ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 15 : ಕರ್ನಾಟಕ ರಾಜ್ಯ ವಕ್ಛ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಆನ್ವರ್ ಭಾಷಾ ರವರಿಗೆ ಅಭಿನಂದನಾ ಸಮಾರಂಭವು ಆ. 17 ರ ಮಂಗಳವಾರ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಕ್ಛ್ ಸಲಹಾ ಸಮಿತಿಯ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ( ಎಂ.ಸಿ.ಓ.ಬಾಬು) ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೇಲ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಚಿತ್ರದುರ್ಗ ಜಿಲ್ಲೆಗೆ ಕಳೆದ 40 ವರ್ಷದ ಹಿಂದೆ ಸೈಫುದ್ದಿನ್ ರವರಿಗೆ ರಾಜ್ಯಾಧ್ಯಕ್ಷ ಸ್ಥಾನ ಒಲಿದಿತ್ತು. ಈಗ ಮತ್ತೇ ರಾಜ್ಯಾಧ್ಯಕ್ಷ ಸ್ಥಾನ ಆನ್ವರ್ ಭಾಷಾ ರವರಿಗೆ ಒಲಿದಿದೆ. ಇದು ನಮ್ಮ ಸೌಭಾಗ್ಯವಾಗಿದೆ. ಇದು ಅಲ್ಪ ಸಂಖ್ಯಾತರಿಗೆ ಒಲಿದು ಬಂದ ಅಧೃಷ್ಟವಾಗಿದೆ, ಈ ಸಮಾರಂಭವನ್ನು ಅದ್ದೂರಿಯಾಗಿ ಎಲ್ಲಾ ಸಮುದಾಯದವರು ಸೇರಿ ಮಾಡಲಾಗುತ್ತಿದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಯಿಂದ ನಗರದ ಮದಕರಿನಾಯಕ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಕನಕದಾಸ್, ಓನಕೆ ಒಬವ್ವ ಪ್ರತಿಮೆಗಳಿಗೆ ಮಾಲಾರ್ಪಣೆಯನ್ನು ಮಾಡಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ಅದೇ ಸಮಯದಲ್ಲಿ ಕಾಂಗ್ರೆಸ್ ಕಚೇರಿಗೆ ಸೌಹಾರ್ದಯುತವಾದ ಭೇಟಿಯನ್ನು ನೀಡಲಿದ್ದಾರೆ. ಇದೇ ದಿನ ಸಂಜೆ 4 ಗಂಟೆಗೆ ನಗರದ ಆಗಸನಕಲ್ಲು ಬಡಾವಣೆಯಲ್ಲಿ ಬೋರ್ಡಿನ ಜಾಗದಲ್ಲಿ ನೂತನವಾಗಿ ಸಮಾರು 3 ಕೋಟಿ ವೆಚ್ಚದಲ್ಲಿ ವಕ್ಛ್ ಭವನವನ್ನು ನಿರ್ಮಾಣ ಮಾಡಲು ಸಚಿವರಿಂದ ಶಂಕುಸ್ಥಾಪನೆಯನ್ನು ಮಾಡಲಾಗುವುದು ಇದರ ನಿರ್ಮಾಣಕ್ಕೆ ಸರ್ಕಾರ ಈಗ 2 ಕೋಟಿ ರೂ.ಗಳ ಬಿಡುಗಡೆಗೆ ಆದೇಶವನ್ನು ನೀಡಿದ್ದು ಇದರಲ್ಲಿ 1 ಕೋಟಿಯನ್ನು ಬಿಡುಗಡೆ ಮಾಡಿದೆ ಎಂದು ಎಂ.ಸಿ.ಓ.ಬಾಬು ತಿಳಿಸಿದರು.
ಆ. 17 ರ ಮಂಗಳವಾರ ಮಧ್ಯಾಹ್ನ 12ಕ್ಕೆ ನಡೆಯುವ ಆಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ರವರು ವಹಿಸಲಿದ್ದಾರೆ. ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಛ್ ಸಚಿವರಾದ ಬಿ.ಜಡ್. ಜಮೀರ್ ಆಹಮದ್ ಖಾನ್, ರಾಜ್ಯ ಸಭಾ ಸದಸ್ಯರಾದ ಡಾ.ಸೈಯದ್ ನಾಸೀರ್ ಹುಸೇನ್, ಯೋಜನಾ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್, ಮುಖ್ಯ ಸಚೇತಕರಾದ ಸಲೀಮ್ ಆಹಮದ್, ಶಾಸಕರುಗಳಾದ ಎನ್.ವೈ ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದರಾದ ಬಿ.ಎನ್,ಚಂದ್ರಪ್ಪ, ರಾಷ್ಟ್ರೀಯ ಸಂಯೋಜಕರಾದ ಎಚ್.ಎಂ.ಶಕೀಲ್ ನವಾಜ್, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಕೆಪಿಸಿಸಿ ಸದಸ್ಯರಾದ ವಿಜಯಕುಮಾರ್ ಹಾಗೂ ದಾವಣಗೆರೆ ಜಿಲ್ಲಾ ವಕ್ರ್ಛ ಸಲಹಾ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಸಿರಾಜ್ ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ಉಪಾದ್ಯಕ್ಷರಾದ ಸೈಫುಲ್, ಸದಸ್ಯರಾದ ದಾದಪೀರ್, ಹನೀಸ್ ನವಾಜ್ ಖುದ್ದಸ್, ರಹಮತ್ತುಲ್ಲಾ, ಪ್ರಕಾಶ್ ರಾಮ ನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು.