Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಬೆಂಬಲಿಸಿ ,  ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು : ಚಳ್ಳಕೆರೆ ಮತ್ತು ಹಿರಿಯೂರಿನಲ್ಲಿ ಬೈಕ್ ರ‌್ಯಾಲಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್.13 : ನಾನು ಚಳ್ಳಕೆರೆಗೆ ಮತ ಕೇಳಲು ಬಂದಿಲ್ಲ ಮುಂದಿನ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ನಿಮ್ಮೆಲ್ಲರ ಸಹಕಾರ ಬೇಕು.

ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಮಾಡಲು ನಮೋ ಬ್ರಿಗೇಡ್ ಶಪಥ ಮಾಡಿದೆ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಜನಗಣಮನ ಬೆಸಿಯೋಣ ಬೈಕ್ ರ್ಯಾಲಿ ಇಂದು  ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ  ನೆಹರು ವೃತ್ತದಲ್ಲಿ ಸ್ವಾಗತ ಕೋರಿದ ಕಾರ್ಯಕರ್ತರನ್ನು ಉದ್ದೇಶಿಸಿ  ಮಾತನಾಡಿ, ನರೇಂದ್ರ ಮೋದಿಯವರು ದೇಶಕ್ಕೆ ನೀಡಿದಂತಹ ಕೊಡಗಳನ್ನು ನಾವೆಲ್ಲರೂ ಗಮನಿಸಿದ್ದೇವೆ .

ಈ ದೇಶ ಇಂದು  ಅತ್ಯಂತ ಸುಭದ್ರ ವಾಗಿದೆ ಎಂದರೆ . ಇಸ್ರೇಲ್ ಆಕ್ರಮಣದಿಂದ ಹೇಗೆ ಅಮಾಸ್ ಉಗ್ರನ ತಡೆಯಲಿಕ್ಕೆ ಸಾಧ್ಯವಾಗಿದೆಯೋ ಹಾಗೆ   ತಡೆಯಲಿಕ್ಕೆ ಕಾರಣವಾಗಿದೆ ಎಂದರೆ ಅದಕ್ಕೆ ನರೇಂದ್ರ ಮೋದಿಯವರು ಅ ರಾಷ್ಟ್ರ ರಕ್ಷಣೆ ದೃಷ್ಟಿಯನ್ನು ನೋಡಿಕೊಂಡು ನಾವು ನರೇಂದ್ರ ಮೋದಿ ಅವರನ್ನು ಮಂತ್ರಿ ಮಾಡಬೇಕು. ಒಟ್ಟು ಮೂರವೆ ಸಾವಿರ ಕಿಲೋಮೀಟರ್ ಯಾತ್ರೆಯಲ್ಲಿ  ಕೋಲಾರ ದಿಂದ ಆರಂಭಿಸಿ ಉತ್ತರ ಕರ್ನಾಟಕವನ್ನೆಲ್ಲ ಸುತ್ತಾಡಿ ಚಳ್ಳಕೆರೆಗೆ ಬಂದಿದ್ದೇವೆ. ಇಂದು ಸಂಜೆಗೆ ಬೆಂಗಳೂರಿನಲ್ಲಿ ಸಮಾರೋಪ ಆಗುತ್ತೆ. ಕೊಟ್ಟರೆ ಯಾತ್ರೆಯ ಉದ್ದಕ್ಕೂ ನಾವು ಸಾವಿರಾರು ಶಾಂತರ ಜನರನ್ನ ಭೇಟಿ ಮಾಡಿದ್ದೇವೆ ಅವರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದೇವೆ.

ಹಳ್ಳಿ ಹಳ್ಳಿಯಲ್ಲೂ ಮೂಲೆ ಮೂಲೆಯಲ್ಲೂ ನರೇಂದ್ರ ಮೋದಿಯವರ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಇದರಿಂದ ನಮಗೆ ತಿಳಿಯುವುದು ಏನಪ್ಪಾ ಅಂದ್ರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುತ್ತಾರೆ ಎನ್ನುವ ವಿಶ್ವಾಸ. ಭಾರತ ತುಂಬಾ  ಸ್ಟಾಂಗ್ ದೇಶವಾಗಿದೆ. ನಮ್ಮೆಲ್ಲರ ಜವಾಬ್ದಾರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ನಾವೆಲ್ಲರೂ ಹೋರಾಡಬೇಕಿದೆ.

ಪ್ರಧಾನ ಮಂತ್ರಿ ನಡೆದ ಮೋದಿ ಅವರ ಕಾರ್ಯಗಳು ಇಡೀ ದೇಶ ಪ್ರಪಂಚಕ್ಕೆ ಗೊತ್ತು ನಾವು ಅವರ ಸಾಧನೆಗಳನ್ನು ಪ್ರಚಾರ ಮಾಡುವ ಅಗತ್ಯ ಇಲ್ಲ ಎಂದರು.
ನಾನು ಮತ ಕೇಳಲು ಬಂದಿಲ್ಲ .ಪ್ರಧಾನ ಮಂತ್ರಿ  ನರೇಂದ್ರ  ಮೊದಿಯವರನ್ನ ಮೂರನೇ ಬಾರಿಗೆ ಗೆಲ್ಲಿಸಲು ಚಳ್ಳಕೆರೆ ಜನತ ಕೈಜೋಡಿಸಿ.

ಕರ್ನಾಟಕದಲ್ಲಿ ನೀಡಿದಂತಹ ಉಚಿತ ಯೋಜನೆಗಳು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದ್ರು ಒಂದು ತಿಂಗಳು ಹಣ ಹಾಕಿದರು. ದುಡ್ಡುನು ಬರ್ಲಿಲ್ಲ ಸುದ್ದಿನೂ ಇಲ್ಲ. 200 ಯೂನಿಟ್ ವಿದ್ಯುತ್ ಉಚಿತ ಕೊಡ್ತೀವಿ ಅಂದ್ರು ಕರೆಂಟು ಹೋಯಿತು. ಕರ್ನಾಟಕದಲ್ಲಿ ಕತ್ತಲ ಭಾಗ್ಯ ಬಂತು. ಪ್ರಮುಖ ಸ್ಥಳಗಳಲ್ಲೂ ಸಹ ಇಂದು ವಿದ್ಯುತ್ ಇಲ್ಲಾ. ಶಕ್ತಿ ಯೋಜನೆ ಕುಂಟತ್ತಾ ಸಾಗಿದೆ. ಬಸ್ ಏನೋ ಫ್ರೀ ಮಾಡಿದರು ಬಸ್ ಗಳೇ ಬರದಂತಹ ಪರಿಸ್ಥಿತಿ ಮಾಡಿದರು .

ಇನ್ನು ಯುವ ನಿಧಿ ಬಗ್ಗೆ ಅಂತೂ ಮಾತನಾಡದಂತಹ ಪರಿಸ್ಥಿತಿ ಇದೆ ಹೀಗೆಲ್ಲ ಇರುವಾಗ ನಾವು ಗಂಭೀರವಾಗಿ ಗಮನಿಸಬೇಕಾದಂತ ಸಂಗತಿ ಕರ್ನಾಟಕವನ್ನ ಸಾಲದ ಕೋಪಕ್ಕೆ ಸರ್ಕಾರಕ್ಕೆ ತಳ್ಳಿದೆ ಕರ್ನಾಟಕ ರಾಜ್ಯ ಒಂದು ಹೀಗಾದರೆ ಐದು ವರ್ಷಕ್ಕೆ ಸರಿಪಡಿಸಬಹುದು ಇಡೀ ದೇಶವೇ ಕಾಂಗ್ರೆಸ್  ನವರ ಕೈ ಗೆ  ಕೊಟ್ಟರೆ ಯಾವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ಆತಂಕ ಕಾರಣದಿಂದ ನಾವೆಲ್ಲರೂ ಸೇರಿಕೊಂಡು ಮೋದಿ ಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕಿದೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂದರು.

ಹಿರಿಯೂರು: ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸುವಂತೆ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಜನಗಣ ಮನ ಬೆಸೆಯುವ ಶಿರ್ಷಿಕೆ ಅಡಿಯ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಏಳಿಗೆಗಾಗಿ ಶ್ರಮಿಸುವ ಮೂಲಕ ಭಾರತ ದೇಶವನ್ನು ವಿಶ್ವದ ಮುನ್ನೆಲೆಗೆ ಕೊಂಡೊಯ್ಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೋದಿ ಅವರನ್ನು ವಿಶ್ವ ಗುರುವನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿಯನ್ನು ಮತ್ತೊಮ್ಮೆ ಕೈ ಹಿಡಿಯೋಣ ಎಂದು ತಿಳಿಸಿದರು.

ನಗರದ ಟಿಬಿ ವೃತ್ತದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿ,  ತಾಲೂಕು ಕಛೇರಿ, ಗಾಂಧಿ ವೃತ್ತ,  ಆಸ್ಪತ್ರೆ ವೃತ್ತ, ಬಸ್ ನಿಲ್ದಾಣದ ಮೂಲಕ ರಂಜಿತಾ ಹೋಟೆಲ್ ಬಳಿ ಅಂತ್ಯವಾಯಿತು.

ಈ ಸಂದರ್ಬದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ್ , ಎ.  ರಾಘವೇಂದ್ರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ್ ಮಸ್ಕಲ್‌, ಮುಖಂಡರಾದ ಎಂವಿ ಹರ್ಷ, ಎ. ಬಾಲಾಜಿ, ನಿರ್ಮಲ ಪುರುಷೋತ್ತಮ್, ಅಪರ್ಣ ವಿಶ್ವನಾಥ್, ಭವ್ಯ ನಾಗೇಶ್, ಚಂದ್ರಹಾಸ್, ಹೆಚ್. ವೆಂಕಟೇಶ್, ಚಲ್ಮೇಶ್, ಯೋಗೀಶ್, ನಾಗೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ಚಿನ ಶುಲ್ಕ ವಸೂಲಿ – ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು

ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮತ ಎಣಿಕೆಕಾರ್ಯ ನಿರ್ವಹಿಸಲು ಸೂಚನೆ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21 : ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 04ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣೆಯ

ಬರ್ತ್ ಡೇ ಮುಗಿದು ವಾರವಾದರೂ ಬರ್ತಿವೆ ಗಿಫ್ಟ್ : ಅಷ್ಟೊಂದು ಸೀರೆಗಳನ್ನು ಸಂಗೀತಾಗೆ ಗಿಫ್ಟ್ ಮಾಡಿದ್ದು ಯಾರು..?

ಸಂಗೀತಾ ಶೃಂಗೇರಿ ಈಗ ಯಾರನ್ನೇ ಕೇಳಿದರೂ ಹೇಳುತ್ತಾರೆ. ಬಿಗ್ ಬಾಸ್ ನಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು. ಎದುರಾಳಿಗಳಿಗೆ ತಿರುಗೇಟು ಕೊಟ್ಟವರು. ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದಾಗಲೇ ಕೊನೆಯ ಮೆಟ್ಟಿಲಿನ ತನಕ ಹೋಗಿ ವಾಪಾಸ್ ಬಂದವರು.

error: Content is protected !!