Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂಗೀತಕ್ಕೆ ಪ್ರಾಣಿ ಪಕ್ಷಿಗಳನ್ನೂ ತಲೆದೂಗಿಸುವಂತ ಶಕ್ತಿಯಿದೆ : ಬಿ.ಕೆ.ರಹಮತ್‍ವುಲ್ಲಾ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.01
ಸಂಗೀತ ಕೇಳುವುದರಿಂದ ಮನಸ್ಸಿಗೆ ಮುದ ಸಿಗುತ್ತದೆ ಎಂದು ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಗಾನಯೋಗಿ ಸಂಗೀತ ಬಳಗ ವತಿಯಿಂದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ತಿಂಗಳ ವಿಶೇಷ ವ್ಯಕ್ತಿ ಪರಿಚಯ ಕವನ ಗಾಯನ ಹಾಗೂ ಕವಿಗೋಷ್ಠಿಯನ್ನು ಉದ್ಗಾಟಿಸಿ ಮಾತನಾಡಿದರು.

ಮನುಷ್ಯ ಆರೋಗ್ಯವಾಗಿರಬೇಕಾದರೆ ಪಂಚೇದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಸಂಗೀತ ಆಲಿಸುವುದರಿಂದ ಕಿವಿಗೆ ಇಂಪಾಗಿ ಮನಸ್ಸಿಗೆ ಮನರಂಜನೆ ಸಿಗುತ್ತದೆ. ಸಂಗೀತಕ್ಕೆ ನಲವತ್ತು ಐವತ್ತು ಸಾವಿರ ವರ್ಷಗಳ ಇತಿಹಾಸವಿದೆ. ಚರಿತ್ರೆಯ ಪುಟುಗಳನ್ನು ನೋಡಿದಾಗ ರಾಜ ಮಹಾರಾಜರು ಸಂಗೀತ, ಕಲೆ, ನೃತ್ಯಕ್ಕೆ ಒತ್ತು ಕೊಡುತ್ತಿದ್ದರು. ಸಂಗೀತವನ್ನು ಕೇಳಿ ಗೌರವಿಸುವವರು ಆರೋಗ್ಯವಂತರಾಗಿರುತ್ತಾರೆ. ಸಂಗೀತಕ್ಕೆ ಕೇವಲ ಮನುಷ್ಯನಲ್ಲ ಪ್ರಾಣಿ ಪಕ್ಷಿಗಳನ್ನು ತಲೆದೂಗಿಸುವಂತ ಶಕ್ತಿಯಿದೆ ಎಂದು ಸಂಗೀತದ ಮಹತ್ವ ತಿಳಿಸಿದರು.

ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ ಸಂಗೀತವನ್ನು ಕೇಳುವುದರಿಂದ ಮನಸ್ಸು ಉಲ್ಲಾಸವಾಗಿರುವುದಲ್ಲದೆ ರೋಗ ರುಜಿನಗಳು ದೂರವಾಗುತ್ತವೆ. ಸಂಗೀತದಲ್ಲಿ ವಿವಿಧ ಮಜಲುಗಳಿವೆ. ಹಾರ್ಮೋನಿಯಂ, ತಬಲಾ, ಗಿಠಾರ್, ವೀಣೆ, ಕೊಳಲು ಹೀಗೆ ಅನೇಕ ಪರಿಕರಗಳನ್ನು ಬಳಸಲಾಗುತ್ತದೆ. ಹಾಗಾಗಿ ಸಂಗೀತ ಎನ್ನುವುದು ಎಲ್ಲರನ್ನು ಮಂತ್ರಮುಗ್ದರನ್ನಾಗಿಸುತ್ತದೆ ಎಂದು ಹೇಳಿದರು.

ಸಂಗೀತ ಜೀವನದ ಅವಿಭಾಜ್ಯ ಅಂಗ. ಪುರಂದರದಾಸರು, ಕನಕದಾಸರು ಕೀರ್ತನೆಗಳ ಮೂಲಕ ಇಂದಿಗೂ ಹೆಸರುವಾಸಿಯಾಗಿದ್ದಾರೆ, ಲತಾಮಂಗೇಶ್ಕರ್, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ವಾಣಿಜಯರಾಂ, ಕಸ್ತೂರಿ ಶಂಕರ್ ಇವರುಗಳೆಲ್ಲಾ ತಮ್ಮ ಉತ್ತಮವಾದ ಕಂಠದಿಂದ ಎಲ್ಲರ ಮನದಲ್ಲಿ ಇನ್ನು ಹಚ್ಚಳಿಯದೆ ಉಳಿದಿದ್ದಾರೆಂದು ನುಡಿದರು.

ಸ್ವಿಮಿಂಗ್ ಕೋಚ್ ಸೋಮಶೇಖರ್ ಮೈಲಾರ ಮಾತನಾಡುತ್ತ ಮಾನವನಾಗಿ ಹುಟ್ಟಿದ ಮೇಲೆ ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ ಮತ್ತೊಬ್ಬರಿಗಾಗಿ ತ್ಯಾಗ ಮಾಡುವುದರಲ್ಲಿ ಖುಷಿಯಿದೆ. ಸಂಗೀತ ಕೇಳುವುದರಿಂದ ಮನಸ್ಸು ಉಲ್ಲಾಸವಾಗುತ್ತದೆ. ಪ್ರಾಣಾಯಾಮ, ಧ್ಯಾನ, ಯೋಗ, ವಾಯುವಿಹಾರ ಇವುಗಳಿಂದ ಮನಸ್ಸು ಹಾಗೂ ದೇಹದ ಮೇಲೆ ಆರೋಗ್ಯಕರ ಪರಿಣಾಮ ಬೀರಲಿದೆ ಎಂದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷ ಎಂ.ತೋಟಪ್ಪ ಉತ್ತಂಗಿ, ಜಯದೇವಮೂರ್ತಿ, ತಿಂಗಳ ವಿಶೇಷ ವ್ಯಕ್ತಿ ರಾಷ್ಟ್ರಪ್ರಶಸ್ತಿ ಪುರಸ್ಕøತೆ, ಆರೋಗ್ಯ ಇಲಾಖೆಯ ಶ್ರೀಮತಿ ನಾಗರತ್ನ ಟಿ. ವೇದಿಕೆಯಲ್ಲಿದ್ದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಎಸ್.ಎಚ್.ಶಫೀವುಲ್ಲಾ(ಕುಟೀಶ) ಅಧ್ಯಕ್ಷತೆ ವಹಿಸಿದ್ದರು.

ಶೋಭ ಮಲ್ಲಿಕಾರ್ಜುನ್, ರೇಣುಕಾ ಪ್ರಕಾಶ್, ಡಾ.ಚಾಂದಿನಿ ಖಲೀದ್, ಸತೀಶ್‍ಕುಮಾರ್, ವಿನಾಯಕ ಆರ್.ಜಿ. ಮೀರಾ ನಾಡಿಗ್, ಕೆ.ಎಸ್.ತಿಪ್ಪಮ್ಮ, ಸುಮಾ ರಾಜಶೇಖರ್, ಮೊಹಮದ್ ಸಾದತ್, ಮೊಹಬೂಬಿ, ತಿಪ್ಪೀರಮ್ಮ, ನಿರ್ಮಲ್ ಭಾರದ್ವಾಜ್ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಲವತ್ತಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!