Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೈಜ ಬದುಕಿನ ಸನ್ನಿವೇಶಗಳಿಗೆ ರಂಗಭೂಮಿ ಕೈಗನ್ನಡಿ : ರಂಗನಿರ್ದೇಶಕ ಸಾಂಬಶಿವ ದಳವಾಯಿ

Facebook
Twitter
Telegram
WhatsApp
  • ಚಿತ್ರದುರ್ಗದ ತರಾಸು ರಂಗಮಮದಿರದಲ್ಲಿ ಶನಿವಾರ ಹಾಸನದ ರಂಗಹೃದಯ ತಂಡ ಕಲಾವಿದೆ ಪೂಜಾ ರಘುನಂದನ್ ಅವರು ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗ ಪ್ರದರ್ಶನ ನೀಡಿದರು.

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.22 : ಅಮೂರ್ತ ಸ್ವರೂಪಗಳಿಗೆ ಮೂರ್ತಸ್ವರೂಪವನ್ನು ನೀಡುವ ಮಾಧ್ಯಮವೆಂದರೆ ಅದು ರಂಗಭೂಮಿ ಮಾತ್ರ. ನೈಜ ಬದುಕಿನ ಸನ್ನಿವೇಶಗಳಿಗೆ ರಂಗಭೂಮಿ ಕೈಗನ್ನಡಿಯಾಗಿದೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಹಾಗೂ ಹಿರಿಯ ರಂಗನಿರ್ದೇಶಕ ಸಾಂಬಶಿವ ದಳವಾಯಿ ಅಭಿಪ್ರಾಯಪಟ್ಟರು.

ನಗರದ ತ.ರಾ.ಸು ರಂಗಮಂದಿರದಲ್ಲಿ ಶನಿವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಾದರದಿನ್ನಿ ರಂಗೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾತಿಗೆ ಮಾತು ಬೆಳೆದು ಮನುಷ್ಯತ್ವವನ್ನು ಕಳೆದುಕೊಂಡಿರುವ ಮಾನವ ಕುಲಕ್ಕೆ ಪರಿಹಾರವನ್ನು ಕಂಡುಕೊಡುವ ರಂಗಭೂಮಿಯನ್ನು ಪೋಷಿಸಬೇಕಾಗಿದೆ. ಮರೆಯಾಗುತ್ತಿರುವ ಜೀವನ ಮೌಲ್ಯಗಳನ್ನು ಕುರಿತು ನಾಟಕ ಪ್ರದರ್ಶನಗಳ ಮೂಲಕ ಅಭಿವ್ಯಕ್ತಿಗೊಳಿಸುವ ಕಲಾವಿದರ ಶ್ರಮವನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಇಂತಹ ಕೆಲಸ ಮಾಡುವ ಆಸಕ್ತಿ ಇರುವ ರಂಗ ತಂಡಗಳಿಗೆ ಪೋಷಕರು ಸಹಕಾರ ನೀಡಬೇಕು ಎಂದರು.

ಹಿರಿಯ ಕಲಾವಿದ ಆರ್.ಶೇಷಣ್ಣ ಕುಮಾರ್ ಮಾತನಾಡಿ, ನಗರದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ರಚನಾ ಕಲಾ ತಂಡದ ಸಂಸ್ಥಾಪಕ ಎಚ್.ತಿಪ್ಪೇಸ್ವಾಮಿ ಅನೇಕ ಹಿರಿಯ ರಂಗ ನಿರ್ದೇಶಕರನ್ನು ಚಿತ್ರದುರ್ಗಕ್ಕೆ ಪರಿಚಯಿಸಿದರು. ಹೆಸರಾಂತ ನಾಟಕಗಳನ್ನು ಮಾಡಿಸುವ ಮೂಲಕ ಅಂದು ರಂಗಭೂಮಿಯನ್ನು ಬೆಳೆಸಿದರು. ಕಂಬಾರರ ಜೈಸಿದನಾಯ್ಕ ಹಾಗೂ ಒಂದು ಸಾವಿನ ಸುತ್ತ ನಾಟಕವನ್ನು ನಿರ್ದೇಶನ ಮಾಡಿ ಜನಮಾನಸದಲ್ಲಿ ನೆಲಸಿದ್ದಾರೆ ಎಂದರು.

ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ, ಅಶೋಕ ಬಾದರದಿನ್ನಿ ಅವರು ಕರ್ನಾಟಕದಾದ್ಯಂತ ಅನೇಕ ರಂಗತಂಡಗಳಿಗೆ ಪ್ರಥಮರಾಗಿ ರೂಪಕ ಮತ್ತು ನಾಟಕಗಳನ್ನು ರಚಿಸಿ ರೂಪಕಗಳ ರಾಜ ಎಂದು ಹೆಸರು ಗಳಿಸಿದ್ದರು. ಇಲ್ಲಿನ ತರಾಸು ರಂಗಮಂದಿರದ ಅವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಅವರ ಆಶಯದಂತೆ ಇಂದಿಗೂ ಕೂಡ ರಂಗಮಂದಿರ ಚಿತ್ರದುರ್ಗದಲ್ಲಿ ವ್ಯವಸ್ಥಿತವಾಗಿ ರೂಪುಗೊಳ್ಳುವಲ್ಲಿ ವಿಫಲವಾಗಿದೆ. ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ, ಸಮರ್ಪಕ ಆಸನಗಳು ಮುಂತಾದ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಗಮನಹರಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಂಗಕರ್ಮಿ ಸಿ.ಪಿ.ಜ್ಞಾನದೇವ ಉಪಸ್ಥಿತರಿದ್ದು,  ಬಾದರದಿನ್ನಿ ಅವರ ಕನಸಾಗಿದ್ದ ಹಳೆಗನ್ನಡದ ರನ್ನನ ಗದಾಯುದ್ಧ ನಾಟಕವನ್ನು ನನ್ನಿಂದ ಬರೆಸಿ, ಉತ್ತರ ಕರ್ನಾಟಕದ ಕಲಾವಿದರಿಗೆ ನಿರ್ದೇಶನ ನೀಡಿ, ನಾಡಿನಾದ್ಯಂತ ಅಮೋಘ ಪ್ರದರ್ಶನ ನೀಡಿದ ಹೆಗ್ಗಳಿಕೆ ಬಾದರದಿನ್ನಿ ಇವರಿಗೆ ಸಲ್ಲುತ್ತದೆ ಎಂದರು.

ಗಾಯಕ ಡಿ.ಓ.ಮುರಾರ್ಜಿ ಮಾತನಾಡಿ, ಎಲೆಮರೆಯಾಗಿದ್ದ ರಂಗಾಸಕ್ತ ಕಲಾವಿದರನ್ನ ಹುಟ್ಟುಹಾಕಿ ಅವರಿಂದ ಹಲವಾರು ನಾಟಕಗಳನ್ನು ಮಾಡಿಸಿದ ಕೀರ್ತಿ ಅಶೋಕ ಬಾದರದಿನ್ನಿ ಅವರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹಾಸನದ ರಂಗಹೃದಯ ತಂಡ ಕಲಾವಿದೆ ಪೂಜಾ ರಘುನಂದನ್ ಅವರು ಕೃಷ್ಣಮೂರ್ತಿ ಕವಾತ್ತಾರ್ ನಿರ್ದೇಶನದಲ್ಲಿ ತಾಯಿಯಾಗುವುದೆಂದರೆ ಎಂಬ ಏಕವ್ಯಕ್ತಿ ರಂಗ ಪ್ರದರ್ಶನ ನೀಡಿ ಜನಮನ್ನಣೆ ಪಡೆದರು.

ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಹಿರಿಯ ಕಲಾವಿದ ಎಂ.ಕೆ.ಹರೀಶ್, ಹಿರಿಯ ಸಾಹಿತಿ ಜಿ.ಎಸ್.ಉಜ್ಜಿನಪ್ಪ, ಸಂಶೋಧಕ ಮೃತ್ಯುಂಜಯಪ್ಪ, ಹಾಸ್ಯ ಸಾಹಿತಿ ಪರಮೇಶ್ವರಪ್ಪ ಕುದರಿ, ರೆಡ್‍ಕ್ರಾಸ್ ಸಂಸ್ಥೆಯ ಮುಜಹರ್, ವಿ.ಶ್ರೀನಿವಾಸ, ಕಲಾವಿದ ಶ್ರೀಕುಮಾರ್.ಡಿ ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!