ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ, ನಾಳೆ ಬೆಂಗಳೂರು ಬಂದ್ ಮಾಡಲು ರೈತ ಸಂಘಟನೆ, ಬಿಜೆಪಿ ನಾಯಕರು, ಕನ್ನಡಪರ ಸಂಘಟನೆ, ಜೆಡಿಎಸ್ ನಾಯಕರು ಸೇರಿದಂತೆ ಹಲವು ಸಂಘಟನೆಗಳು ನಿರ್ಧರಿಸಿವೆ. ಈಗಾಗಲೇ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಹೋರಾಟ ತೀವ್ರತೆ ಪಡೆದಿದ್ದು, ನಾಳೆ ಬೆಂಗಳೂರು ಬಂದ್ ಮಾಡಲಿದ್ದಾರೆ.
ಬೆಂಗಳೂರು ಬಂದ್ ವೇಳೆ ಯಾರೆಲ್ಲ ಬೆಂಬಲ ನೀಡುತ್ತಿದ್ದಾರೆ..? ಏನೆಲ್ಲಾ ಸೌಲಭ್ಯ ಇರುತ್ತೆ..? ಇರಲ್ಲ ಎಂಬುದರ ಡಿಟೈಲ್ ಇಲ್ಲಿದೆ ನೋಡಿ. ನಾಳೆ 175ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಹೀಗಾಗಿ ಸಾಕಷ್ಟು ಸೌಲಭ್ಯಗಳು ನಾಳೆ ಲಭಿಸುವುದು ಅನುಮಾನವಾಗಿದೆ.
* ಓಲಾ – ಉಬರ್ ಮಾಲೀಕರಿಂದ ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಹೀಗಾಗಿ ನಾಳೆ ಓಲಾ, ಉಬರ್ ಕೂಡ ಇರುವುದಿಲ್ಲ.
* ಬೆಂಗಳೂರು ಬಂದ್ ಗೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಫೆಡರೇಷನ್ ಕೂಡ ಬೆಂಬಲ ಸೂಚಿಸಿದೆ. ಹೀಗಾಗಿ ನಾಳೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸೌಲಭ್ಯವು ಸಿಗುವುದಿಲ್ಲ. ಆದರೆ ಮೆಟ್ರೋ ಸೇವೆ ಮುಂದುವರೆಯಲಿದೆ.
* ವಿಮಾನ ನಿಲ್ದಾಣಗಳ ಟ್ಯಾಕ್ಸಿ ಕೂಡ ಬೆಂಬಲ ಸೂಚಿಸಿದ್ದು, ಸೇವೆ ಲಭ್ಯವಿರುವುದಿಲ್ಲ.
* ಶಾಲಾ-ಕಾಲೇಜುಗಳ ಒಕ್ಕೂಟ ಕೂಡ ಬಂದ್ ಗೆ ಬೆಂಬಲ ಸೂಚಿಸಿದೆ. ಹೀಗಾಗಿ ನಾಳೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
* ರೆಸ್ಟೊರೆಂಟ್ ಮತ್ತು ಹೊಟೆಲ್ ಗಳಿಂದಾನು ಬಂದ್ ಗೆ ಬೆಂಬಲ ಸಿಕ್ಕಿದ್ದು, ನಾಳೆ ಎಲ್ಲಾ ಹೊಟೇಲ್ ಹಾಗೂ ರೆಸ್ಟೊರೆಂಟ್ ಬಾಗಿಲು ಹಾಕಿ, ಹೋರಾಡಕ್ಕೆ ಬೆಂಬಲ ನೀಡುತ್ತಿವೆ.
* ಎಂದಿನಂತೆ ಆಸ್ಪತ್ರೆಗಳು, ಮೆಡಿಕಲ್ ಗಳು ಕಾರ್ಯ ನಿರ್ವಹಿಸಲಿವೆ.