ಬೆಂಗಳೂರು: ಒಂದು ಕಡೆ ಲೋಕಸಭಾ ಚುನಾವಣೆಗಳ ಭರ್ಜರಿ ತಯಾರಿಯ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳಗೂ ಹೊಸ ಹೊಸ ವಿಚಾರಗಳು, ಸಂಗತಿಗಳು ನಡೆಯುತ್ತಿವೆ. ಅದುವೆ ಡಿಸಿಎಂ ವಿಚಾರಕ್ಕೆ. ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಡಿಸಿಎಂ ಆಗಿದ್ದಾರೆ. ಇದೀಗ ಅವರ ಜೊತೆಗೆ ಇನ್ನು ಮೂವರು ಡಿಸಿಎಂಗಳಾಗಲಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಈ ವಿಚಾರ ಬಾರಿ ಚರ್ಚೆಯಾಗುತ್ತಿದ್ದು, ಸಹಕಾರಿ ಸಚಿವ ಕೆ ಎನ್ ರಾಜಣ್ಣ ಈ ಸಂಬಂಧ ಹೈಕಮಾಂಡ್ ಬಳಿ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ. ಅದರ ಜೊತೆಗೆ ಪತ್ರ ಬರೆಯುವುದಕ್ಕೆ ಕೆ ಎನ್ ರಾಜಣ್ಣ ಮುಂದಾಗಿದ್ದಾರೆ ಎನ್ನಲಾಗಿದೆ. ವೀರಶೈವ, ಎಸ್‌ಸಿ/ಎಸ್ಟಿ, ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ಬೇಕು ಎಂದು ಡಿಮ್ಯಾಂಡ್ ಇಡಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಬೇರಿ ಬಾರಿಸಿದ್ದೇವೆ. ಈಗ ಲೋಕಸಭಾ ಚುನಾವಣೆ ಬರುತ್ತಿದೆ. ಈ ಚುನಾವಣೆಯಲ್ಲೂ ಜಯಬೇರಿ ಬಾರಿಸುವ ಅಗತ್ಯವಿದೆ. ಹೀಗಾಗಿ ಮೂರು ಡಿಸಿಎಂಗಳು ಬೇಕಾಗಿದ್ದಾರೆ ಎಂದು ಹೈಕಮಾಂಡ್ ಗೆ ಬರೆಯುವ ಪತ್ರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಬಹುಮತಗಳೊಂದಿಗೆ ಜಯಗಳಿಸಿದ್ರು, ಸಿಎಂ ಹುದ್ದೆಗೆ ಸ್ಪರ್ಧೆ ಇತ್ತು. ಡಿಕೆ ಶಿವಕುಮಾರ್ ಅವರು ಸಿಎಂ ಹುದ್ದೆ ಬಿಟ್ಟುಕೊಡುವ ಮಾತೇ ಇರಲಿಲ್ಲ. ಆದರೂ ಹೈಕಮಾಂಡ್ ಮಾತಿಗೆ ಮಣಿದು, ಸದ್ಯ ಡಿಸಿಎಂ ಸ್ಥಾನ ಹಾಗೂ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಅದು ಕೆಲವೊಂದು ಕಂಡೀಷನ್ ಮೇಲೆ. ಇದೀಗ ಮತ್ತೆ ಮೂರು ಡಿಸಿಎಂಗಳ ಸ್ಥಾನಗಳನ್ನು ನೀಡುವುದು ಅನುಮಾನವಾಗಿದೆ.