ಬೆಂಗಳೂರು: ಇಂದು ಕೋರಮಂಗಲದ ಪಬ್ ಒಂದರಲ್ಲಿ ಇದ್ದಕ್ಕಿದ್ದ ಹಾಗೇ ಕಾಣಿಸಿಕೊಂಡ ಬೆಂಕಿ, ಐದು ಅಂತಸ್ತಿನ ಕಟ್ಟಡ ಧಗಧಗನೇ ಉರಿದಿದೆ. 20 ಸಿಲಿಂಡರ್ ಸ್ಪೋಟದಿಂದಾಗಿ ಕಟ್ಟಡದಲ್ಲಿ ದಟ್ಟ ಹೊಗೆ ಆಕ್ರಮಿಸಿಕೊಂಡಿತ್ತು. ಪ್ರಾಣ ಉಳಿಸಿಕೊಳ್ಳುವುದಕ್ಕೆ ಕಟ್ಟಡದ ಮೇಲಿಂದ ಪಬ್ ಸಿಬ್ಬಂದಿ ಕೆಳಗೆ ಜಿಗಿದೇ ಬಿಟ್ಟಿದ್ದಾನೆ.
ಐದು ಅಂತಸ್ತಿನ ಕಟ್ಟಡದಿಂದ ಜಿಗಿಯುವುದು ಅಂದ್ರೆ ಸುಮ್ನೆನಾ ಆದರೆ ಪ್ರೇಮ್ ಎಂಬ ಸಿಬ್ಬಂದಿ ಕೆಳಕ್ಕೆ ಜಿಗಿದಿದ್ದಾನೆ. ಪಾಪ ಬೆಂಕಿ ನೋಡಿದ ಗಾಬರಿಗೆ, ಮಹಡಿಯಿಂದ ಕೆಳಗೆ ಜಿಗಿದವನಿಗೆ ಗಂಭೀರ ಗಾಯಗಳಾಗಿದೆ. ಇದರಿಂದಾಗಿ ಕೈಕಾಲು ಡ್ಯಾಮೇಜ್ ಆಗಿದೆ. ಗಂಭೀರ ಸ್ಥಿತಿಯಲ್ಲಿರುವ ಪ್ರೇಮ್ ಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಇದೆ ಕಟ್ಟಡದಲ್ಲಿದ್ದ ವಾಹನಗಳಿಗೂ ಹಾನಿಯಾಗಿದೆ. ಕಟ್ಟಡದ ಕೆಳಗೆ ನಿಂತಿದ್ದ ನೆಕ್ಸಾ ಕಾರುಗಳು, ಬೈಕ್ ಬೆಂಕಿಗೆ ಆಹುತಿಯಾಗಿದೆ. ಸದ್ಯ ಕಟ್ಟಡಕ್ಕೆ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಒಬ್ ಗೆ ಲೈಸೆನ್ಸ್ ಇಲ್ಲ ಎಂಬ ಆರೋಪ ಕೇಳಿ ಬರುತ್ತಾ ಇದೆ. ಇದರ ನಡುವೆ ದೊಡ್ಡ ಅನಾಹುತ ತಪ್ಪಿದೆ ಎಂಬುದೇ ಸಮಾಧಾನಕರವಾಗಿದೆ. ಆದರೆ ಪಬ್ ಗೆ ಬೆಂಕಿ ಹತ್ತಿದ್ದನ್ನು ಕಂಡ ಜನ ಗಾಬರಿಯಾಗಿದ್ದಾರೆ. ನೋಡ ನೋಡುತ್ತಲೇ ದಟ್ಟ ಹೊಗೆ ಆವರಿಸಿಕೊಂಡಿದ್ದನ್ನು ಕಂಡು ಜನ ಆ ಕಡೆಗೆ ಸುಳಿಯುತ್ತಲೆ ಇಲ್ಲ. ಆದರೆ ಪ್ರಾಣ ಉಳಿಸಿಕೊಳ್ಳಲು ಮೇಲಿಂದ ಬಿದ್ದ ಯುವಕ ಈಗ ಪ್ರಾಣಾಪಾಯದಲ್ಲಿಯೇ ಇರುವುದು ದುರಂತ. ಆದಷ್ಟು ಬೇಗ ಗಾಯಾಳು ಪ್ರೇಮ್ ಗುಣಮುಖರಾಗಲಿ ಎಂದೇ ಹಾರೈಸುತ್ತಿದ್ದಾರೆ.