ಬೆಂಗಳೂರು: ಐಟಿ ಅಧಿಕಾರಿಗಳ ದಾಳಿಯಿಂದ ನಿನ್ನೆ ಕಾರ್ಪೋರೇಟರ್ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ಹಣ ಜಪ್ತಿ ಮಾಡಲಾಗಿದೆ. ಇಂದು ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮನೆಯಲ್ಲಿ ಪರಿಶೀಲನೆ ನಡೆಸಿ, ಅಂತಿಮ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಜೊತೆಗೆ ಮಂಗಳವಾರ ಹಾಜರಾಗುವಂತೆ ಪ್ರಮೋದ್ ಹಾಗೂ ಪ್ರದೀಪ್ ಗೂ ನೋಟೀಸ್ ನೀಡಲಾಗಿದೆ.
ಬಳಿಕ ಮಾತನಾಡಿರುವ ಅಂಬಿಕಾಪತಿ ಪುತ್ರ ಪ್ರದೀಪ್, ಕಳೆದ 15 ವರ್ಷದಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದೇವೆ. ಜೊತೆಗೆ ಬ್ಯುಸಿನೆಸ್ ಕೂಡ ಮಾಡುತ್ತಿದ್ದೇವೆ. ಅದು ಯಾವುದೇ ಹವಾಲ ಹಣ ಅಲ್ಲ, ನಮ‌್ಮ ಬ್ಯುಸಿನೆಸ್ ಗೆ ಸಂಬಂಧಿಸಿದ್ದು, ಎಲ್ಲಾ ದಾಖಲೆಗಳನ್ನು ನೀಡಿಯೇ ಹಣ ಬಿಡಿಸಿಕೊಳ್ಳುತ್ತೇವೆ. ಐಟಿ ವಿಚಾರಣೆಗೆ ಹಾಜರಾಗಿ ಎಲ್ಲಾ ದಾಖಲೆಗಳನ್ನು ನೀಡುತ್ತೇವೆ ಎಂದಿದ್ದಾರೆ.
ನಿನ್ನೆ ಐಟಿ ಅಧಿಕಾರಿಗಳ ದಾಳಿಯಿಂದಾಗಿ ಅಶ್ವತ್ಥಮ್ಮ ಹಾಗೂ ಅಂಬಿಕಾಪತಿಗೆ ಸಂಬಂಧಿಸಿದ 42 ಕೋಟಿ ಹಣ ಸಿಕ್ಕಿತ್ತು. ಐಟಿ ಅಧಿಕಾರಿಗಳು ರಾತ್ರಿಯೆಲ್ಲಾ ಅವರ ಮನೆಯಲ್ಲಿಯೇ ಉಳಿದು, ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಅದಷ್ಟೇ ಅಲ್ಲ ಎರಡು ಸೂಟ್ ಕೇಸ್ ಗಳನ್ನು ಕೂಡ ಪಡೆದಿದ್ದಾರೆ. ಅದರಲ್ಲಿ ಆಸ್ತಿ ಪತ್ರಗಳು ಇದೆ ಎನ್ನಲಾಗಿದ್ದು, ಪರಿಶೀಲನೆ ನಡೆಸಲಿದ್ದಾರೆ.