Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾಲುಮರದ ತಿಮ್ಮಕ್ಕ ನಿಧನ ಸುದ್ದಿ ಸುಳ್ಳು : ಇಲ್ಲಿದೆ ಸ್ಪಷ್ಟನೆ

---Advertisement---

ಬೆಂಗಳೂರು: ಕೆಲ ಹಿರಿಯರ ಸಾವಿನ ಸುದ್ದಿಗಳು ಆಗಾಗ ಓಡಾಡುತ್ತವೆ. ಅವರು ಬದುಕಿರುವಾಗಲೇ ಕಿಡಿಗೇಡಿಗಳು ಇಂತಹ ಸುದ್ದಿ ಹಬ್ಬಿಸುತ್ತಾರೆ. ಸಿನಿಮಾ ಇಂಡಸ್ಟ್ರಿಯ ಹಿರಿಯ ಕಲಾವಿದರಿಗೂ ಇದು ಹೊಸತೇನು ಅಲ್ಲ. ಆದರೆ ಈ ರೀತಿ ಸಾವಿನ ಸುದ್ದಿ ಸುಳ್ಳಾದರೆ ಆಯಸ್ಸು ಜಾಸ್ತಿ‌ ಎನ್ನಲಾಗುತ್ತದೆ. ಇದೀಗ ಸಾಲುಮರದ ತಿಮ್ಮಕ್ಕ ಅವರ ಬಗ್ಗೆಯೂ ಈ ರೀತಿಯ ಸುದ್ದಿ ಹಬ್ಬಿದೆ.

ಸಾಲುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಉಮೇಶ್, ತಿಮ್ಮಕ್ಕ ಅವರ ಜೊತೆಗೆ ಇದ್ದು, ನೋಡಿಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದಾರೆ.

ಈ ಸಂಬಂಧ ನಾಗರಾಜು ಹೆತ್ತೂರು ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ‘ತಿಮ್ಮಕ್ಕ ಅವರಿಗೆ ಏನು ಆಗಿಲ್ಲ. ಆರೋಗ್ಯವಾಗಿಯೇ ಇದ್ದಾರೆ. ಚೇತರಿಕೆ ಕಾಣುತ್ತಿದ್ದಾರೆ. ಮಗ ತಾಯಿಯ ಹಾರೈಕೆ ಮಾಡುತ್ತಿದ್ದಾರೆ. ಊಟ ಕೂಡ ಮಾಡುತ್ತಿದ್ದಾರೆ ಎಂದು ಫೇಸ್ಬುಕ್ ನಲ್ಲಿ, ಕ್ಲಾರಿಟಿ ಕೊಟ್ಟಿದ್ದಾರೆ. ಜೊತೆಗೆ ತಿಮ್ಮಕ್ಕ ಅವರು ಊಟ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ‌.

ಸಾಲುಮರದ ತಿಮ್ಮಕ್ಕ ಬೆಂಗಳೂರು ಬಿಟ್ಟು ಬೇಲೂರು ಸೇರಿದ್ದರು. ಅದು ಮಲೆನಾಡು ಆಗಿರುವ ಕಾರಣ, ಶೀತದ ವಾತಾವರಣ ಜಾಸ್ತಿ ಇತ್ತು. ತಿಮ್ಮಕ್ಕ ಅವರಿಗೂ ವಯಸ್ಸಾಗಿದ್ದು, ಆ ಶೀತದ ವಾತಾವರಣ ದೇಹಕ್ಕೆ ಒಗ್ಗಿಲ್ಲ. ಹೀಗಾಗಿ ಉಸಿರಾಟದ ಸಮಸ್ಯೆ ಉಂಟಾಗಿದೆ. ಅಲ್ಲಿಯೇ ಆಸ್ಪತ್ರೆಗೆ ಸೇರಿಸಿದ್ದರು ಸಹ ಚೇತರಿಕೆ‌ ಕಂಡಿರಲಿಲ್ಲ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಾಲುಮರದ ತಿಮ್ಮಕ್ಕ ಚೇತರಿಸಿಕೊಳ್ಳುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment