ನಟ ಜಗ್ಗೇಶ್ ಮನೆಯಲ್ಲಿ ಕಡೆಗೂ ಸಿಕ್ತು ಹುಲಿ ಉಗುರಿನ ಪೆಂಡೆಂಟ್..!

 

ಬೆಂಗಳೂರು: ವರ್ತೂರು ಸಂತೋಷ್ ಮೈಮೇಲೆ ಹುಲಿ ಉಗುರು ಸಿಕ್ಕಾಗಿನಿಂದ ರಾಜ್ಯದೆಲ್ಲೆಡೆ ಹುಲಿ ಉಗುರಿನ ಚರ್ಚೆಯೇ ಶುರುವಾಗಿದೆ. ಅದರಲ್ಲೂ ಹುಲಿ ಉಗುರಿನ ಪೆಂಡೆಂಟ್ ಹೊಂದಿರುವವರು ಹೆಚ್ಚಿನದಾಗಿ ಸೆಲೆಬ್ರೆಟಿಗಳ ಹೆಸರೇ ಹೊರಗೆ ಬರುತ್ತಿದೆ. ಸದ್ಯಕ್ಕೆ ಓಪನ್ ಆಗಿ ಇದು ರಿಯಲ್ ಹುಲಿ ಉಗುರು ಎಂದು ಸ್ಟೇಟ್ಮೆಂಟ್ ನೀಡಿದ್ದಂತ ನಟ ಜಗ್ಗೇಶ್ ಅವರ ಮನೆಗೆ ಅರಣ್ಯಾಧಿಕಾರಿಗಳು ತೆರಳಿದ್ದರು. ಕೊನೆಗೂ ಆ ಪೆಂಡೆಂಟ್ ಸಿಕ್ಕಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಹುಡುಕಿದ ಮೇಲೆ ಪೆಂಡೆಂಟ್ ಸಿಕ್ಕಿದೆ.

ಈ ಬಗ್ಗೆ ಡಿಸಿಎಫ್ ರವೀಂದ್ರ ಕುಮಾರ್ ಮಾತನಾಡಿ, ನಟ ಜಗ್ಗೇಶ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಲಾಕೆಟ್ ಕೂಡ ಸಿಕ್ಕಿದೆ. ಅದನ್ನು ಪರಿಶೀಲನೆಗೆ ಕಳುಹಿಸಲಾಗುವುದು. ಅವರು ಕೂಡ ಮಾಹಿತಿ ನೀಡಿದ್ದಾರೆ. ಮಹಜರು ಮಾಡಿದ್ದೇವೆ. ವಿಚಾರಣೆಗೆ ಇನ್ನೂ ಕರೆದಿಲ್ಲ. ಈ ಲಾಕೆಟ್ ನಲ್ಲಿರುವುದು ಯಾವ ಪ್ರಾಣಿಯ ಉಗುರು ಎಂದು ಪರಿಶೀಲನೆ ಮಾಡಿತ್ತೇವೆ. ಒಂದು ವೇಳೆ ಒರಿಜಿನಲ್ ಹುಲಿಯ ಉಗುರೇ ಆಗಿದ್ದರೆ, ನ್ಯಾಯಾಂಗದಲ್ಲಿ ಇದ್ದ ಹಾಗೇ ಕ್ರಮ ತೆಗೆದುಕೊಳ್ಳುತ್ತೇವೆ.

ವರ್ತೂರು ಸಂತೋಷ್ ವಿಚಾರದಲ್ಲಿ ಅದು ಒರಿಜಿನಲ್ ಎಂಬುದು ಗೊತ್ತಾಗಿತ್ತು. ಹೀಗಾಗಿ ಅವರನ್ನು ವಶಕ್ಕೆ ಪಡೆದಿದ್ದೇವೆ. ಇವರ ವಿಚಾರದಲ್ಲಿ ಅದು ಇನ್ನು ಪ್ರೂವ್ ಆಗಿಲ್ಲ. ಇದನ್ನು ಅವರ ತಾಯಿ ಕೊಟ್ಟಿರುವುದು ಎಂದು ಹೇಳುತ್ತಿದ್ದಾರೆ. ಈಗಾಗಲೇ ದರ್ಶನ್, ರಾಕ್ಲೈನ್, ನಿಖಿಲ್ ಅವರ ಮನೆಯಲ್ಲೂ ತಪಾಸಣೆಯಾಗುತ್ತಿದೆ. ತಪಾಸಣೆಗೆ ಕಳುಹಿಸುತ್ತೇವೆ. ನಂತರದಲ್ಲಿ ಕಾನೂನು ಕ್ರಮದ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬೊಬ್ಬರದ್ದೇ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Share This Article
Leave a Comment

Leave a Reply

Your email address will not be published. Required fields are marked *