Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

39 ದಿನಕ್ಕೆ ಮಲೆ ಮಹದೇಶ್ವರಿಗೆ ಹರಿದು ಬಂತು 2.28 ಕೋಟಿ ರೂಪಾಯಿ..!

Facebook
Twitter
Telegram
WhatsApp

 

ಚಾಮರಾಜನಗರ: ಮಲೆ‌ ಮಹದೇಶ್ವರಿಗೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಶ್ರೀಮಂತ ದೇವರಲ್ಲಿ ಮಹದೇಶ್ವರ ಕೂಡ ಒಂದು. ಬೇರೆ ರಾಜ್ಯಗಳಿಂದಾನೂ ಮಲೆ‌ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಬರುತ್ತಾರೆ. ಭಕ್ತರ ಪುಣ್ಯ ಸ್ಥಳವೆಂದೆ ಹೇಳಲಾಗುತ್ತಿದೆ. ಇದೀಗ ಮತ್ತೆ ಕೋಟಿ ಒಡೆಯನಾಗಿದ್ದಾನೆ ಮಲೆ‌ ಮಹದೇಶ್ವರ ಸ್ವಾಮಿ.

 

ಹೌದು ಮಲೆ‌ ಮಹದೇಶ್ವರ ಸ್ವಾಮಿಯ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಇದರಲ್ಲಿ ಮಹದೇಶ್ವರ ಕೋಟಿ ಒಡೆಯನಾಗಿರುವುದು ಮತ್ತೆ ನಿರೂಪಿಸಲಾಗಿದೆ. ಬರೀ 39 ದಿನಗಳಲ್ಲಿಯೇ 2.28 ಕೋಟಿಯ ಒಡೆಯನಾಗಿದ್ದಾನೆ. ಹಬ್ಬ ಹರಿದಿನ, ರಜೆಯ ದಿನಗಳಲ್ಲಿ ಮಲೆ‌ಮಹದೇಶ್ವರ ಬೆಟ್ಟಕ್ಕೆ ಬರುವವರ ಸಂಖ್ಯೆ ಜೋರಾಗಿದೆ. ಹೀಗಾಗಿಯೇ 39 ದಿನಗಳಲ್ಲಿ ಕೋಟಿ ಕೋಟಿ ಹಣ ಕಾಣಿಕೆಯಾಗಿ ಹರಿದು ಬಂದಿದೆ.

ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬಳಿಕ ಈ ವಿಚಾರ ಗೊತ್ತಾಗಿದೆ. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮಲೆ‌ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ನೇತೃತ್ವದಲ್ಲಿ ಹುಂಡಿ ಕಾರ್ಯ ನಡೆದಿದೆ. ಸಿಸಿಟಿವಿ ಕ್ಯಾಮೆರಾದ‌ ಕಣ್ಗಾವಲಿನಲ್ಲಿಯೇ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಅದರಲ್ಲಿ 2.28 ಕೋಟಿ ಹಣ, 92.5 ಗ್ರಾಂ ಚಿನ್ನ ಹಾಗೂ 2.746 ಗ್ರಾಂ ಬೆಳ್ಳಿ ಕೂಡ ಕಾಣಿಕೆ ರೂಪದಲ್ಲಿ ದೇವರ ಹುಂಡಿಯಲ್ಲಿ‌ ಸೇರಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೈರುತ್ಯ ಪದವೀಧರ ಚುನಾವಣೆ : ಬಂಡಾಯವೆದ್ದ ರಘುಪತಿ ಭಟ್ ಗೆ ಬೆಂಬಲ ನೀಡಿದ ಈಶ್ವರಪ್ಪ

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಇಬ್ಬರು ಈಗ ಒಂದೇ ದೋಣಿಯ ಪಯಣಗಿರು. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

ನಮ್ಮ ವಿದ್ಯಾಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ : ಡಾ.ಕೆ.ಎಂ.ವಿರೇಶ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮೇ. 21:  ನನ್ನ ವಿದ್ಯಾ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತವಾದ ಶಿಕ್ಷಣವನ್ನು ನೀಡಲಾಗುವುದು

ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು : ಕೆ. ಅನಂತ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 21: ತಳಮಟ್ಟದಿಂದ ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು ಎಂದು ಜಿಲ್ಲಾ ಕಾಂಗ್ರೆಸ್

error: Content is protected !!