ಸುದ್ದಿಒನ್ : ಬಹುನಿರೀಕ್ಷಿತ BSNL 4G ಸೇವೆಗಳನ್ನು ಈ ವರ್ಷದ ಡಿಸೆಂಬರ್‌ನಿಂದ ಆರಂಭಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಪಿಕೆ ಪುರ್ವಾರ್ ಶನಿವಾರ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ, ಪಂಜಾಬ್‌ನ ಕೆಲವು ಸ್ಥಳಗಳಲ್ಲಿ ಈ ಸೇವೆಗಳನ್ನು ಪ್ರಾರಂಭಿಸಲಾಗುವುದು ನಂತರ ಹಂತ ಹಂತವಾಗಿ ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು. ಈಗಾಗಲೇ 200 ಸ್ಥಳಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಜೂನ್ 2024 ರ ವೇಳೆಗೆ ದೇಶಾದ್ಯಂತ 4G ಸೇವೆಗಳನ್ನು ಒದಗಿಸುವ ಗುರಿಯನ್ನು BSNL ಹೊಂದಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು 4ಜಿಗೆ ಬಳಸಿಕೊಳ್ಳಲಾಗಿದೆ. 4G ವಿಸ್ತರಣೆ ಪೂರ್ಣಗೊಂಡ ನಂತರ 5G ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು BSNL ಹೇಳಿದೆ.
BSNL 4G ನೆಟ್‌ವರ್ಕ್ ಅನ್ನು 5G ಗೆ ಅಪ್‌ಗ್ರೇಡ್ ಮಾಡುವ ಜವಾಬ್ದಾರಿಯನ್ನು ಪ್ರಮುಖ ಐಟಿ ಕಂಪನಿ TCS ಮತ್ತು ಸಾರ್ವಜನಿಕ ವಲಯದ ITI ಗೆ ವಹಿಸಲಾಗಿದೆ ಎಂದು ತಿಳಿದಿದೆ.