Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಟೋಬರ್ 15 ರಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ  ಸರ್ವಧರ್ಮೀಯರ ವಧು-ವರರ ಸಮಾವೇಶ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಅ,04 : ಮಾನವನ ಬದುಕಿನಲ್ಲಿ ಮದುವೆ ಎಂಬುದು ಮಹತ್ತರವಾದ ಘಟ್ಟ .ಈ ಮದುವೆಯ ಮಹತ್ತರ ಘಟ್ಟವನ್ನು 12ನೇ ಶತಮಾನದ ಶರಣರು “ಕಲ್ಯಾಣ”ವೆಂದು ಕರೆದಿದ್ದಾರೆ.

ನಮ್ಮ ಪುರಾತನ  ಪರಂಪರೆಯು ಸಪ್ತಪದಿ ಎಂಬುದಾಗಿ ಕರೆದಿದೆ. “ಸಾವಿರ ಸಕಾರಾತ್ಮಕ ಸುಳ್ಳು ಹೇಳಿ ಒಂದು ಮದುವೆ ಮಾಡು” ಎಂಬ ಗಾದೆ ಮಾತು ಇರುವಂತೆ  ಸತತವಾಗಿ ಮೂರು ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಚಿತ್ರದುರ್ಗ ಮುರುಘಾಮಠದ  ಆಶ್ರಯದಲ್ಲಿ  ಶ್ರೀ ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದ ವ್ಯವಸ್ಥಾಪಕರಾಗಿ ಎರಡೂವರೆ ಮೂರು   ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಜೆ .ಎಂ. ಜಂಬಯ್ಯ ಅವರ ಅನನ್ಯ ಕ್ರಿಯಾಶೀಲತೆ ಮೆಚ್ಚುವಂತಹುದು.

ಮುರುಘಾಮಠದಲ್ಲಿ ಮದುವೆಗಳೆಂದರೆ ಅದು ವಿಶ್ವಮಾನವತೆಯ ಸಂಕೇತ. ಜಗದಗಲ ಮುಗಿಲಗಲ ಮಿಗಿಯಗಲ ಎಂಬಂತೆ ಇಲ್ಲಿ ಸಾವಿರಾರು ಮದುವೆಗಳು ನಡೆದಿವೆ. ಪರಸ್ಪರ ಧರ್ಮೀಯರ, ಪರಸ್ಪರ ಜಾತಿಗಳ ಮದುವೆಗಳಂತೆ ಅಂತರ್ ಜಾತಿಯ ಮದುವೆಗಳು ನಡೆದಿರುವಂತೆಯೇ, ವಿಧುರರ, ವಿಕಲಾಂಗರ, ಕಲ್ಯಾಣಗಳಗಳಿಗೂ ಇಲ್ಲಿ ಲೆಕ್ಕವಿಲ್ಲ. ಗಮನಾರ್ಹ ಸಂಗತಿಗಳೆಂದರೆ ಬದುಕಿನ ಇಳಿಸಂಜೆಯಲ್ಲಿ ಸಂಗಾತಿಗಳನ್ನು ಕಳೆದುಕೊಂಡವರ  ಬದುಕಿಗೆ ಆಸರೆಯಾಗುವಂತ ಅಬಲೆಯರು, ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅನಾಥರು, ಹತಭಾಗ್ಯರು, ದುಃಖತಪ್ತರು ಸಪ್ತಪದಿ ತುಳಿದು ಬಾಳ ಬೆಳಕು ಕಂಡುಕೊಂಡಿದ್ದಾರೆ.

ಮುರುಘಾಮಠದಲ್ಲಿ ನಡೆಯುವ ಮದುವೆಗಳೆಂದರೆ ಸರಳ ಮಾತ್ರವಲ್ಲ ಆದರ್ಶ ವಿವಾಹಗಳು ಹೌದು. ಯಾವುದೇ ಜಾತಿಯ ಬಡವರು, ನಿರ್ಲಕ್ಷಿತರು, ದಿಕ್ಕಿಲ್ಲದವರು ಮದುವೆಯಾಗಬೇಕೆಂದರೆ ನಮಗೊಂದು ತಾಣವಿದೆ ಅದಂದರೆ ಶ್ರೀ ಮಠ ಎಂಬ ಧನ್ಯತೆಯ  ಭಾವವನ್ನು ತಳೆಯುತ್ತಾರೆ.

ಇಂತಹ ಸಾವಿರಾರು ಮದುವೆಗಳಿಗೆ ಸಂಯೋಜಕರಾಗಿ, ವ್ಯವಸ್ಥಾಪಕರಾಗಿ, ಕರ್ತವ್ಯ ನಿರ್ವಹಿಸಿದ ಜೆ.ಎಂ. ಜಂಬಯ್ಯ ಎಲೆ ಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಲಿತರು, ಬಡವರು, ದುರ್ಬಲರ ಮದುವೆಗೆ ಸಾಕ್ಷಿಯಾಗಿರುವಂತೆ ಕರ್ನಾಟಕದ ಪ್ರಭಾವಿ  ಕುಟುಂಬದವರ  ಮದುವೆಗಳಿಗೂ  ಇವರು ಶ್ರಮಿಸಿದ್ದಾರೆ.ಆ ಕುಟುಂಬಗಳು ಇಂದಿಗೂ ಇವರನ್ನು ಶ್ರೀಮಠವನ್ನು ಇವರನ್ನು ಸ್ಮರಿಸುತ್ತಾರೆ.

ಬಸವಧರ್ಮ ಅರ್ಥಾತ್  ಶರಣರ ಧರ್ಮವೆಂದರೆ ಅದು ಕೇವಲ ಒಂದು  ಸಮುದಾಯಕ್ಕೆ ಸೀಮಿತವಾದ ಧರ್ಮವಲ್ಲ.ಅದು ವಿಶ್ವಧರ್ಮ ಹೀಗಾಗಿ ಬಸವಣ್ಣನ ಹೆಸರಿನಲ್ಲಿರುವ ಈ ವಧು ವರರ ಮಾಹಿತಿ ಕೇಂದ್ರ ಸರ್ವಧರ್ಮೀಯರನ್ನು ಆಲಂಗಿಸಿಕೊಂಡು ತನ್ನ ತೆಕ್ಕೆಯಲ್ಲಿ  ತೆಗೆದುಕೊಂಡೊಯ್ಯಬೇಕೆಂಬ ವಿಶಾಲ ತಳಹದಿಯ ಮೇಲೆ  ಸರ್ವ ಧರ್ಮಗಳ ವಧು ವರರ ಹತ್ತಾರು ಸಮಾವೇಶಗಳನ್ನು ಇದುವರೆಗೂ   ಅರ್ಥಪೂರ್ಣವಾಗಿ ನಡೆಸುತ್ತಾ ಬಂದಿದ್ದಾರೆ. ಇಂತಹ ಸಮಾವೇಶಗಳಿಗೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ವಧು- ವರರು ತಮ್ಮ  ಪೋಷಕರೊಂದಿಗೆ ಆಗಮಿಸಿ, ಈ ಸಮಾವೇಶಗಳ ಲಾಭ ಪಡೆದುಕೊಂಡಿದ್ದಾರೆ.

ಬಸವೇಶ್ವರ ವಧು ವರರ ಮಾಹಿತಿ ಕೇಂದ್ರ ರಚನಾತ್ಮಕ ಕಾರ್ಯದ ಸಂಬಂಧಗಳ ಬೆಸುಗೆಯನ್ನು ಸದಾ ಅಚ್ಚರಿಯಿಂದ ಅಷ್ಟೇ ಗಂಭೀರವಾಗಿ ಗಮನಿಸುತ್ತಿದ್ದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೂಡ ಜಾಗೃತವಾಗಿ, ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ತಮ್ಮ ನೌಕರರ ಮಕ್ಕಳ ಕಲ್ಯಾಣ ಕಾರ್ಯಕ್ಕೆ ಮುಂದಾಗಿದ್ದು ಕೇಂದ್ರದ ಜಂಬಯ್ಯ ಅವರೊಂದಿಗೆ ಸಮಾಲೋಚಿಸಿ, ಸಮಾವೇಶಗಳನ್ನು ನಡೆಸಿ ತಮ್ಮ ಸಮುದಾಯದ ಯುವಕ ಯುವತಿಯರನ್ನು ಸೇರಿಸಿ. ಕಂಕಣ ಭಾಗ್ಯಕ್ಕೆ ಸದಾ ಅವಕಾಶ ಕಲ್ಪಿಸಿ ಹತ್ತಾರು ಮದುವೆಗಳನ್ನು ನೆರವೇರಿಸಿದ್ದಾರೆ .ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಇಂದಿಗೂ ಜಂಬಯ್ಯ ಅವರನ್ನು ಸ್ಮರಿಸುತ್ತಾರೆ.

ಅದರಂತೆ ಇದೀಗ ಇದೇ ತಿಂಗಳ ಭಾನುವಾರ 2023 ಅಕ್ಟೋಬರ್ 15 ರಂದು ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ  ಬೆಳಗ್ಗೆ 11 ಗಂಟೆಗೆ ಸರ್ವಧರ್ಮೀಯರ ರಾಜ್ಯ ಮಟ್ಟದ  ವಧು-ವರ   ಸಮಾವೇಶವನ್ನು ಏರ್ಪಡಿಸಲಾಗಿದೆ. ಈ ಸಮಾವೇಶದ ಸಾನಿಧ್ಯವನ್ನು ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತಮಠದ  ಶ್ರೀ ಪ್ರಭು ಮಹಾಸ್ವಾಮಿಗಳು, ವಿಜಯಪುರ ವನಶ್ರೀ ಸಂಸ್ಥಾನ,ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ  ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಕ್ಕಿಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷರಾದ ಕೆ.ಎಮ್. ಹೇಮಯ್ಯಸ್ವಾಮಿ, ದಾವಣಗೆರೆ ಜಯದೇವ ಪ್ರೆಸ್ ಮಾಲೀಕರು,ಶ್ರೀ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟಿಗಳು ಆದ ಕಣುಕುಪ್ಪಿ ಮುರುಗೇಶಪ್ಪ  ಅವರುಗಳು ಭಾಗವಹಿಸಲಿದ್ದಾರೆಂದು ಮಾಹಿತಿ ಕೇಂದ್ರದ ವ್ಯವಸ್ಥಾಪಕರಾದ ಜೆ.ಎಂ.  ಜಂಬಯ್ಯನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆ ಸಂಪರ್ಕಿಸಲು ಕೋರಿದ್ದಾರೆ.  9980658625

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!