ಸುದ್ದಿಒನ್, ಚಿತ್ರದುರ್ಗ : ಹಲವು ಕಡೆ ಹಲವು ರೀತಿಯ ಆಚರಣೆಗಳು ಇರುತ್ತವೆ. ದೇವರ ಉತ್ಸವದಲ್ಲಿ ನಾನಾ ರೀತಿಯ ಆಚರಣೆಗಳು ವಾಡಿಕೆಯಲ್ಲಿವೆ. ಹಿರಿಯೂರು ತಾಲೂಕಿನ ಬಾಲೇನಹಳ್ಳಿಯಲ್ಲಿ ಶನಿವಾರ ಶ್ರೀದೇವಿ ಗೊಲ್ಲಾಳಮ್ಮ ಜಾತ್ರೆ ನಡೆಯಿತು. ಗ್ರಾಮಕ್ಕೆ ಸೊಸೆಯಾಗಿ ಬಂದವರು ದೇವರ ಜಾತ್ರೆಯ ಕೊನೆಯ ದಿನದಂದು ಭಂಡಾರ ಉತ್ಸವ ನಡೆಯುತ್ತದೆ ಅಂದು ಗ್ರಾಮದ ಸೊಸೆಯಂದಿರು ಕುಣಿಯುವುದು ಇಲ್ಲಿನ ವಿಶೇಷ.
ದಸರಾ ಮಹೋತ್ಸವದ ಅಂಗವಾಗಿ ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಜಾತ್ರಾ ಮಹೋತ್ಸವದ ಕೊನೆಯ ದಿನ ಊರಿನ ಸೊಸೆಯಂದಿರೆಲ್ಲಾ ಸೇರಿ ದೇವಿಯ ಮುಂದೆ ಬೇವಿನ ಸೊಪ್ಪು ಹಿಡಿದು ಕುಣಿಯುವುದು ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.
ಗೊಲ್ಲಾಳಮ್ಮ ಜಾತ್ರೆಯಲ್ಲಿ ಸೊಸೆಯಂದಿರ ಈ ನೃತ್ಯ ಎಲ್ಲರ ಗಮನ ಸೆಳೆದಿದೆ. ಪ್ರತಿ ವರ್ಷವೂ ಎಲ್ಲರೂ ಈ ಜಾತ್ರೆಯಲ್ಲಿ ಸೇರಿ, ಹಬ್ಬ ಆಚರಿಸಿ, ಕೊನೆಯಲ್ಲಿ ಕುಣಿದು ಕುಪ್ಪಳಿಸಿ, ದೇವಿಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.