ಬೆಂಗಳೂರು: ಕಾವೇರಿ ಅನ್ನುವುದು ಸುಮ್ಮನೆ ಅಲ್ಲ. ಇಡೀ ರಾಜ್ಯಕ್ಕೆ ಕೃಷಿಗೆ ಹಾಗೂ ಕುಡಿಯುವುದಕ್ಕೆ ನೀರಿನ ಅಗತ್ಯ ತುಂಬಾನೇ ಇದೆ. ಆದರೆ ಕಾವೇರಿ ಹೋರಾಟ ಎಂದು ಬಂದಾಗ ನೀವೂ ಬನ್ನಿ ನೀವೂ ಬನ್ನಿ ಅಂತ ಕರೆಯಬೇಕು. ಆದರೆ ನೆಲ, ಜಲ, ಭಾಷೆ ಎಂದಾಗ ತಮಿಳರನ್ನು ನೋಡಿ ಕಲಿಯುವುದು ತುಂಬಾ ಇದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
‘ನಾನು ಮೂಲತಃ ರೈತ. ಆಮೇಲೆ ಕಲಾವಿದ. ನಾನೀಗ ಒಂದು ಪಕ್ಷದ ಅಧ್ಯಕ್ಷನಾಗಿದ್ದರು ಮೊದಲಿನಿಂದಲೂ ನಾಡು, ನುಡಿ ವಿಚಾರಕ್ಕೆ ಕಲಾವಿದರನ್ನು ಸೇರಿಸಿ ಹೋರಾಟ ಮಾಡಿದ್ದೇನೆ. ಪಕ್ಷ ಬೇಧ ಮರೆತು ಒಗ್ಗಟ್ಟಾಗಿ ಹೋರಾಟ ಮಾಡುವುದನ್ನು ತಮಿಳರನ್ನು ನೋಡಿ ಕಲಿಯಬೇಕಿದೆ. ಸುಪ್ರೀಂ ಕೋರ್ಟ್ ಕಾವೇರಿ ತೀರ್ಪು ನೀಡುವಾಗ, ಹೋರಾಟ ಮಾಡಿದರೆ ಇಲ್ಲಿನ ಸಮಸ್ಯೆ ಅವರಿಗೆ ಅರಿವಾಗುತ್ತದೆ.
ಕಾವೇರಿ ನೀರಿಗಾಗಿ ಮಾತ್ರವಲ್ಲ ರಾಜ್ಯದ ಯಾವುದೇ ಭಾಗದಲ್ಲಿ ನಾಡು, ನುಡಿ, ಗಡಿ, ರೈತರಿಗೆ ಸಮಸ್ಯೆಯಾದಾಗ ಹೋರಾಟ ಮಾಡುತ್ತೇವೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬೆಂಗಳೂರು ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಮಾಧ್ಯಮಗಳು ಕೂಡ ಬಂದ್ ಯಶಸ್ವಿಯಾಗಲು ಕಾರಣ ಎಂದು ಧನ್ಯವಾದ ತಿಳಿಸಿದರು. ಯಾವುದೇ ಹಾನಿಯನ್ನು ಮಾಡದೇ ಶಾಂತಿಯುತವಾಗಿ ಬಂದ್ ಆಗಿದೆ. ಜನ ಸಂಪೂರ್ಣ ಸಹಕಾರ, ಬೆಂಬಲ ಕೊಟ್ಟರು ಎಂದು ಅವರು ಹೇಳಿದರು.