ಬಿಗ್ ಬಾಸ್ ಮನೆಯಲ್ಲಿ ಗಾದೆ ಮಾತುಗಳ ಬೋರ್ಡ್ ಗಳ ಬದಲಾವಣೆಯಾಗಿತ್ತು. ಈ ವಾರವೂ ಗಾದೆ ಮಾತುಗಳ ಆಟ ಮುಂದುವರೆದಿದೆ. ಕಿಚ್ಚ ಸುದೀಪ್ ಕಳೆದ ಬಾರಿ ಹಾಕಿದ್ದಂತ ಗಾದೆ ಮಾತುಗಳ ಬೋರ್ಡ್ ಅನ್ನು ಸ್ಟೋರ್ ರೂಮಿನಿಂದ ತರುವುದಕ್ಕೆ ಹೇಳಿದ್ದಾರೆ. ಕಳೆದ ಬಾರಿ ಯಾರಿಗೆ ಯಾವ ಗಾದೆ ಸಿಕ್ಕಿತ್ತೋ, ಅದೇ ಬೋರ್ಡ್ ಹಾಕಿಕೊಳ್ಳಲು ಹೇಳಿದ್ದಾರೆ.
ತುಕಾಲಿ ಸಂತೂ ಅಂದರೆ ಎಲ್ಲದರಲ್ಲೂ ಮುಂದೆ ಇರುತ್ತಾರೆ. ಈಗ ಬೋರ್ಡ್ ವಿಚಾರದಲ್ಲೂ ಅಷ್ಟೇ. ಕೆಲವರಿಗೆ ಕಳೆದ ಬಾರಿ ಬೀಳದ ಬೋರ್ಡ್ ಬಿದ್ದಿದೆ. ಕೆಲವೊಬ್ಬರ ಕೊರಳು ಖಾಲಿ ಆಗಿದೆ. ಆದರೆ ತುಕಾಲಿ ಸಂತೂ ಕೊರಳಲ್ಲಿದ್ದ ಬೋರ್ಡ್ ಖಾಲಿ ಆದರೂ ಮತ್ತೆ ಹೊಸದಾಗಿಯೂ ಅಷ್ಟೇ ಬೋರ್ಡಗ ಬಿದ್ದಿದೆ. ‘ಆರು ಕೊಟ್ಟರೆ ಅತ್ತೆ ಕಡೆಗೆ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ, ಮೂರು ಬಿಟ್ಟವ ಊರಿಗೆ ದೊಡ್ಡವ’ ಎಂಬ ಗಾದೆಗಳು ಸಂತೂ ಪಾಲಾಗಿದೆ.
ಇನ್ನು ಈ ವಾರ ಬೋರ್ಡ್ ಗಳ ಬದಲಾವಣೆಯಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ, ಉತ್ತರನ ಪೌರುಷ ಒಲೆ ಮುಂದೆ: ಕಾರ್ತೀಕ್, ಕಳ್ಳನಿಗೊಂದು ಪಿಳ್ಳೆ ನೆವ : ನೀತೂ, ಭೂಮಿಗೆ ಭಾರ ಕೂಳಿಗೆ ದಂಡ, ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ : ನಮ್ರತಾ, ಬೊಗಳೋ ನಾಯಿ ಕಚ್ಚಲ್ಲ : ಸ್ನೇಹಿತ್, ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ : ವಿನಯ್, ಬೆಳಗಿರೋದೆಲ್ಲ ಹಾಲಲ್ಲ : ತನಿಷಾ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು : ರಕ್ಷಕ್, ಕುಣಿಯುವುದಕ್ಕೆ ನೆಲ ಡೊಂಕು ಎಂದ : ಸಿರಿ, ಆರಕ್ಕೇರಲ್ಲ ಮೂರಕ್ಕೆ ಇಳಿಯಲ್ಲ : ರಕ್ಷಕ್, ಅರ್ಧ ಕಲಿತವನ ಅಬ್ಬರ ಜಾಸ್ತಿ : ಕಾರ್ತೀಕ್ ಗಾದೆ ಮಾತುಗಳು ಬದಲಾವಣೆಯಾಗಿದೆ.
ಕಿಚ್ಚನ ಪಂಚಾಯತಿ ಮುಗಿದ ಮೇಲೆ ಸಿರಿ ಬಳಿ ಬಂದ ನಮ್ರತಾ, ನಿಮಗೆ ನೀಡಿದ ಗಾದೆ ಮಾತು ಸರಿ ಅನ್ನಿಸುತ್ತಾ ಎಂದು ಕೇಳಿದ್ದಾರೆ. ಅದೇ ಕ್ಷಣಕ್ಕೆ ಅಲ್ಲಿಗೆ ನೀತೂ ಬಂದಿದ್ದಾರೆ. ಸಿರಿಗೆ ಕುಣಿಯುವುದಕ್ಕೆ ನೆಲ ಡೊಂಕು ಅಂದ್ರು ಎಂಬ ಗಾದೆ ಮಾತನ್ನು ನೀತೂರೇ ಕೊಟ್ಟಿದ್ದು. ನಮ್ರತಾ ಎತ್ತಿದ ವಿಚಾರಕ್ಕೆ ಇಬ್ಬರ ನಡುವೆ ವಾದ ಪ್ರತಿವಾದ ಶುರುವಾಗಿದೆ. ಸಿರಿ ಡೌಟ್ ಕೇಳಿದರೆ ನೀತೂ ವಿವರಣೆ ನೀಡುತ್ತಾ ಇದ್ದರು.