ಬೆಂಗಳೂರು : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಿಗದೆ ಇರುವ ಕಾರಣ, ಐದು ಕೆಜಿ ಅಕ್ಕಿ, ಇನ್ನೈದು ಕೆಜಿ ಅಕ್ಕಿಗೆ ಹಣ ನೀಡುತ್ತಿದೆ. ಆದರೆ ಇದನ್ನು ಖಂಡಿಸಿ, ಇದೀಗ ಹೆಚ್ಚುವರಿ ಅಕ್ಕಿಗಾಗಿ ನಾಳೆ ನ್ಯಾಯಬೆಲೆ ಅಂಗಡಿಯನ್ನು ಬಂದ್ ಮಾಡಲಾಗುತ್ತಿದೆ.
ರಾಜ್ಯದ 20,350 ನ್ಯಾಯಬೆಲೆ ಅಂಗಡಿಗಳು ಬಂದ್ ಗೆ ಕರೆ ನೀಡಲಾಗಿದೆ. ನಾವುಗಳು ಪಡಿತರ ವಿತರಣೆಯನ್ನೇ ನಂಬಿಕೊಂಡಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದೆರಡು ತಿಂಗಳು ಅಂತ ಹೇಳಿ, ಡಿಬಿಟಿ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿ, 4.30 ಕೋಟಿ ಫಲಾನುಭವಿಗಳು ಇದ್ದಾರೆ. ತಲಾ 5 ಕೆಜಿಯಂತೆ ಅಕ್ಕಿ ಬದಲಿಗೆ 170 ರೂಪಾಯಿ ನೀಡುತ್ತಿದೆ ಸರ್ಕಾರ. ಒಂದು ಕೆಜಿ ಅಕ್ಕಿಗೆ ಸರ್ಕಾರ ಪಡಿತರ ವಿತರಕರಿಗೆ 1.24 ರೂಪಾಯಿ ಕಮಿಷನ್. ಈಗ ಹಣ ಕೊಡುತ್ತಿರುವುದರಿಂದ ಪ್ರತಿ ವಿತರಕರಿಗೆ ಸುಮಾರು ₹13 ಸಾವಿರ ಕೈ ತಪ್ಪುತ್ತಿದೆ.
ಈ ಸಂಬಂಧ ಮಾತನಾಡಿದ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಜೆ ಬಿ ಕುಮಾರ್, ಪಡಿತರ ವಿತರಣೆಯನ್ನು ನಂಬಿಕೊಂಡು ಮಂದಿಗೆ ಸರ್ಕಾರದ ನಡೆಯಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ತಮ್ಮ ಸಮಸ್ಯೆಯನ್ನು ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಒಂದೆರಡು ತಿಂಗಳು ಅಂತ ಹೇಳಿ DBT ಮುಂದುವರೆಸಿಕೊಂಡು ಬರಲಾಗಿದೆ. ಈ ಸಂಬಂಧ ಸರ್ಕಾರ ಕ್ರಮವಹಿಸದೆ ಇದ್ದರೆ, ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.