ಕುರುಗೋಡು. ಆ.19 : ಸರಕಾರ 7 ತಾಸು ವಿದ್ಯುತ್ ಸ್ಥಗಿತಗೊಳಿಸಿ ಕೇವಲ 5 ತಾಸು ನೀಡಲು ಮುಂದಾಗಿದೆ ಇದರಲ್ಲಿ ನಿತ್ಯ 2 ತಾಸು ಕೂಡ ಕೊಡುತ್ತಿಲ್ಲ ಬೆಳೆಗಳು ಒಣಗಿ ಹೋಗಿವೆ ಅಧಿಕಾರಿಗಳು ಮುಲಾಜು ಇಲ್ಲದೆ ಕೊಡಲು ಆಗುವುದಿಲ್ಲ ಅಂತಿದ್ದಾರೆ ಎಂದು ಪಟ್ಟಣದ 110 ಕೆಇಬಿ ಕಚೇರಿಗೆ ವಿವಿಧ ಭಾಗದ ರೈತರು ಮುತ್ತಿಗೆ ಹಾಕಿ ಕೆಲ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು
ಇದೆ ವೇಳೆ ರೈತರು ಮಾತನಾಡಿ, ಸರಕಾರ ಈ ಹಿಂದೆ 7 ತಾಸು ವಿದ್ಯುತ್ ಪೂರೈಕೆ ಮಾಡಲು ಆದೇಶ ನೀಡಿತ್ತು, ಆದರೆ ಇವಾಗ 5 ತಾಸು ವಿದ್ಯುತ್ ನೀಡಲು ನಿರ್ಧಾರ ತೆಗೆದುಕೊಂಡಿದೆ ಆದರೆ ಸ್ಥಳೀಯ ಅಧಿಕಾರಿ ಗಳು 5 ಗಂಟೆಗಳಲ್ಲಿ ಕೇವಲ 2 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ ಇದರಿಂದ ಪಂಪ್ ಸೆಟ್ ಗಳ ಮೇಲೆ ಅವಲಂಬಿತರಾಗಿರುವ ರೈತರಿಗೆ ತುಂಬಾ ಕಷ್ಟಕರವಾಗಿದೆ ಎಂದು ಅಧಿಕಾರಿಗಳ ಮುಂದೆ ರೈತರು ಅಳಲು ಹಂಚಿಕೊಂಡರು.
ಈಗ ಸಧ್ಯ ಮಳೆಯಿಲ್ಲದೇ ರೈತರು ಕಂಗಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಅಧಿಕಾರಿಗಳಿಗೆ ಫೋನ್ ಮಾಡಿದ್ರೆ ವಿದ್ಯುತ್ ಕೊಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ, ರೈತರ ಗದ್ದೆಗಳು ನೋಡತೀರದಾಗಿದೆ. ಈಗಾಗಲೇ ರಸಗೊಬ್ಬರ, ಔಷಧಿ, ಕಳೆ ನಾಶಕ ಸೇರಿ ಎಕರೆಗೆ ದುಪ್ಪಟ್ಟು ಹಣ ವ್ಯಾಯಿಸಿಸಿದ್ದಾರೆ ಬೆಳೆಗಳು ಕೈಸೇರುವ ಹಂತದಲ್ಲಿ ಇದ್ದು, ಮಳೆ ಇಲ್ಲ, ಸರಿಯಾಗಿ ಕರೆಂಟ್ ಇಲ್ಲ ಇದರಿಂದ ಬೆಳೆ ಗಳಲ್ಲಿ ಕುಂಟಿತ ಗೊಳ್ಳುವ ಸಾಧ್ಯತೆ ಕಾಣುತಿದೆ ಎಂದು ಅಭಿಪ್ರಾಯ ವನ್ನು ಅಧಿಕಾರಿಗಳ ಮುಂದೆ ಹೊರ ಹಾಕಿದರು.
ಕಚೇರಿಯಲ್ಲಿ ಸರಿಯಾಗಿ ಅಧಿಕಾರಿಗಳು ಇಲ್ಲದ ಕಾರಣ ರೈತರು ತಮ್ನ ಸಮಸ್ಯೆಗಳನ್ನು ಹೇಳಿ ಕೊಳ್ಳುವುದೆ ಕಷ್ಟವಾಗಿದೆ.
ವಿದ್ಯುತ್ ಸಮಸ್ಯೆಯಿಂದ ಭತ್ತದ ಗದ್ದೆಗಳು ಒಣಗಿ ಹೋಗಿ ಕಾಳು ಜೋಳ್ಳಾಗಿ ಬೆಳೆಗಳಲ್ಲಿ ಕುಂಟಿತಗೊಳ್ಳುವ ಲಕ್ಷಣಗಳು ಕಾಣುತ್ತಿವೆ ಇದಕ್ಕೆಲ್ಲ ಹೊಣೆ ಯರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ನಂತರ ಪ್ರತಿಭಟನೆ ಸ್ಥಳಕ್ಕೆ ಇಇ ರಂಗನಾಥ ಭೇಟಿ ನೀಡಿ ಮಾತನಾಡಿ, ಗೆಣಿಕೆಹಾಳ್ ಬೆಳಿಗ್ಗೆ 4 ರಿಂದ 9 ಗಂಟೆ,ಎಫ್ 5 ಸಿಂದಿಗೇರಿ ಬೆಳಿಗ್ಗೆ 4 ರಿಂದ 9 ಗಂಟೆ, ಎಫ್ 6 ಪಟ್ಟಣಶೇರುಗು ಬೆಳಿಗ್ಗೆ 4 ರಿಂದ 9 ಗಂಟೆ, ನಿತ್ಯ ಮುಂದುವರಿಯಲಿದ್ದು ಯಾವುದೇ ಬದಲಾವಣೆ ಆಗುದಿಲ್ಲ.ಎಫ್ 7 ಮುಷ್ಟಗಟ್ಟೆ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ಗಂಟೆ, ವದ್ದಟ್ಟಿ ಎರಡು ರೀತಿಯ ಬೈ ಆಪರೇಷನ್ ಇರುವುದರಿಂದ ಚಿಟಿಗಿನಹಾಳ್,ಗೆಣಿಕೆಹಾಳ್ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ಗಂಟೆ ತನಕ ಒಂದು ವಾರ ಇದ್ದು, ಮತ್ತೆ ಬದಲಾವಣೆ ಆಗಲಿದೆ ಎಂದರು.ಬಾದನಹಟ್ಟಿ ಬೈ ಆಪರೇಷನ್ ಇರುವುದರಿಂದ , ಕಲ್ಲುಕಂಬ ಕ್ಯಾದಿಗೆಹಾಳ್ ಮದ್ಯಾಹ್ನ 2 ರಿಂದ ಸಂಜೆ 7 ರ ತನಕ ಒಂದು ವಾರ ನಡೆಯಲಿದ್ದು ನಂತರ ಮತ್ತೆ ಬದಲಾವಣೆ ಆಗಲಿದೆ ಎಂದರು ಇನ್ಮುಂದೆ ಯಾವುದೇ ರೀತಿಯಲ್ಲಿ ರೈತರಿಗೆ ಸಮಸ್ಯೆ ಆಗದಂತೆ 5 ತಾಸು ವಿದ್ಯುತ್ ನಿಗದಿ ಸಮಯದಲ್ಲಿ ಪೂರೈಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಿಂದಿಗೇರಿ,ಬೈಲೂರು,ಕಲ್ಲುಕಂಭ, ಬಾದನಹಟ್ಟಿ, ಮುಷ್ಟಗಟ್ಟೆ, ವದ್ದಟ್ಟಿ, ಗೆಣಿಕೆಹಾಳ್, ಕ್ಯಾದಿಗೆಹಾಳ್, ಪಟ್ಟಣ ಶೇರುಗು ಗ್ರಾಮದ ರೈತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಿಪಿಐ ಜಯಪ್ರಕಾಶ್, ಪಿಎಸ್ಐ ಸುಪ್ರೀತ್ ವಿರೂಪಾಕ್ಷಪ್ಪ,110 ಸ್ಟೇಷನ್ ಎಇ ಹನುಮಂತಪ್ಪ, ಕಿರಿಯ ಅಭಿಯಂತರ ಅರುಣ್ ಕುಮಾರ್, ಶೇಖರಪ್ಪ, ರವಿಕುಮಾರ್, ಎಮ್ಮಿಗನೂರು ಶಾಖೆ ಅಧಿಕಾರಿ ಬಸವರಾಜ್ ಮೆಕಾನಿಕ್ ವೀರೇಶ್ ಸ್ವಾಮಿ, ಪಂಪನಗೌಡ
ರೈತರಾದ ಸಿರಿಗೇರಿ ಲಕ್ಷ್ಮಣ ನಾಯಕ್, ಸಿಗ್ರಿ ವೀರೇಶ್, ಶ್ರೀರಂಗ ರೆಡ್ಡಿ,ಎಸ್.ಶಿವಪ್ಪ, ಕರೆ ಬೇಡ್ರು ಸುಂಕಪ್ಪ, ಸುಬ್ಬರಾಜ್, ಸಿರಿಗೇರಿ ಮಂಜು ನಾಥ, ಮಲ್ಲಿಕಾರ್ಜುನ ಸೇರಿ ಇತರರು ಇದ್ದರು.
.