Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀ ಬಸವಲಿಂಗ ಸ್ವಾಮೀಜಿ ಅವರ ಜನಪರ ಕಾರ್ಯಗಳು ನಾಡಿಗೆ ಮಾದರಿ : ಮಾಜಿ ಸಚಿವ ಎಚ್.ಆಂಜನೇಯ

Facebook
Twitter
Telegram
WhatsApp

 

ಸುದ್ದಿಒನ್, ಮೊಳಕಾಲ್ಮೂರು, ಸೆ.20: ಸಿದ್ದಯ್ಯನಕೋಟೆ ವಿಜಯ ಮಹಾಂತ ಶಾಖಾ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಜನಪರ ಕಾರ್ಯಗಳು ನಾಡಿಗೆ ಮಾದರಿ ಆಗಿವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಶ್ರೀಗಳು ಶಾಖಾ ಮಠದ ಪೀಠಾಧ್ಯಕ್ಷರಾಗಿ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಜತ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ನನ್ನನ್ನು ಹಾಗೂ ಗೌರವಾಧ್ಯಕ್ಷರನ್ನಾಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಬಹುದೊಡ್ಡ ಹೊಣೆಗಾರಿಕೆ ನಮ್ಮ ಹೆಗಲಿಗೆ ಮಠದ ಭಕ್ತರು ವಹಿಸಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.

25 ವರ್ಷಗಳ ಹಿಂದೆ ಇಳಕಲ್‍ನಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅಂದು ಪಾಲ್ಗೊಂಡಿದ್ದ ರಾಮವಿಲಾಸ್ ಪಾಸ್ವಾನ್ ಅವರು, ಬಸವಣ್ಣನ ಹೆಸರು, ಆಶಯ, ತತ್ವ ಪ್ರಚಾರದಲ್ಲಿ ತೊಡಗಿರುವ ಮಠಗಳು ಇಲ್ಲಿಯವರೆಗೂ ತಮ್ಮ ಮಠಗಳಿಗೆ ದಲಿತ ವರ್ಗದವರನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲದಿರುವುದು ನೋವು ತರಿಸಿದೆ ಎಂದು ಹೇಳಿದ್ದರು.

ಈ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಇಳಕಲ್ ಮಹಾಂತ ಅಪ್ಪಗಳು, ಮೊಳಕಾಲ್ಮೂರು ತಾಲೂಕಿನ ಈ ಶಾಖಾ ಮಠಕ್ಕೆ ಅಸ್ಪಶ್ಯ ಜಾತಿಯ ಬಸವಲಿಂಗ ಸ್ವಾಮೀಜಿ ಅವರನ್ನು ಪೀಠಾಧ್ಯಕ್ಷರನ್ನಾಗಿ ಮಾಡುವ ಮೂಲಕ ಬಹುದೊಡ್ಡ ಕ್ರಾಂತಿಗೆ 25 ವರ್ಷದ ಹಿಂದೆಯೇ ಮುನ್ನುಡಿ ಬರೆದರು ಎಂದು ಸ್ಮರಿಸಿದರು.

ಮಹಾಂತ ಅಪ್ಪಗಳ ಆಶಯ, ನಂಬಿಕೆಗೆ ಚ್ಯುತಿ ಬರದ ರೀತಿ ಬರಗಾಲ ಪೀಡಿತ, ಅನಕ್ಷರತೆ ಪ್ರದೇಶದಲ್ಲಿ ಅನ್ನ, ಅಕ್ಷರ, ಜ್ಞಾನ ದಾಸೋಹದ ಬೀಜ ಬಿತ್ತಿ ಸಾಮಾಜಿಕ ಪ್ರಜ್ಞೆಯ ಬೆಳೆ ತೆಗೆಯುವ ಮೂಲಕ ಉತ್ತಮ ನಾಡು ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರೀಗಳು ಬಸವಣ್ಣ, ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಬಣ್ಣಿಸಿದರು.

ಜಮೀನಿನಲ್ಲಿ ಸ್ವತಃ ತಾವೇ ಭೂಮಿ ಹದ ಮಾಡಿ, ಬಿತ್ತನೆ, ಕಳೆ, ಕಟಾವು ಸೇರಿ ಎಲ್ಲ ಕಾರ್ಯ ಕೈಗೊಂಡು, ಅದರಲ್ಲಿ ಬೆಳೆದ ಬೆಳೆಯನ್ನು ಮಠದಲ್ಲಿನ 200 ವಿದ್ಯಾರ್ಥಿಗಳಿಗೆ ತಾವೇ ಅಡುಗೆ ತಯಾರಿಸಿ ಅಮ್ಮನ ಸ್ಥಾನದಲ್ಲಿ ನಿಂತು ಊಟ ಬಡಿಸುವುದು ಹಾಗೂ ಮಠಕ್ಕೆ ಭೇಟಿ ನೀಡುವ ಭಕ್ತರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವ ಸ್ವಾಮೀಜಿ ಕಾರ್ಯ ಅನುಕರಣೀಯ ಆಗಿದೆ ಎಂದು ಹೇಳಿದರು.

ಚಿಕ್ಕ ಮಠವೊಂದು ಬರಡು ಪ್ರದೇಶದಲ್ಲಿ ಶೈಕ್ಷಣ ಕ, ಸಾಮಾಜಿಕ ಕಾರ್ಯದಲ್ಲಿ ಮಾಡಿರುವ ಬದಲಾವಣೆ ಕಾರ್ಯಗಳು ನಿಜಕ್ಕೂ ವಿಸ್ಮಯಗೊಳಿಸುತ್ತವೆ. ಕಂದಾಚಾರಣೆ ವಿರುದ್ಧ ಜನ ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ವೈಚಾರಿಕ ಜ್ಞಾನ ಬಿತ್ತುವ ಕೆಲಸವನ್ನು ಶ್ರೀಗಳು ನಿರಂತರ ಮಾಡುತ್ತಿದ್ದಾರೆ.  ಆದ್ದರಿಂದ ಶ್ರೀಗಳ ಪೀಠರೋಹಣದ ರಜತ ಮಹೋತ್ಸವವನ್ನು ಐದು ದಿನಗಳ ಅರ್ಥಪೂರ್ಣವಾಗಿ 2024ರ ಫೆಬ್ರವರಿ ತಿಂಗಳಲ್ಲಿ ಆಚರಣೆಗೆ ಸಕಲ ಸಿದ್ಧತೆ ಈಗಿನಿಂದಲೇ ಕೈಗೊಳ್ಳಬೇಕು. ನಾಡಿನ ಎಲ್ಲ ಮಠಾಧೀಶರು, ಚಿಂತಕರು, ಸಾಹಿತಿಗಳನ್ನು ಕರೆಯಿಸಬೇಕು. ಕೊನೆಯ ದಿನದ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ವಿವಿಧ ಕ್ಷೇತ್ರದ ಗಣ್ಯರನ್ನು ಕರೆಯಿಸಬೇಕು ಎಂದು ಹೇಳಿದರು.

ಬಿ.ಜಿ.ಕೆರೆಯಲ್ಲಿ ಬಸವ ಅಂಬೇಡ್ಕರ್ ಭವನ ಕಾಮಗಾರಿ ಅಪೂರ್ಣವಾಗಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಿ, ಮುಖ್ಯಮಂತ್ರಿಗಳಿಂದ ಉದ್ಘಾಟಿಸುವ ಮೂಲಕ ಶ್ರೀಗಳ ಪೀಠಾರೋಹಣ ರಜತಮಹೋತ್ಸವವನ್ನು ಸ್ಮರಣೆಯಗೊಳಿಸಲು ಭಕ್ತರು ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ದೊರೆಯಬೇಕಾಗದ ಸಹಕಾರ ಕೊಡಿಸಲು ನಾನು ಮತ್ತು ಶಾಸಕ ಎನ್.ವೈ.ಗೋಪಾಲಕೃಷ್ಣ ಜತೆಗೂಡಿ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಮಠಾಧೀಶರೊಬ್ಬರು ಹೇಗೆ ತನ್ನ ಪ್ರದೇಶದಲ್ಲಿನ ಜನರನ್ನು ವೈಚಾರಿಕತೆಯತ್ತ ಕೊಂಡೊಯ್ಯಬಹುದು. ಆರ್ಥಿಕ ಸಂಕಷ್ಟದಲ್ಲೂ ಶಿಕ್ಷಣ ಸಂಸ್ಥೆ ಕಟ್ಟಿ ಬಡ ಮಕ್ಕಳನ್ನು ವಿದ್ಯಾವಂತರನ್ನಾಗಿಸಬಹುದು ಎಂಬುದಕ್ಕೆ ಬಸವಲಿಂಗ  ಸ್ವಾಮೀಜಿಗಳ ಕಾರ್ಯಗಳು ನಮ್ಮ ಮುಂದೆ ಇವೆ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೊಡಿಸಿಕೊಳ್ಳಬೇಕು. ಅವರ ಆಶಯದಂತೆ ಶಿಕ್ಷಣಕ್ಕೆ ಈ ಪ್ರದೇಶದ ಜನ ಇನ್ನೂ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠ ಸಿದ್ದಯ್ಯನಕೋಟೆ, ಪೂಜ್ಯಶ್ರೀ ಮಹಾಂತ ಸ್ವಾಮೀಜಿ ಮುದಗಲ್ ಕಲ್ಯಾಣಶ್ರಮ ತಿಮ್ಮಾಪುರ, ಶ್ರೀಮಠದ ಕಾರ್ಯದರ್ಶಿ ಪಿ.ಆರ್.ಕಾಂತರಾಜ್, ಪಟೇಲ್ ಜಿ.ಪಾಪ ನಾಯಕ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ, ಕೆ.ಚಂದ್ರಪ್ಪ ಬಿ.ಎಸ್.ವೀರಭದ್ರಪ್ಪ, ಕೆ.ಬಸಣ್ಣ, ಜಿ.ಪಿ.ಸುರೇಶ್, ಲಕ್ಷ್ಮಣ, ನೀಲಕಂಠ, ತುಳಸಿ, ರುದ್ರಮ್ಮ, ಮಹಾದೇವಿ, ಜಯಲಕ್ಷ್ಮಿ, ಶ್ರೀವಿಜಯ ಮಹಾಂತೇಶ್ವರ ಮಹಿಳಾ ಮಂಡಳಿ ಅಕ್ಕನ ಬಳಗ ಸದ್ಭಕ್ತರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!