Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಶೋಕ್‍ಬಾದರದಿನ್ನಿ ಅವರಲ್ಲಿದ್ದ ಅಘಾದವಾದ ಪ್ರತಿಭೆ ಇನ್ನು ಜೀವಂತವಾಗಿದೆ : ಶ್ರೀ ಮಾದಾರ ಚನ್ನಯ್ಯಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.20  : ರಂಗಭೂಮಿ ಕಲೆಗೆ ಜಾತಿ, ಮತ, ಧರ್ಮ, ಪಂಥದ ಸೋಂಕಿಲ್ಲ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು.

ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ಆರಂಭಗೊಂಡ ಬಾದರದಿನ್ನಿ ರಂಗೋತ್ಸವ ಎರಡು ದಿನಗಳ ರಂಗ ಸಂಗೀತ ನಾಟಕಗಳ ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದರು.

ಅಶೋಕ್‍ಬಾದರದಿನ್ನಿಯವರಲ್ಲಿ ನಿಖರವಾದ ವಿಚಾರಧಾರೆಯಿತ್ತು. ಅವರ ರೂಪಕ, ನಾಟಕಗಳು ಇಂದಿಗೂ ಪ್ರಖ್ಯಾತಿಯನ್ನು ಪಡೆದಿವೆ. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರಲ್ಲಿದ್ದ ಅಘಾದವಾದ ಪ್ರತಿಭೆ ಇನ್ನು ಜೀವಂತವಾಗಿದೆ. ರಂಗಭೂಮಿಯಲ್ಲಿ ಅಪಾರ ಶಿಷ್ಯವೃಂದವನ್ನು ಬೆಳಸಿ ಕಣ್ಮರೆಯಾಗಿದ್ದಾರೆ. ಕಲಾವಿದರು ನಮ್ಮ ನಡುವೆ ಇರಬೇಕು. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಪ್ರೋತ್ಸಾಹಿಸಿದಾಗ ಮಾತ್ರ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ ನೂರಾರು ನಾಟಕ ರೂಪಕಗಳನ್ನು ನಿರ್ದೇಶಿಸಿರುವ ರಂಗಭೂಮಿ ಕಲಾವಿದ ಅಶೋಕ್ ಬಾದರದಿನ್ನಿಗೂ ನಮಗೆ ಅನೇಕ ವರ್ಷಗಳ ನಂಟಿದೆ. ಸಿರಿಗೆರೆ, ಸಾಣೆಹಳ್ಳಿ ಸೇರಿದಂತೆ ನಾಡಿನ ನಾನಾ ಕಡೆ ಅವರ ನಾಟಕಗಳು ಪ್ರದರ್ಶನಗೊಂಡು ಇಂದಿಗೂ ಪ್ರೇಕ್ಷಕರ ಮನದಲ್ಲಿ ಉಳಿದಿದೆ. ಅಂಬೇಡ್ಕರ್, ಬುದ್ದ, ಬಸವ ಇವರುಗಳೆಲ್ಲರೂ ತಮ್ಮ ಮರಣದ ನಂತರ ಇನ್ನು ನೆನಪಿನಲ್ಲಿ ಉಳಿದಿದ್ದಾರೆ. ಅದೇ ರೀತಿ ಅಶೋಕ್‍ಬಾದರದಿನ್ನಿ ಕೂಡ ತಮ್ಮ ನಾಟಕ ರೂಪಕಗಳ ಮೂಲಕ ಇನ್ನು ಪ್ರೇಕ್ಷಕರ ಮನದಲ್ಲಿ ಬೇರೂರಿದ್ದಾರೆಂದು ಸ್ಮರಿಸಿದರು.

ರಂಗಭೂಮಿ ಕಲಾವಿದರ ಬದುಕು ಕಷ್ಟದಲ್ಲಿರುವುದರಿಂದ ಪ್ರೋತ್ಸಾಹ ಬೇಕಿದೆ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು.
ರಂಗ ಸಂಗೀತ ನಾಟಕಗಳ ಪ್ರದರ್ಶನವನ್ನು ತಬಲಾ ಬಾರಿಸುವ ಮೂಲಕ ಉದ್ಗಾಟಿಸಿದ ಕಿರುತೆರೆ ನಟಿ ಸಿತಾರ ಮಾತನಾಡಿ ನನ್ನ ರಂಗಭೂಮಿ ಜೀವನ ಚಿತ್ರದುರ್ಗದಿಂದಲೇ ಆರಂಭವಾಯಿತು. ಅಶೋಕ್ ಬಾದರದಿನ್ನಿ ರಂಗ ತಂಡ ಕಟ್ಟಿಕೊಂಡು ಅಮೋಘವಾದ ನಾಟಕ ರೂಪಕಗಳನ್ನು ಪ್ರದರ್ಶಿಸಿ ಇಂದಿಗೂ ರಂಗಭೂಮಿಯಲ್ಲಿ ಮನೆ ಮಾತಾಗಿ ಉಳಿದಿದ್ದಾರೆ. ಚಿತ್ರರಂಗ, ರಂಗಭೂಮಿಯಲ್ಲೂ ತಮ್ಮಲ್ಲಿನ ಅದ್ಬುತವಾದ ಕಲೆಯನ್ನು ಪ್ರದರ್ಶಿಸಿದ್ದಾರೆಂದು ಗುಣಗಾನ ಮಾಡಿದರು.

ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡುತ್ತ ದೊಡ್ಡ ರಂಗ ನಿರ್ದೇಶಕರಾಗಿದ್ದ ಅಶೋಕ್ ಬಾದರದಿನ್ನಿ ತಮ್ಮಲ್ಲಿನ ಅಮೋಘವಾದ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದರು. ರಂಗಭೂಮಿಯಲ್ಲಿ ಸಾಮ್ರಾಟನಂತೆ ಮೆರೆದ ಅಶೋಕ್‍ಬಾದರದಿನ್ನಿ ನಾಟಕಗಳು ನಾಡಿನೆಲ್ಲೆಡೆ ಪ್ರದರ್ಶನಗೊಂಡಿವೆ. ಕಲಾವಿದರನ್ನು ಪ್ರೇಕ್ಷಕರುಗಳು ಮರೆಯಬಾರದು. ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯರಾದ ರುದ್ರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಎ.ಜಿ.ಬಸವರಾಜಪ್ಪ ವೇದಿಕೆಯಲ್ಲಿದ್ದರು.

ಫೋಟೋ ವಿವರಣೆ : ಬಾದರದಿನ್ನಿ ರಂಗೋತ್ಸವ ರಂಗ ಸಂಗೀತ ನಾಟಕಗಳ ಪ್ರದರ್ಶನವನ್ನು ಕಿರುತೆರೆ ನಟಿ ಸಿತಾರ ತಬಲಾ ಬಾರಿಸುವ ಮೂಲಕ ಉದ್ಗಾಟಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!