ಕವಾಡಿಗರಹಟ್ಟಿ ಪ್ರಕರಣ : ಮೃತ ಕುಟುಂಬದ ಓರ್ವ ವ್ಯಕ್ತಿಗೆ ಸರ್ಕಾರಿ ನೌಕರಿ : ದಲಿತ ಸಂಘರ್ಷ ಸಮಿತಿಯ ಸಿ. ಹೆಚ್. ಮಂಜುನಾಥ ಅವರು ಹೇಳಿದ್ದೇನು ?

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಸೆ. 14) : ಕವಾಡಿಗರಹಟ್ಟಿ ಪ್ರದೇಶದಲ್ಲಿ ಮೃತ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ನೌಕರಿ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರ ಆದೇಶ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ದಾದಾಸಾಹೇಜ್, ಡಾ. ಎನ್.ಮೂರ್ತಿ ಬಣ) ಜಿಲ್ಲಾಧ್ಯಕ್ಷರಾದ ಸಿ. ಹೆಚ್. ಮಂಜುನಾಥ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕವಾಡಿಗರಪಟ್ಟಿ ಸಂತ್ರಸ್ತರ ಪರವಾಗಿ ರಾಜ್ಯಾಧ್ಯಕ್ಷರಾದ ಡಾ. ಎನ್.ಮೂರ್ತಿರವರ ನೇತೃತ್ವದಲ್ಲಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಹೋರಾಟ ನಡೆಸಿದ್ದು, ಹಾಗೂ ಸೆ. 01 ರಂದು ಸಂಘಟನೆಯಿಂದ 4 ದಿನಗಳ ಕಾಲ ಸರದಿ ಉಪವಾಸ ಸತ್ಯಾಗ್ರಹವನ್ನು ಸಹ ಮಾಡಿದ್ದು, ಹಾಗೂ ಸೆ. 11 ರಂದು ದ.ಸಂ.ಸ. ರಾಜ್ಯಾಧ್ಯಕ್ಷರು ಹಾಗೂ ನೂರಾರು ಸದಸ್ಯರು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರ ನಿವಾಸಕ್ಕೆ ನಿಯೋಗ ಹೋಗಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂಧಿಸಿದ ಸಚಿವರು ಕವಾಡಿಗರಹಟ್ಟಿಯ ಪ್ರಕರಣದಲ್ಲಿ ಮರಣ ಹೊಂದಿದ 6 ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಆದೇಶ ಮಾಡಿರುತ್ತಾರೆ ಎಂದು ತಿಳಿಸಿದರು.

ಈಗಾಗಲೇ ‘ಕವಾಡಿಗರಹಟ್ಟಿ ಪ್ರದೇಶದ ಅಭಿವೃದ್ಧಿಗಾಗಿ, ಮೂಲಭೂತ ಸೌಲಭ್ಯಗಳಿಗಾಗಿ ಸರ್ಕಾರದಿಂದ ನಾಲ್ಕುವರೆ ಕೋಟಿ ಮಂಜೂರಾಗಿದ್ದು, ಮತ್ತು ಇನ್ನು ಹಲವಾರು ಬೇಡಿಕೆಗಳು ಸರ್ಕಾರದ ಮುಂದಿದ್ದು, ಜರೂರಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಗಮನಹರಿಸಿ, ಬೇಡಿಕೆಗಳನ್ನು ಈಡೇರಿಸಿ, ಪರಿಹಾರ ರೂಪವಾಗಿ ಪರಿಹಾರ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದು, ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷ ಎನ್.ಮೂರ್ತಿ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಮಾಲೋಚಿಸಿ, ಮುಂದೆ ಪ್ರತಿಭಟನೆಗಳ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ, ಜೆ.ಜೆ.ಹಟ್ಟಿ, ಚನ್ನಿಗರಾಮಯ್ಯ, ಎಂ.ಆರ್.ಶಾಂತಕುಮಾರ್, ಎನ್.ರಂಗಸ್ವಾಮಿ (ಸಂ), ವೀರಭದ್ರಪ್ಪ ಹಿರೇಗುಂಟನೂರು, ಸುರೇಶ್ ತಮಟಕಲ್ಲು, ಬಿ.ಹೆಚ್.ಪರಮೇಸ್, ವೆಂಕಟೇಶ್ ಸಿಂಗಾಪುರ, ಹೆಚ್.ಹೊನ್ನೂರಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *