Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಿಲೀಸ್ ಗೆ ರೆಡಿಯಾಯ್ತು ರಾಘವ್ ವಿನಯ್ ನಿರ್ದೇಶನದ ‘ಟಾಮ್ ಅಂಡ್ ಜೆರ್ರಿ’ ಸಿನಿಮಾ..!

Facebook
Twitter
Telegram
WhatsApp

ಟಾಮ್ ಅಂಡ್ ಜೆರ್ರಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 12ಕ್ಕೆ ಬೆಳ್ಳಿತೆರೆ ಮೇಲೆ ದರ್ಶನ ನೀಡಲಿದೆ. ವರ್ಷಗಳೇ ಕಳೆದ್ರು ಆ ಡೈಲಾಗ್ ಗಳು ಇನ್ನು ಎಲ್ಲರನ್ನು ಕಾಡ್ತಾ ಇದೆ. ಅದೇ ಕೆಜಿಎಫ್ ನ ಒಂದೊಂದು ಪವರ್ ಫುಲ್ ಡೈಲಾಗ್ಸ್. ಆ ಡೈಲಾಗ್ ಬರೆದವರು ರಾಘವ್ ವಿನಯ್ ಶಿವಗಂಗೆ. ಇದೀಗ ಅವರ ಸಾರಥ್ಯದಲ್ಲಿ ಟಾಮ್ ಅಂಡ್ ಜೆರ್ರಿ ಸಿನಿಮಾ ರೆಡಿಯಾಗಿದೆ. ರಿಲೀಸ್ ಗೂ ಸಿದ್ದವಾಗಿದೆ.

ಟಾಮ್ ಅಂಡ್ ಜೆರ್ರಿ ಅದೆಷ್ಟೋ ದಿನಗಳಿಂದ ಎಲ್ಲರ ಚಿತ್ತವನ್ನು ಸೆಳೆದಿದೆ. ಒಂದು ಸಿನಿಮಾ ಗೆಲ್ಲಬೇಕು ಅಂದ್ರೆ ಅದಕ್ಕೆ ಹಾಡುಗಳು ಬುನಾದಿಯಿದ್ದಂತೆ. ಹಾಡುಗಳೇ ಪ್ರೇಕ್ಷಕರನ್ನ ಥಿಯೇಟರ್ ನತ್ತ ಹೆಚ್ವು ಸೆಳೆಯುತ್ತವೆ. ಆ ಹಾಡನ್ನ ದೊಡ್ಡ ಪರದೆ ಮೇಲೆ ನೋಡೋದಕ್ಕೆ ಚಿತ್ರಮಂದಿರಗಳಿಗೆ ಹೋಗ್ತಾರೆ. ಅಂಥ ಮೋಡಿ ಮಾಡಿರೋದು ಇದೇ ಸಿನಿಮಾದ ಹಾಡು. ಹೌದು,  ಹಾಯಾಗಿದೆ ಎದೆಯೊಳಗೆ ಎಂಬ ಅದ್ಭುತ ಗೀತೆ ಈಗಾಗ್ಲೇ ಮಿಲಿಯನ್ ಗಟ್ಟಲೇ ಮನಸ್ಸನ್ನ ಕದ್ದಿದೆ. ಸಹಸ್ರಾರು ಪಾಸಿಟಿವ್ ಕಮೆಂಟ್ ಗಿಟ್ಟಿಸಿಕೊಂಡಿದೆ. ಇಂಥ ಅದ್ಭುತ ಗೀತೆಗೆ ಸಂಗೀತ ನೀಡಿದವರು ಮ್ಯಾಥ್ಯೂಸ್ ಮನು.

ಟಾಮ್ ಅಂಡ್ ಜೆರ್ರಿಯಲ್ಲಿರುವಂತ ಜಗಳ, ಪ್ರೀತಿ, ಆಟ-ತುಂಟಾಟ ಎಲ್ಲವೂ ಟಾಮ್ ಅಂಡ್ ಜೆರ್ರಿ ಸಿನಿಮಾದಲ್ಲೂ ಇದೆ. ಅದರ ಜೊತೆಗೆ ಕೊಂಚ ಆ್ಯಕ್ಷನ್ ಕೂಡ ನಿಮ್ಮನ್ನ ಸೆಳೆಯುತ್ತೆ. ಎಲ್ಲಾ ವರ್ಗದವರನ್ನ ಸೆಳೆಯುವಂತ ಕಥೆಗೆ ರಾಘವ್ ವಿನಯ್ ಶಿವಗಂಗೆ ಆ್ಯಕ್ಷನ್ ಕಟ್ ಹೇಳಿದ್ರೆ, ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿನಯ್ ಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ಗಂಟು ಮೂಟೆ ಸಿನಿಮಾದಲ್ಲಿ ನಟನೆಯಿಂದಲೇ ಎಲ್ಲರನ್ನು ಸೆಳೆದಿದ್ದ ನಿಶ್ಚಿತ್ ಕೊರೋಡಿ ನಾಯಕನಾಗಿ ನಟಿಸಿದ್ದಾರೆ. ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ನಿಶ್ಚಿತ್ ಗೆ ಜೋಡಿಯಾಗಿದ್ದಾರೆ. ಸೂರ್ಯ ಶೇಖರ್ ವಿಲನ್ ಆಗಿ ನಟಿಸಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಚಿತ್ರದ ತಾರಾಂಗಣದಲ್ಲಿದ್ದಾರೆ. ಸಂಕೇತ್ ಎಂವೈಎಸ್ ಕ್ಯಾಮೆರಾದಲ್ಲಿ ಇಡೀ ಸಿನಿಮಾ ಸೆರೆಯಾಗಿದ್ದು, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

error: Content is protected !!