ತುಮಕೂರು: ಈ ಬಾರಿ ಲೋಕಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ದತೆ ನಡೆಯುತ್ತಿದೆ. ಅತ್ತ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದರೆ, ಅತ್ತ ಕಾಂಗ್ರೆಸ್ ಸಿಂಗಲ್ ಆಗಿ ಸ್ಪರ್ಧೆ ಮಾಡಲು ಸಿದ್ಧವಾಗಿದೆ. ಈ ಬೆನ್ನಲ್ಲೇ ಯಾರ್ಯಾರು ಎಲ್ಲೆಲ್ಲಿ ನಿಲ್ಲುತ್ತಾರೆ..? ನಿಂತರೆ ಲಾಭ ನಷ್ಟವೇನು ಎಂಬೆಲ್ಲಾ ಚರ್ಚೆಗಳು ಕೂಡ ನಡೆಯುತ್ತಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಸ್ಪರ್ಧೆ ನಡೆಸಿದ್ದರು. ತುಮಕೂರು ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ನಡೆಸಿದ್ದರು. ದೊಡ್ಡಗೌಡ್ರು ತುಮಕೂರಿನಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಸೋಲು ಕಂಡಿದ್ದರು. ಇದೀಗ ಈ ಬಾರಿಯ ಮೈತ್ರಿಯಲ್ಲೂ ಹೆಚ್ ಡಿ ದೇವೇಗೌಡ ಅವರು ತುಮಕೂರಿನಿಂದಾನೇ ಸ್ಪರ್ಧೆ ನಡೆಸುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಸಹಕಾರಿ ಸಚಿವ ಕೆ ಎನ್ ರಾಜಣ್ಣಯ ಪ್ರತಿಕ್ರಿಯೆ ನೀಡಿದ್ದಾರೆ. ಕೊರಟಗೆರೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಗಳನ್ನು ಗೆಲ್ಲಿಸಿದ ಕೀರ್ತಿ ಬರಲಿ. ಆ ಅವಕಾಶವನ್ನು ನಮಗೆ ಕೊಡಲಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧೆ ಮಾಡಲಿ. ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ ಅವರು ತುಮಕೂರಿಗೆ ಬಂದರೆ ಸ್ವಾಗತ. ಮಾಜಿ ಪ್ರಧಾನಿ ಅವರನ್ನು ಗೆಲ್ಲಿಸುವ ಅವಕಾಶ ನೀಡಬೇಕು ಎಂದು ನಗು ನಗುತ್ತಾ ಸ್ವಾಗತಿಸಿದ್ದಾರೆ.