Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯದಲ್ಲಿ ಬಿ.ಜೆ.ಪಿಯ ಸುನಾಮಿ ಎದ್ದಿದೆ: ಬಸವರಾಜ ಬೊಮ್ಮಾಯಿ

Facebook
Twitter
Telegram
WhatsApp

ಹಾನಗಲ್ : ರಾಜ್ಯದಲ್ಲಿ ಬಿ.ಜೆ.ಪಿ ಸುನಾಮಿ ಎದ್ದಿದೆ. ಇದರ ಪರಿಣಾಮವಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿ ಊರಿನಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನೆಲಕಚ್ಚಿದ್ದು, ಹಾನಗಲ್‌ನಲ್ಲಿಯೂ ಅವರನ್ನು ಮನೆಗೆ ಕಳಿಸಿದರೆ, ಅವರು ಖಾಯಂ ಆಗಿ ಮನೆಯಲ್ಲಿ ಇರುತ್ತಾರೆ ಎಂದರು. ಸುಳ್ಳು ಹೇಳುವವರಿಗೆ ಮನ್ನಣೆ ಕೊಡಬೇಡಿ ಎಂದು ಕರೆ ನೀಡಿದ ಮುಖ್ಯಮಂತ್ರಿಗಳು, ಎಲ್ಲಾ ಸಮುದಾಯಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಇಷ್ಟು ದಿನಗಳು, ಕಾಂಗ್ರೆಸ್ ಜನರನ್ನು ಮತ ಬ್ಯಾಂಕ್ ಎಂದು ತಿಳಿದುಕೊಂಡಿದ್ದರು. ಅಧಿಕಾರ ಪಡೆದವರು ಜನರನ್ನು ಮರೆತು ಅಧಿಕಾರದಲ್ಲಿ ಮೆರೆಯುತ್ತಿದ್ದರು. ಈಗ ನೀವು ಜಾಗೃತರಾಗಿರುವುದರಿಂದ ನಿಮ್ಮನ್ನು ವಂಚಿಸಲು ಯಾರಿಗೂ ಸಾಧ್ಯವಿಲ್ಲ. ಕಾಂಗ್ರಸ್ ಪಕ್ಷ ಹತಾಶಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ, ಸಮಾಜಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡಿದ್ದಾರೆ. ಇಂದಿಗೂ ಅಲ್ಲಲ್ಲಿ ಅಸಮಾನತೆಯ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಮೊದಲಿನಿಂದಲೂ ಸಮಾನತೆ ತರುವ ಕೆಲಸ ಮಾಡಿದ್ದರೆ, ಈ ಕೂಗು ಇರುತ್ತಿರಲಿಲ್ಲ. ಹಾಗಾಗಿ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕು ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ : ಮಳೆಗೆ ಜಿಲ್ಲೆಯಾದ್ಯಂತ 80 ಮನೆಗಳು ಹಾನಿ : ಮಳೆ ವರದಿ…!

ಚಿತ್ರದುರ್ಗ.ಅ.18:  ಗುರುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 11.3 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 15 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 6.8 ಹಿರಿಯೂರು ತಾಲ್ಲೂಕು 14.2 ಮಿ.ಮೀ, ಹೊಳಲ್ಕೆರೆ ತಾಲ್ಲೂಕು

ಚಿತ್ರದುರ್ಗ | ಮೂವರು ಮಹಿಳೆಯರು ಕಾಣೆ : ಪತ್ತೆಗೆ ಮನವಿ

ಚಿತ್ರದುರ್ಗ. ಅ.18: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಮಹಿಳೆಯರು ಕಾಣೆಯಾದ ಕುರಿತು ಮೂರು  ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿ ಗ್ರಾಮದ ರೇಣುಕಮ್ಮ ಗಂಡ ಕರಿಯಪ್ಪ

ಜೈಲಿನಿಂದ ಬಿಡುಗಡೆಯಾದ ನಾಗೇಂದ್ರರಿಗೆ ಹೊಸ ಟಾಸ್ಕ್ ನೀಡಿದ ಸಿಎಂ ಸಿದ್ದರಾಮಯ್ಯ..!

  ಬೆಂಗಳೂರು : ವಾಲ್ಮೀಕಿ ಹಗರಣದಲ್ಲಿ ಬಂಧಿಯಾಗಿದ್ದ ಬಿ.ನಾಗೇಂದ್ರ ಅವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಜಮೀರ್ ಅಹ್ಮದ್ ಜೊತೆಗೂಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ

error: Content is protected !!