ಚಂದ್ರಯಾನ 3 ಬಳಿಕ ಇಸ್ರೋ ಸೂರ್ಯಯಾನ ಉಡಾವಣೆಯನ್ನು ಮಾಡಲಾಗಿದೆ. ಅದರ ಹೊಸ ಅಪ್ಡೇಟ್ ಅನ್ನು ಇದೀಗ ಇಸ್ರೋ ನೀಡಿದೆ. ಸೂರ್ಯಯಾನ ಅಧ್ಯಯನಕ್ಕಾಗಿ ಆದಿತ್ಯ L-1 ಮಿಷನ್ ಲಾಂಚ್ ಮಾಡಲಾಗಿದೆ. ಈ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಮಿಷನ್ ತನ್ನ 4ನೇ ಭೂ ಸುತ್ತುವಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭೂಮಿಯ 5ನೇ ಸುತ್ತಿನತ್ತ ತನ್ನ ಪಯಣ ಪ್ರಾರಂಭ ಮಾಡಿದೆ. ಆದಿತ್ಯನಿಗಾಗಿ ಸದ್ಯ ಫಿಜಿ ದ್ವೀಪಗಳಲ್ಲಿರುವ ಟರ್ಮಿನಲ್ ಬರ್ನ್ ಆಪರೇಷನ್ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ.
ಇದಕ್ಕೂ ಮುನ್ನ ಮಾರಿಷಸ್, ಬೆಂಗಳೂರು, SDSC-SHARS, ಮತ್ತು ಪೋರ್ಟ್ ಬ್ಲೇರ್ ನಲ್ಲಿರುವ ಇಸ್ರೋ ಗ್ರೌಂಡ್ ಸ್ಟೇಷನ್ ಗಳು ಆದಿತ್ಯ ನನ್ನು ಟ್ರ್ಯಾಕ್ ಮಾಡಿದ್ದವು. ಆದಿತ್ಯ ಮಿಷನ್ 256 ಕಿಮೀ x 121973 ಕಿ.ಮೀ.ನಿಂದ ಹೊಸ ಕಕ್ಷೆಯು ಸಾಧಿಸಿದೆ. ಮುಂದಿನ ಕುಶಲತೆಯಾದ ಟ್ರಾನ್ಸ್-ಲಗ್ರೇಜಿಯನ್ ಪಾಯಿಂಟ್- 1 ಅಳವಡಿಸಲಾಗಿದೆ. ಮುಂದಿನ ಕಾರ್ಯಾಚರಣೆಯು 2023 ಸೆಪ್ಟೆಂಬರ್ 19 ರಂದು ಸುಮಾರು 2:00 ಗಂಟೆಗಳಿಗೆ ನಿಗದಿಪಡಿಸಲಾಗಿದೆ.