ಚಿತ್ರದುರ್ಗ, ಸೆ.21: ಜಿಲ್ಲೆಯಲ್ಲಿ ಪ್ರತಿಷ್ಟಾಪಿಸಲಾಗಿರುವ ಪ್ರಮುಖ ಗಣಪತಿಗಳ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಗಣಪತಿ ವಿಸರ್ಜನೆ ನಡೆಯುವ ಸ್ಥಳಗಳ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.
ಪ್ರಮುಖ ಗಣೇಶ ವಿಸರ್ಜನೆಯ ದಿನಾಂಕಗಳ ವಿವರ ಇಂತಿದೆ. ಸೆ.24ರಂದು ಮೊಳಕಾಲ್ಮೂರು ಪಟ್ಟಣ, ಸೆ.26ರಂದು ಹೊಸದುರ್ಗ ಪಟ್ಟಣ, ಸೆ.27ರಂದು ಭರಮಸಾಗರ ಗ್ರಾಮ ಹಾಗೂ ನಾಯಕನಹಟ್ಟಿ ಪಟ್ಟಣ, ಸೆ.30ರಂದು ಹೊಳಲ್ಕೆರೆ ಪಟ್ಟಣ, ಹೊಸದುರ್ಗ ಪಟ್ಟಣ ಹಾಗೂ ಚಳ್ಳಕೆರೆ ನಗರ, ಅಕ್ಟೋಬರ್ 01ರಂದು ಹಿರಿಯೂರು ನಗರ , ಅ.08ರಂದು ಚಿತ್ರದುರ್ಗ ನಗರದಲ್ಲಿ ಪತ್ರಿಷ್ಠಾಪಿಸಲಾಗಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ವಿಸರ್ಜನೆ ನಡೆಯುವ ಸ್ಥಳದ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ವಿಸರ್ಜನಾ ದಿನಾಂಕಗಳಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ ಹೊರಡಿಸಿದ್ದಾರೆ.