ನಾವೂ ಬಿಜೆಪಿಯವರ ಬಗ್ಗೆ ಹುಷಾರಾಗಿರಬೇಕು : ಸತೀಶ್ ಜಾರಕಿಹೊಳಿ ಹಿಂಗಂದಿದ್ಯಾಕೆ..?

1 Min Read

 

ಬೆಂಗಳೂರು: ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿರುವುದರ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ನಾವೂ ಬಿಜೆಪಿಯವರ ಬಗ್ಗೆ ಹುಷಾರಾಗಿ ಇರಬೇಕು ಎಂದು ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳ ಕಾಲ ನಾವೂ ಹುಷಾರಾಗಿರಬೇಕು. ಬಿಜೆಪಿಯವರಿಂದ ಆಪರೇಷನ್ ಕಮಲ ನಡೆಯುತ್ತಲೇ ಇರುತ್ತದೆ. ಈಗಾಗಲೇ ನಮ್ಮ‌ ಕೆಲ ಶಾಸಕರಿಗೆ ಬಿಜೆಪಿಯಿಂದ ಆಫರ್ ಬಂದಿದ್ದರು ಬಂದಿರಬಹುದು ಎಂದಿದ್ದಾರೆ. ಯಾಕೆಂದರೆ ಕಳೆದ‌ ಕೆಲ ದಿನಗಳಿಂದ ಆಪರೇಷನ್ ಕಮಲದ ವಚಾರವಾಗಿ ಸಾಕಷ್ಟು ಗಾಳಿಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿ ಈ ವಿಚಾರವಾಗಿ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ.

ಇನ್ನು ಪರಮೇಶ್ವರ್ ಮನೆಯಲ್ಲಿ ಊಟದ ವಿಚಾರವಾಗಿ ಮಾತನಾಡಿ, ಅಲ್ಲಿ ಭರ್ಜರಿ ಊಟ ಇತ್ತು. ಅದನ್ನು ಬಿಟ್ಟರೆ ಬೇರೆ ಏನು ಇರಲಿಲ್ಲ. ಪರಸ್ಪರ ಮಾತನಾಡಿಕೊಂಡೆವು, ರಾಜಕೀಯ ಚರ್ಚೆ ಏನು ಇರಲಿಲ್ಲ ಎಂದಿದ್ದಾರೆ. ಇದೇ ವೇಳೆ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಆಗುತ್ತಾರೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಸಕ ರವಿಗಾಣಿಗ ಹೇಳಿದ ಬಳಿಕ ರಾಜ್ಯ ರಾಜಕೀಯದಲ್ಲಿ ಚರ್ಚಾ ವಿಷಯವಾಗಿದೆ. ಈ ವಿಷಯದ ಬಗ್ಗೆ ಮಾತನಾಡಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನ ಹೈಕಮಾಂಡ್ ಸ್ಪಷ್ಟಪಡಿಸಬೇಕು. ಆ ನಿರ್ಣಯ ಕೈಗೊಳ್ಳುವ ಶಕ್ತಿ ಇರುವುದು ಅವರಿಗೇನೆ. ಅದು ನಮ್ಮ ಕೈನಲ್ಲಿ ಇಲ್ಲ, ಇದ್ದಿದ್ದರೆ ಹೇಳುತ್ತಾ ಇದ್ದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *