ಮುಂಬೈ: ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಈಗಾಗ್ಲೆ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ನಡುವೆ ಆರ್ಯನ್ ಖಾನ್ ಗೆ ಜಾಮೀನು ಕೊಡಿಸಲು ಶಾರೂಖ್ ಖಾನ್ ಸಾಕಷ್ಟು ಕಷ್ಟಪಡ್ತಾ ಇದ್ದಾರೆ. ಆದರೆ ಜಾಮೀನು ಮಾತ್ರ ಸಿಕ್ತಾ ಇಲ್ಲ. ಇದು ಶಾರೂಖ್ ಖಾನ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಈ ಬೆನ್ನಲ್ಲೇ ಆರ್ಯನ್ ಖಾನ್ ಜೊತೆ ಡ್ರಗ್ಸ್ ವಿಚಾರಕ್ಕೆ ವಾಟ್ಸಾಪ್ ಚಾಟ್ ಮಾಡಿದ್ದರು ಎಂದು ಹೇಳಲಾಗುತ್ತಿದ್ದು, ಈಗಾಗಲೇ ಒಂದು ಬಾರಿ ನೋಟೀಸ್ ಕೊಟ್ಟಿದ್ದರು. ಎನ್ಸಿಬಿ ನೋಟೀಸ್ ಗೆ ಉತ್ತರಿಸಲು ಅನನ್ಯಾ ಪಾಂಡೆ ಕೂಡ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮತ್ತೊಮ್ಮೆ ವಿಚಾರಣೆಗೆ ಕರೆದಿದ್ದು, ಬಾರದೇ ಇರುವುದು ಅನನ್ಯಾಗೂ ಬಂಧನದ ಭೀತಿ ಎದುರಾಗಿದ್ಯಾ ಎಂಬ ಪ್ರಶ್ನೆಗಳು ಎದ್ದಿವೆ.
ವಿಚಾರಣೆಗೆ ಹಾಜರಾಗುವಂತೆ ಅನನ್ಯಾ ಪಾಂಡೆಗೆ ನೋಟೀಸ್ ನೀಡಲಾಗಿತ್ತು. ಆದ್ರೆ ವೈಯಕ್ತಿಕ ಕೆಲಸ ಇದೆ. ಇಂದು ವಿಚಾರಣೆಗೆ ಹಾಜರಾಗೋದಕ್ಕೆ ಆಗೋದಕ್ಕೆ ಆಗುತ್ತಾ ಇಲ್ಲ. ಮತ್ತೊಂದು ದಿನ ಸಮಯ ಕೊಡಿ ಎಂದು ಅಧಿಕಾರಿಗಳಿಗೆ ಅನನ್ಯಾ ಮನವಿ ಮಾಡಿಕೊಂಡಿದ್ದಾರಂತೆ. ಹೀಗಾಗಿ ಅಧಿಕಾರಿಗಳು ಸಹ ಮತ್ತೊಂದು ದಿನ ವಿಚಾರಣೆಗೆ ಹಾಜರಾಗಲೂ ಸೂಚಿಸಿದ್ದಾರಂತೆ.