ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.17 : ಇತ್ತಿಚೆಗಷ್ಟೇ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ದೊಡ್ಡ ಮಟ್ಟದ ಐಟಿ ದಾಳಿ ನಡೆಸಿದ್ದರು. ಆ ವೇಳೆ ಕೋಟಿಗಟ್ಟಲೆ ಸಿಕ್ಕಿತ್ತು. ಆ ಹಣದ ಬಗ್ಗೆ ಬಿಜೆಪಿ ನಾಯಕರು ಸಾಕಷ್ಟು ಆರೋಪ ಮಾಡಿದ್ದರು. ಇದು ಕಾಂಗ್ರೆಸ್ ನವರ ಭ್ರಷ್ಟಾಚಾರ ಎಂದೇ ಆರೋಪ ಮಾಡಿದ್ದರು.
ಇಂದು ಕರ್ನಾಟಕ ರಾಜ್ಯ ವಕ್ಛ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಆನ್ವರ್ ಭಾಷಾ ರವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮಕ್ಕೆ ಆಗಮಿಸಿ
ಈ ಸಂಬಂಧ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಉದ್ಯಮಿಯೊಬ್ಬರ ಮನೆಯ
ಐಟಿ ದಾಳಿ ವೇಳೆ ಸಿಕ್ಕಿರುವ ಕೋಟಿ ಕೋಟಿ ಹಣ ವಿಚಾರದಲ್ಲಿ ಟೀಕಿಸುವ ಬಿಜೆಪಿಯವರಿಗೆ ಹೇಳೋಕೆ ಬೇರೆ ಏನಿದೆ. ಅವರ ಅವಧಿಯಲ್ಲಿ ಕಲೆಕ್ಷನ್ ಮಾಡೋದು ಅಭ್ಯಾಸ ಆಗಿದೆ. ಅವರ ಮೇಲೆ 40% ಆರೋಪ ಮಾಡಿದ್ವಿ, ಅದನ್ನು ಸಾಬೀತು ಮಾಡಬೇಕು ಅಲ್ವ, ಅದನ್ನು ಸಾಬೀತು ಮಾಡದೆ ಹಿಂಗೆ ಮಾತಾಡ್ತಾರೆ ಎಂದು ಬಿಜೆಪಿ ಆರೋಪಕ್ಕೆ ಕಿಡಿ ಕಾರಿದರು.
ಗ್ಯಾರಂಟಿ ಯೋಜನೆಗಳನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ಹೇಳುವುದು ಅಲ್ಲ, ಅದನ್ನು ಸಾಬೀತು ಮಾಡಬೇಕು ಎಂದು ಹೇಳಿದರು. ಸಿಎಂ ಕಲೆಕ್ಷನ್ ಮಾಸ್ಟರ್ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವರು ಬಿಜೆಪಿಯವರಿಗೆ ಹೇಳೋಕೆ ಇನ್ನೇನಿದೆ ? ಎಂದು ಪ್ರಶ್ನೆ ಹಾಕಿದರು. ಅವರ ಆಡಳಿತಾವಧಿಯಲ್ಲಿ ಕಲೆಕ್ಷನ್ ಮಾಡಿ ಅವರಿಗೆ ರೂಢಿ ಆಗಿದೆ. ಎಲ್ಲರೂ ಕೂಡ ಅವರಂತೆ ಅಂತಾ ತಿಳಿದಿದ್ದಾರೆ. ನಮ್ಮ ಉತ್ತಮ ಕೆಲಸ ನೋಡಿ ಬಿಜೆಪಿಯವರಿಗೆ ಸಹಿಸಕ್ಕೆ ಆಗ್ತಿಲ್ಲ ಎಂದು ಕಿಡಿಕಾರಿದರು.