೂ. ನೀಡಿ ಗೌರವಿಸುತ್ತಿರುವುದು ಚಿತ್ರದುರ್ಗಕ್ಕೆ ಸಂದ ಕೀರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ರಾಜಶೇಖರಪ್ಪವರು ಅಪಾರ ಅಭಿಮಾನಿಗಳು ನನ್ನ ಮೇಲೆ ಗೌರವವಿಟ್ಟು ಸನ್ಮಾನಿಸುತ್ತಿರುವುದಕ್ಕೆ ಚಿರಋಣಿಯಾಗಿದ್ದೇನೆ. ನ.7 ರಂದು ಇತಿಹಾಸ ಅಕಾಡೆಮಿ ಪಾವಗಡದಲ್ಲಿ ಪ್ರದಾನ ಮಾಡಲಿರುವ ಇತಿಹಾಸ ಸಂಸ್ಕøತಿಶ್ರಿ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸ್ಮಾರಕಗಳ ಸಂರಕ್ಷಣಾ ಸಮಿತಿಯನ್ನು ಪುನರ್ ರಚಿಸುವ ಅಗತ್ಯವಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸದಾ ಸಂಶೋಧನೆಯಲ್ಲಿ ತೊಡಗಿರುತ್ತೇನೆಂದು ಹೇಳಿದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡಿ ಸಂಶೋಧನೆಯ ಮೂಲಕವೇ ಮನೆ ಮಾತಾಗಿರುವ ಡಾ.ಬಿ.ರಾಜಶೇಖರಪ್ಪನವರಿಗೆ ಇತಿಹಾಸ ಅಕಾಡೆಮಿ ನೀಡುವ ಅತ್ಯುನ್ನತ ಇತಿಹಾಸ ಸಂಸ್ಕøತಿಶ್ರಿ ಪ್ರಶಸ್ತಿ ಸಿಕ್ಕಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇನ್ನು ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಭಗವಂತ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಇತಿಹಾಸ ಸಂಸ್ಕøತಿಶ್ರಿ ಪ್ರಶಸ್ತಿ ಸಿಕ್ಕಿರುವುದು ನಿಮ್ಮ ಸಂಶೋಧನೆಗೆ ತಕ್ಕ ಫಲ. ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಆಶಿಸಿದರು.
ಇಂದೂಶೇಖರ್, ಶ್ರೀಮತಿ ಯಶೋಧ ಬಿ.ರಾಜಶೇಖರಪ್ಪ ಈ ಸಂದರ್ಭದಲ್ಲಿದ್ದರು.