ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಹಿಂದೂ ಯುವಕರಲ್ಲಿ ನಮ್ಮ ಪೂರ್ವಜರ ಮತ್ತು ಹುತಾತ್ಮರ ಜೀವನದ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುವುದು. ಅವರ ಪ್ರೇರಣೆಯಿಂದ ಸ್ಫೂರ್ತಿ ಪಡೆದು ಯುವಕರು ದೇಶಕ್ಕಾಗಿ ಬದುಕುವ ಸಂಕಲ್ಪ ಮಾಡಿಸುವುದು ಶೌರ್ಯ ಜಾಗರಣ ರಥಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ದಕ್ಷಿಣ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ತಿಳಿಸಿದ್ದಾರೆ.
ಸೆಪ್ಟೆಂಬರ್ 25 ರಂದು ಚಿತ್ರದುರ್ಗದಲ್ಲಿ ಶೌರ್ಯ ಜಾಗರಣ ರಥಯಾತ್ರೆಗೆ ಸಿದ್ದವಾಗಿರುವ ರಥ pic.twitter.com/cDbfYyIJFF
— suddione-kannada News (@suddione) September 21, 2023
ನಗರದ ಹಿಂದು ಮಹಾ ಗಣಪತಿ ಸಭಾ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಘೋಷಣೆಯಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯಕ್ಕಾಗಿ ಸಂಕಲ್ಪ ಮಾಡಿಸುವುದು ಮುಖ್ಯ ಕಾರ್ಯಕ್ರಮವಾಗಿದೆ. ಯುವಕರನ್ನು ವ್ಯಸನಗಳಿಂದ ಮುಕ್ತಿಗೊಳಿಸಿ, ಸಂಸ್ಕಾರವನ್ನು ನೀಡಿ ದೇಶಭಕ್ತರನ್ನಾಗಿಸುವುದು ಲವ್ ಜಿಹಾದ್, ಮತಾಂತರ, ಗೋಹತ್ಯೆ ಇವುಗಳನ್ನು ತಡೆದು ಹಿಂದೂ ಧರ್ಮದ ರಕ್ಷಣೆ ಮುಖ್ಯವಾಗಿದೆ ಈ ಮೂಲಕ ಇಡೀ ದೇಶದ ಯುವಕರನ್ನು ಸಂಘಟಿಸಿ, ದೇಶದ ಯುವಶಕ್ತಿ ರಾಷ್ಟ್ರಶಕ್ತಿಯನ್ನಾಗಿಸುವ ಕಾರ್ಯವನ್ನು ಮಾಡುವುದು ನಮ್ಮ ಉದ್ದೇಶ ಎಂದರು.
ಕರ್ನಾಟಕ ದಕ್ಷಿಣ ಬಜರಂಗದಳದ ಪ್ರಾಂತ ಸಹ ಸಂಯೋಜಕ್ ಪ್ರಭಂಜನ್ ಎಸ್.ಆರ್. ಮಾತನಾಡಿ ಹಿಂದೂ ಧರ್ಮದ ವೈಭವಯುತ ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುತ್ತಾ ಸಮಾಜಕ್ಕೆ ಅನ್ಯರಿಂದ ಆಗಿರುವ ಹಾನಿ ಹಾಗೂ ಪ್ರಸ್ತುತ ಆಗುತ್ತಿರುವ ಹಾನಿ ಅನ್ಯರ ತುಷ್ಟಿಕರಣ ಮಾಡಿ ರಾಜಕೀಯ ಮಾಡುತ್ತಿರುವ ಪರಿ ತಿಳಿಸಿ ಅದನ್ನು ತುಳಿದು ನಿಂತು ಗೌರವಯುತ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಕೊಡುವುದು ಉದ್ದೇಶವಾಗಿದೆ ಎಂದರು.
ಹಿಂದೂ ಧರ್ಮದ ಅಡಿಪಾಯಗಳಾದ ಗೋವು, ದೇವಸ್ಥಾನಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣೆ ಕೊಡುವುದು.ಸಮಾಜದಲ್ಲಿ ಪರಸ್ಪರ ಸಾಮರಸ್ಯ ಕಾಪಾಡಿ ನಮ್ಮ ಹೆಮ್ಮೆಯ ಸನಾತನ ಹಿಂದೂಧರ್ಮ ಮತ್ತು ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಹೇಳಿ ಸಮರ್ಪಕವಾಗಿ ಆಚರಿಸುವಂತೆ ಪ್ರೇರಣೆ ನೀಡುವುದು. ಯುವಪೀಳಿಗೆಯನ್ನು ಪಾಶ್ಚಾತ್ಯ ಪ್ರಭಾವದಿಂದ ಹೊರ ತಂದು ಮಹಾ ಪಾತಕಗಳಿಂದ ಮುಕ್ತಗೊಳಿಸಿ ನಮ್ಮ ಹೆಮ್ಮೆಯ ಧರ್ಮ ಆಚರಣೆಗೆ ಸಿದ್ಧಪಡಿಸುವ ಯೋಜನೆ ಮತ್ತು ಪ್ರೇರೇಪಣೆ ಮಾಡುವುದು ಉದ್ದೇಶವಾಗಿದೆ.
ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುವುದು ರಾಷ್ಟ್ರನಿರ್ಮಾಣದ ಮಹಾ ಯಜ್ಞದಲ್ಲಿ ನಾವೆಲ್ಲರೂ ಭಾಗವಹಿಸೋಣ ಭಾರತ ಮಾತೆಯ ರಕ್ಷಣೆಯ ಸಂಕಲ್ಪವನ್ನು ಸ್ವೀಕರಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗೃತ ರಥ ಯಾತ್ರೆಯಲ್ಲಿ ಭಾಗವಹಿಸಿ ಎಂದರು.
ಸೆ. 25 ರಂದು ಬೆಳಿಗ್ಗೆ 10ಕ್ಕೆ ಹಿಂದು ಮಹಾ ಗಣಪತಿಯ ಶಕ್ತಿ ಮಂಟಪದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದರ ಸಾನಿದ್ಯವನ್ನು ನಗರದ ಕಬೀರಾನಂದ್ರಾಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು,ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಭೋವಿ ಗುರುಪೀಠ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಹೊಸದುರ್ಗದ ಕುಂಚಟಿಗ ಮಹಾ ಸಂಸ್ಥಾನ, ಡಾ.ಶ್ರೀ ಶಾಂತವೀರ ಮಹಾಸ್ವಾಮಿಗಳು, ಯಾದವ ಮಹಾ ಸಂಸ್ಥಾನದ ಶ್ರೀ ಕೃಷ್ಣ ಯಾದವಾನಂದ ಶ್ರೀಗಳು, ಮದುರಯ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಶ್ರೀಗಳು, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಶ್ರೀಗಳು, ಲಂಬಾಣಿ ಗುರುಪೀಠದ ಸೇವಾಲಾಲ್ ಶ್ರೀಗಳು ವಹಿಸಲಿದ್ದಾರೆ.
ಚಿತ್ರದುರ್ಗ ದಲ್ಲಿ ಸೆಪ್ಟೆಂಬರ್ 21 ರಂದು ಉದ್ಘಾಟನೆಗೊಂಡು ದಾವಣಗೆರೆ, ಶಿವಮೊಗ್ಗ, ಸಾಗರ, ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಂಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಕೊಡಗು, ಸುಳ್ಯ, ಪುತ್ತೂರು, ಮಂಗಳೂರು ಮೂಲಕ ಉಡುಪಿಯಲ್ಲಿ ಅಕ್ಟೋಬರ್ 10 ಸಮಾರೋಪಗೊಳ್ಳಲಿದೆ.
ಪ್ರಾಸ್ತಾವಿಕ ನುಡಿಯನ್ನು ರಾಷ್ಟ್ರೀಯ ಸಹ ಸಂಯೋಜಕರು, ಬಜರಂಗದಳದ ಸೂರ್ಯನಾರಾಯಣ ದಿಕ್ಕೂಚಿ ಭಾಷಣವನ್ನು ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್‍ನ ಸ್ಥಾಣುಮಾಲಯನ್
ಪ್ರಾಂತ ಸಹ ಕಾರ್ಯವಾಹರು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣದ ಪಟ್ಟಾಭಿರಾಮ ಉಪಸ್ಥಿತರಿರುವರು
ಗೋಷ್ಟಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ಸಮಿತಿಯ ಅಧ್ಯಕ್ಷರಾದ ಜಿ.ಎಂ.ಸುರೇಶ್, ಪ್ರಾಂತ ಸಮಿತಿ ಸದಸ್ಯರಾದ ಟಿ.ಬದರಿನಾಥ್ ಉಪಸ್ಥಿತರಿದ್ದರು.