ಬೆಳಗಾವಿ ರಾಜಕಾರಣದಲ್ಲಿ ಇತ್ತಿಚೆಗೆ ಕೊಂಚ ಏರುಪೇರಾಗಿತ್ತು. ಸತೀಶ್ ಜಾರಕಿಹೊಳಿ ಶಾಸಕರೊಂದಿಗೆ ಪ್ರವಾಸ ಹೊರಟಿದ್ದರು. ಆದರೆ ಅದು ಆಮೇಲೆ ನಿಂತಿತ್ತು. ಈ ಮುನಿಸಿನ ಬಗ್ಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಸತೀಶ್ ಜಾರಕಿಹೊಳಿ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆ ಮಾತಿಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಸಹೋದರ ಮಾಡಿರುವ ಆರೋಪವನ್ನು ಸತೀಶ್ ಜಾರಕಿಹೊಳಿ ತಳ್ಳಿ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ನನಗೆ ಯಾವುದೇ ಹಿಂಸೆ ಆಗಿಲ್ಲ. ನನಗೆ ಯಾವುದೇ ತೊಂದರೆ ಆಗಿಲ್ಲ. ಇದುವರೆಗೂ ಯಾವುದೇ ಕಿರುಕುಳ ಆಗಿಲ್ಲ. ನಮ್ಮದು ಯಾವ ಬಂಡಾಯವೂ ಇಲ್ಲ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಬಂಡಾಯವೆದ್ದಿದ್ದ ಕಾರಣ, ಡಿಸಿಎಂ ಡಿಕೆ ಶಿವಕುಮಾರ್, ಯಾರು ನೇರವಾಗಿ ಪಕ್ಷದ ಮಾತನಾಡುವಂತೆ ಇಲ್ಲ ಎಂಬ ಸೂಚನೆ ನೀಡಿದ್ದರು. ಆ ಬಳಿಕ ಸತೀಶ್ ಜಾರಕಿಹೊಳಿಯೂ ಸುಮ್ಮನೆ ಆಗಿದ್ದರು.
ಇನ್ನು ಇದೇ ವೇಳೆ ಕಾರ್ಣಿಕದ ಬಗ್ಗೆ ಮಾತನಾಡಿದ್ದಾರೆ, ನಾನು ಅದನ್ನು ನಂಬಲ್ಲ. ಇದು ಹಳೆಯದ್ದು ಇರಬೇಕು. ಹೊಸ ವಿಚಾರ ಅಲ್ಲ ಎನಿಸುತ್ತದೆ ಎಂದಿದ್ದಾರೆ. ಹೆಣ್ಣಿನ ಕಂಟಕದಿಂದ ಸರ್ಕಾರಕ್ಕೆ ಕಂಟಕ ಎಂದು ಮೈಲಾರ ಕಾರ್ಣೀಕ ನುಡಿದಿತ್ತು.