ಬೆಂಗಳೂರು: ಕಾವೇರಿ ನೀರಿಗಾಗಿ ಇಂದು ಕರ್ನಾಟಕ ಬಂದ್ ಮಾಡಲಾಗಿದೆ. ಅಷ್ಟೇ ಅಲ್ಲ ಇಡೀ ಸ್ಯಾಂಡಲ್ ವುಡ್ ಒಂದಾಗಿದೆ. ಈ ವೇಳೆ ಶಿವಣ್ಣ ಮಾತನಾಡಿದ್ದು, ‘ನೀವೇ ಸ್ಟಾರ್ಡಂ ಕೊಡುತ್ತೀರಾ. ನೀವೇ ಕಿತ್ತುಕೊಳ್ಳುತ್ತೀರಾ. ಇದಕ್ಕೆ ಬರಲ್ಲ ಅಂತೀರಾ. ಆಯ್ತು ಬರ್ತೀವಿ. ಬಂದು ಐದು ನಿಮಿಷ ಮಾತನಾಡಿ, ಕುಳಿತು ಹೋದರೆ ಸಮಸ್ಯೆ ಬಗೆಹರಿಯುತ್ತಾ..? ಎಂದು ಕೇಳಿದ್ದಾರೆ.
ಪ್ರತಿಯೊಬ್ಬರು ನಮ್ಮ ಸರ್ಕಾರವನ್ನು ಆರಿಸಿ ಕಳುಹಿಸುತ್ತೇವೆ. ತಮಿಳುನಾಡು ಸರ್ಕಾರವೂ ಇರಬಹುದು. ಎಲ್ಲಾ ನಾಯಕರು ಕುಳಿತು ಸಮಸ್ಯೆ ಬಗ್ಗೆ ಚರ್ಚಿಸಿ, ತೀರ್ಮಾನ ತೆಗೆದುಕೊಂಡರೆ ಆಗುತ್ತದೆ. ಇದಕ್ಕೆ ಕರ್ನಾಟಕ ರೈತರು ಬೇರೆ ಅಲ್ಲ, ತಮಿಳುನಾಡು ರೈತರು ಬೇರೆ ಅಲ್ಲ. ಬೇರೆ ಹೆಸರುಗಳಿಂದಾನೂ ಕರೆಯುವುದಿಲ್ಲ. ರೈತರು ಎಂದರೆ ಒಬ್ಬರೇನೆ.
ಇದನ್ನೆಲ್ಲಾ ಸರ್ಕಾರದವರೇ ಕುಳಿತುಕೊಂಡು ಮಾತನಾಡಿ, ಬಗೆಹರಿಸಬೇಕು. ಇಲ್ಲಿ ಸಮಸ್ಯೆ ಇದೆ. ಸರಿಯಾಗಿ ಚರ್ಚಿಸಿ ಬಗೆಹರಿಸಬೇಕು. ಸುಮ್ಮನೆ ಕುಳಿತುಕೊಂಡು ಏನು ಮಾತನಾಡೋಣಾ ಹೇಳಿ. ಘಟನೆಯನ್ನು ಯಾರೂ ಬಂಡವಾಳವನ್ನಾಗಿಸಿಕೊಳ್ಳಬಾರದು ಎಂದು ವಿಚಾರದ ಬಗ್ಗೆ ವಸ್ತುನಿಷ್ಠತರಯನ್ನು ಹೇಳಿದ್ದಾರೆ.
ಇನ್ನು ತಮಿಳು ನಟ ಸಿದ್ಧಾರ್ಥ್ ಗೆ ಕ್ಷಮೆಯನ್ನು ಕೇಳಿದ್ದಾರೆ. ನನಗೆ ಬಹಳ ನೋವಾಗಿದೆ. ನಮ್ಮ ಇಂಡಸ್ಟ್ರಿಯಿಂದ ತಮಿಳು ನಟ ಸಿದ್ದಾರ್ಥ್ ಗೆ ಕ್ಷಮೆ ಕೇಳುತ್ತೇನೆ. ಇನ್ನೊಂದು ಸಲ ಈ ರೀತಿಯಾದಂತ ಪ್ರಮಾದ ಆಗಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು. ಅವರು ಎಲ್ಲಾ ಭಾಷೆಯವರನ್ನು ಪ್ರೀತಿಸುತ್ತಾರೆ. ಅವರು ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ ಎಂದರೆ ಕರ್ನಾಟಕದಲ್ಲಿ ಅದು ಎಲ್ಲಾ ಒಂದೇನೆ ಎಂದು ಸಿದ್ದಾರ್ಥ್ ಗೆ ಕ್ಷಮೆ ಕೇಳಿದ್ದಾರೆ.