ಸುದ್ದಿಒನ್, ಹಿರಿಯೂರು, ಸೆ.27 : ತಾಲೂಕಿನ ಉಡುವಳ್ಳಿ ಬಳಿ ಇರುವ ಜವಾಹರ್ ನವೋದಯ ಶಾಲೆಯ 8 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಂಗಳವಾರ ನಡೆದಿದೆ.
ಅಸ್ವಸ್ಥರಾಗೊಂಡ ವಿದ್ಯಾರ್ಥಿಗಳನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫುಡ್ ಪಾಯಿಸನ್ ವಾಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
ಚಿತ್ರದುರ್ಗ : ನವೋದಯ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು pic.twitter.com/jFE16wDgTW
— suddione-kannada News (@suddione) September 27, 2023
ಎಂಟನೇ ತರಗತಿ ವಿದ್ಯಾರ್ಥಿನಿ ಪ್ರಜ್ವಲ್ ಮಾತನಾಡಿ ಬೆಳಿಗ್ಗೆ ಇಡ್ಲಿ ಚಟ್ನಿ ಸಾಂಬಾರ್ ಕೊಟ್ಟಿದ್ದರು ತಿಂದ ನಂತರ ವಾಂತಿ, ತಲೆ ಸುತ್ತು ಬಂತು ಎಂದಿದ್ದಾನೆ. ತಿಪ್ಪೇಸ್ವಾಮಿ, ಚಿರಂತ್, ಮನೋಜ್, ನಾಗೇಶ್, ಭರತ್ ಮತ್ತು ಒಂಬತ್ತನೇ ತರಗತಿಯ ಸುದರ್ಶನ್ ನಾಯಕ ರೋಹಿತ್ ಮತ್ತು ಲಿಖಿತ್ ರಾಜ್ ಎಂಬುವರು ಅಸ್ವಸ್ಥರಾದ ವಿದ್ಯಾರ್ಥಿಗಳಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಮಕ್ಕಳ ತಜ್ಞರಾದ ಡಾ. ಶ್ರೀರಂಗೇಗೌಡ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ.
ಸ್ಥಳೀಯ ವ್ಯಕ್ತಿ ನಾಗೇಶ್ ಎಂಬುವರು ಮಾತನಾಡಿ ಕೇವಲ ಎಂಟು ವಿದ್ಯಾರ್ಥಿಗಳಿಗೆ ಮಾತ್ರ ಈ ರೀತಿ ಆಗಿದ್ದು ಅನುಮಾನಸ್ಪದವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.