ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.17 : ಬಿಜೆಪಿ ಮತ್ತು ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮೈತ್ರಿ ಪಕ್ಷದಲ್ಲಿಯೇ ಹಲವರಿಗೆ ಇಷ್ಟವಿಲ್ಲ. ಅಷ್ಟೆ ಅಲ್ಲ ರಾಜ್ಯಾಧ್ಯಕ್ಷರಿಗೇನೆ ಒಪ್ಪಿಗೆ ಇಲ್ಲ. ಓಪನ್ ಆಗಿಯೇ ಇಬ್ರಾಹಿಂ ಆಕ್ರೋಶ ಹೊರ ಹಾಕಿದ್ದು, ನಾವೂ ಇಂಡಿಯಾ ಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.
ಇಂದು ಕರ್ನಾಟಕ ರಾಜ್ಯ ವಕ್ಛ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಆನ್ವರ್ ಭಾಷಾ ರವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಇಂಡಿಯಾಗೆ ಬೆಂಬಲ ಎಂದು ಹೇಳಿದ್ದಾರೆ. ನಾನು ಸ್ವಾಗತ ಮಾಡ್ತಿನಿ ಎಂದಿದ್ದಾರೆ. ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಎಂದಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ.
ಪೊಲೀಸ್ ಕ್ವಾರ್ಟರ್ಸ್ ವಾಸ ಮಾಡಲು ಯೋಗ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015-2023ರ ವರೆಗೆ ಮನೆಗಳು ಘೋಷಣೆ ಆಗಿದ್ದವು. 2 ಲಕ್ಷ 38 ಸಾವಿರ ಮನೆ ಘೋಷಣೆ ಮಾಡಲಾಗಿತ್ತು. ಸ್ಲಂ ಬೋರ್ಡಲ್ಲಿ 1 ಲಕ್ಷ 80 ಸಾವಿರದ 200 ಮನೆ ಘೋಷಣೆ ಆಗಿದ್ದವು. ರಾಜೀವಗಾಂಧಿ ಯೋಜನೆಯಡಿ 50 ಸಾವಿರ ಮನೆ ಮಂಜೂರು ಮಾಡಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 4 ವರ್ಷದಲ್ಲಿ ಒಂದು ಮನೆನೂ ಕೊಡಕ್ಕಾಗಿಲ್ಲ, ಎಎಚ್ ಪಿ ಸ್ಕೀಂ ನಲ್ಲಿ ಒಂದು ಮನೆ ಕಟ್ಟೋಕೆ 7 ಲಕ್ಷ ಖರ್ಚು ಆಗುತ್ತದೆ. ಕೇಂದ್ರ ಒಂದೂ ವರೆ ಲಕ್ಷ ರೂಪಾಯಿ ಕೊಡಬೇಕು. ರಾಜ್ಯ ಸರಕಾರ ಜಿಎಂಗೆ 1 ಲಕ್ಷ 20 ಸಾವಿರ, ಎಸ್ಸಿ ಗಳಿಗೆ 2 ಲಕ್ಷ ಕೊಡ್ತಾರೆ ಎಂದರು.
ಕೇಂದ್ರ ಜಿಎಸ್ ಟಿ ಮೂಲಕ 1 ಲಕ್ಷ 30 ಸಾವಿರ ವಾಪಸ್ ಪಡೆಯುತ್ತಾರೆ. ಮುಂದೆ ಕೊಟ್ಟು ಹಿಂದಿಂದ ಕಿತ್ಕೋತ್ತಾರೆ. ಈಗಾಗಲೇ ಈ ವಿಚಾರವನ್ನ ನಮ್ಮ ಇಲಾಖೆ ಅಧಿಕಾರಿಗಳು ಸಿಎಂ ಹತ್ರ ಮಾತಾಡಿದ್ದಾರೆ. ಇನ್ನು ಮುಂದೆ ಈ ಹಣ ಫಲಾನುಭವಿಗಳು ಕಟ್ಟಂಗಿಲ್ಲ ಸರಕಾರದಿಂದ ಇದನ್ನು ಕಟ್ಟುವ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಸಿಎಂ ಈ ಕುರಿತು ಒಂದು ವಾರ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.