ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿವೆ. ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಉರುಳಿಸಲು ಸಜ್ಜಾಗಿವೆ. ಆದರೆ ಇದರ ನಡುವೆ ಗೊಂದಲ ಉಂಟು ಮಾಡಿರುವುದೇ ಕ್ಷೇತ್ರ ಹಂಚಿಕೆ ವಿಚಾರ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಕೆಲವೊಂದು ಕ್ಷೇತ್ರಗಳು ಬಹಳ ಮುಖ್ಯವಾಗುತ್ತದೆ. ಈ ಮೂಲಕ ಕ್ಷೇತ್ರ ಹಂಚಿಕೆಯೇ ಕಗ್ಗಂಟಾಗಿ ಉಳಿದಿತ್ತು. ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರೇ ಸಲಹೆ ನೀಡಿದ್ದು, ಆ ಸಲಹೆಗೆ ಪ್ರಧಾನಿ ಮೋದಿ ಕೂಡ ಅಸ್ತು ಎಂದಿದ್ದಾರಂತೆ.
ದೋಸ್ತಿ ರಾಜಕಾರಣದಲ್ಲಿ ಬಿಜೆಪಿಯ ಅಂದಾಜಿನ ಪ್ರಕಾರ ಜೆಡಿಎಸ್ ಗೆ ಮೂರು ಮತ್ತೊಂದು ಕೊಡುವುದಕ್ಕೆ ರೆಡಿಯಾಗಿತ್ತು. ಆದರೆ ಈಗ ಜೆಡಿಎಸ್ ಕನಿಷ್ಠ ಆರು ಕ್ಷೇತ್ರ ಆದರೂ ಬೇಕು ಅಂತಿದೆ. ಹೀಗಾಗಿ ಮೋದಿ ಅವರಿಗೆ ದೇವೇಗೌಡ್ರೆ ಸಲಹೆ ನೀಡಿದ್ದು, ಎಲೆಕ್ಷನ್ ಗೂ ಮುನ್ನ ಸರ್ವೇ ನಡೆಸಲು ಸೂಚಿಸಿದ್ದಾರೆ.
ಜೆಡಿಎಸ್ ಗೆಲ್ಲುವ ಕ್ಷೇತ್ರಗಳಲ್ಲಿ ನಾನು ಸಮೀಕ್ಷೆ ಮಾಡಿಸುತ್ತೇನೆ. ಬಿಜೆಪಿ ಗೆಲ್ಲುವ ಕ್ಷೇತ್ರಗಳಲ್ಲಿ ನೀವು ಸರ್ವೇ ಮಾಡಿಸಿ ಅಂತ ಸಲಹೆ ನೀಡಿದ್ದಾರೆ. ಈ ಸರ್ವೇ ಬಳಿಕ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡೋಣ ಅಂತ ಗೌಡರು ಸಜೆಸ್ಟ್ ಮಾಡಿದ್ದಾರೆ. ಈ ಮಾತಿಗೆ ಒಪ್ಪಿಗೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ನಾಯಕರಿಗೆ ಸರ್ವೇ ಮಾಡಿಸಲು ಆರ್ಡರ್ ಮಾಡಿದ್ದಾರೆ.