ಬೆಂಗಳೂರು: ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದರು ಎಂಬ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದಾನೇ ಅವರನ್ನು ಅರಣ್ಯಾಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೂ ನೀಡಲಾಗಿತ್ತು. ಬಳಿಕ ವರ್ತೂರು ಪರ ವಕೀಲರು ಜಾಮೀನಿಗೂ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ವರ್ತೂರು ಸಂತೋಷ್ ಬಂಧನವನ್ನು ಪ್ರಶ್ನಿಸಿ ಜಾಮೀನಿಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೋರ್ಟಗ ಅರ್ಜಿ ವಿಚಾರಣೆ ನಡೆಸಿದ ಬಳಿಕ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಮತ್ತೆ ಆ ಅರ್ಜಿ ವಿಚಾರಣೆಗೆ ಬರಲಿದ್ದು, ಆದೇಶ ಹೊರ ಬೀಳುವ ಸಾಧ್ಯತೆ ಇದೆ.
ಈ ಸಂಬಂಧ ವರ್ತೂರು ಸಂತೋಷ್ ಪರ ವಕೀಲ ಕೆ ನಟರಾಜನ್ ಮಾತನಾಡಿದ್ದು, ಸೆಲೆಬ್ರೆಟಿಗಳಿಗೆ ನೋಟೀಸ್ ಕೊಟ್ಟಿದ್ದಾರೆ. ಆದರೆ ವರ್ತೂರು ಸಂತೋಷ್ ಗೆ ಮಾತ್ರ ಯಾವ ನೋಟೀಸ್ ಕೂಡ ನೀಡಿಲ್ಲ. ಏಕಾಏಕಿ ಅವರನ್ನು ಬಂಧಿಸಿದ್ದಾರೆ. ಸಂತೋಷ್ ಕೃಷಿಕರು. ಅವರ ಮೇಲೆ ಯಾವುದೇ ಅಪರಾಧಗಳಿಲ್ಲ. ಅರಣ್ಯಾಧಿಕಾರಿಗಳ ಕ್ರಮ ಸರಿಯಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಇವತ್ತು ಜಾಮೀನು ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇನ್ನು ವರ್ತೂರು ಸಂತೋಷ್ ಹುಲಿ ಉಗುರಿನ ಪ್ರಕರಣದಲ್ಲಿ ಯಾವಾಗ ಬಂಧಿತರಾದರೋ ಅಂದಿನಿಂದ ಸೆಲೆಬ್ರೆಟಿಗಳಿಗೂ ಕಂಟಕ ಶುರುವಾಗಿತ್ತು. ಈಗಾಗಲೇ ಹಲವು ಕೇಸ್ ಗಳು ದಾಖಲಾಗಿವೆ. ಹಲವು ಪೆಂಡೆಂಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಕೂಡ ನಡೆಯುತ್ತಿದೆ. ಬೇರೆ ಬೇರೆ ಕಡೆಗಳಲ್ಲೂ ಹುಲಿ ಉಗುರಿನ ಪತ್ತೆಯಾಗುತ್ತಿದೆ. ಅರಣ್ಯಾಧಿಕಾರಿಗಳು ಈ ಮೂಲಕ ಹೈ ಅಲರ್ಟ್ ಆಗಿದ್ದಾರೆ. ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಸಿಕ್ಕಿದ್ದು ಒರಿಜಿನಲ್ ಅಲ್ಲ ಎಂಬುದು ಈ ಮಧ್ಯೆ ತಿಳಿದು ಬಂದಿದೆ.