ಸುದ್ದಿಒನ್, ನವದೆಹಲಿ, ಅಕ್ಟೋಬರ್.13 : ಇಸ್ರೇಲ್ ನಿಂದ ತವರಿಗೆ ಮರಳಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸ್ವಾಗತಿಸಿದರು.
ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ 212 ಭಾರತೀಯರನ್ನು ಹೊತ್ತ ಮೊದಲ ಚಾರ್ಟರ್ಡ್ ವಿಮಾನ ಗುರುವಾರ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟಿತ್ತು. “ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ನಮ್ಮ ಭಾರತೀಯ ನಾಗರಿಕರು ಶೀಘ್ರದಲ್ಲೇ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
#WATCH | Operation Ajay: First flight carrying 212 Indian nationals from Israel, lands in Delhi pic.twitter.com/iwT9ugIREP
— ANI (@ANI) October 13, 2023
ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ಮುಂದುವರೆದಿದೆ . ಈ ಯುದ್ಧದಲ್ಲಿ ಎರಡೂ ದೇಶಗಳ ನಾಗರಿಕರೂ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಭಾರತವು ಇಸ್ರೇಲ್‌ನಿಂದ ತನ್ನ ನಾಗರಿಕರ ಸುರಕ್ಷಿತವಾಗಿ ಕರೆತರಲು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿತು.
ಇಸ್ರೇಲ್‌ನಿಂದ 212 ಭಾರತೀಯರ ಮೊದಲ ವಿಮಾನ ಇಂದು ಬೆಳಿಗ್ಗೆ ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
ಇಸ್ರೇಲ್‌ನಲ್ಲಿ ಸುಮಾರು 18,000 ಭಾರತೀಯರು : ಮಾಹಿತಿ ಪ್ರಕಾರ ಇಸ್ರೇಲ್ ನಲ್ಲಿ ಸುಮಾರು 18000 ಭಾರತೀಯರಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ಈವರೆಗೆ ಯಾವುದೇ ಭಾರತೀಯರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓರ್ವ ಗಾಯಗೊಂಡ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.