ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದಾಗಿ ರಾಜ್ಯ ಜೆಡಿಎಸ್ ನಾಯಕರ ನಡುವೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮೈತ್ರಿಯನ್ನು ಸ್ವತಃ ರಾಜ್ಯಾಧ್ಯಕ್ಷರೇ ವಿರೋಧಿಸಿದ್ದರು. ಒರಿಜಿನಲ್ ಜೆಡಿಎಸ್ ನಮ್ಮದು ಎಂದು ಇಬ್ರಾಹಿಂ ಕೂಗಿ ಹೇಳಿದ್ದರು. ಇದೀಗ ಜೆಡಿಎಸ್ ವರಿಷ್ಠರೇ, ಇಬ್ರಾಹಿಂ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ವಿಸರ್ಜನೆ ಮಾಡಿ, ಪಕ್ಷದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy ಅವರನ್ನು @JanataDal_S ಪಕ್ಷದ ಅಡಹಾಕ್ ಅಧ್ಯಕ್ಷರನ್ನಾಗಿ… pic.twitter.com/00bzewUTuT
— Janata Dal Secular (@JanataDal_S) October 19, 2023
ಇಬ್ರಾಹಿಂ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿದ್ದು, ಕುಮಾರಸ್ವಾಮಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಇಂದು ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ಜಿಟಿ ದೇವೇಗೌಡ ಅವರು ಸೇರಿದಂತೆ ಹಲವು ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಎಲ್ಲರ ಅಭಿಪ್ರಾಯವನ್ನು ದೇವೇಗೌಡ್ರು ಸಂಗ್ರಹಿಸಿದ್ದಾರೆ. ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಭೆಯಲ್ಲಿಯೇ ಈ ವಿಚಾರ ಘೋಷಣೆ ಮಾಡಲಾಗಿದೆ. ಸಿ. ಎಂ. ಇಬ್ರಾಹಿಂ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದು, ಚಿಂಥನ ಮಂಥನ ಸಭೆ ನಡೆಸಿದ್ದರು. ಬಳಿಕ ಒರಿಜಿನಲ್ ಜೆಡಿಎಸ್ ನಮ್ಮದು ಎಂದೇ ಹೇಳಿಕೆ ನೀಡಿದ್ದರು. ಅವರ ನಡೆ ಜೆಡಿಎಸ್ ವರಿಷ್ಠರ ಕೋಪಕ್ಕೆ ಕಾರಣವಾಗಿತ್ತು. ಒರಿಜಿನಲ್ ಜೆಡಿಎಸ್ ಹೇಳಿಕೆಯ ಬಳಿಕ, ಮಾಜಿ ಪ್ರಧಾನಿ ದೇವೇಗೌಡ್ರು, ಪ್ರಧಾನ ಕಚೇರಿಗೆ ಬಂದು ಮಾತನಾಡುತ್ತೇನೆ ಎಂದಿದ್ದರು. ಅದರಂತೆ ಇಂದು ಕೋರ್ ಕಮಿಟಿ ಸಭೆ ನಡೆಸಿದ್ದು, ಇಂದು ರಾಜ್ಯಾಧ್ಯಕ್ಷರ ಬದಲಾವಣೆಯನ್ನು ಮಾಡಿದ್ದಾರೆ.