Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏಷ್ಯಾ ಕಪ್ 2023 IND VS SL : ಲಂಕಾ ವಿರುದ್ಧ ಜಯ,  ಫೈನಲ್‌ ತಲುಪಿದ ಭಾರತ

---Advertisement---

 

ಸುದ್ದಿಒನ್ ಡೆಸ್ಕ್

ಬೌಲರ್‌ಗಳು ತಮ್ಮ ಉತ್ತಮ ಪ್ರದರ್ಶನ ನೀಡಿದ್ದರಿಂದ ಭಾರತವು ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ 2023 ಟೂರ್ನಿಯ ಸೂಪರ್-4 ಪಂದ್ಯವನ್ನು ಗೆದ್ದಿದೆ. ನಿನ್ನೆ (ಸೆಪ್ಟೆಂಬರ್ 12) ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 41 ರನ್ ಗಳ ಜಯ ಸಾಧಿಸಿದೆ. ಇದರೊಂದಿಗೆ 2023ರ ಏಷ್ಯಾಕಪ್ ಟೂರ್ನಿಯ ಫೈನಲ್ ತಲುಪಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟಾಯಿತು. ರೋಹಿತ್ ಶರ್ಮಾ (53) ಅರ್ಧಶತಕದೊಂದಿಗೆ ಮಿಂಚಿದರು. ಕೆಎಲ್ ರಾಹುಲ್ (39) ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಶ್ರೀಲಂಕಾ ಬೌಲರ್‌ಗಳ ಪೈಕಿ ದಿನುತ್ ವೆಲ್ಲಾಲ ಐದು ವಿಕೆಟ್ ಕಬಳಿಸಿದರೆ, ಚರಿತ್ ಅಸಲಂಕಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಭಾರತದ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಶ್ರೀಲಂಕಾ 41.3 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ನಾಲ್ಕು ವಿಕೆಟ್‌ಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದರು.ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಸಿರಾಜ್ ಮತ್ತು ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಅಲ್ಪ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು. ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ತಂಡವನ್ನು ಗೆಲ್ಲಿಸಿದರು. ಬೌಲಿಂಗ್ ನಲ್ಲಿ ಬಲಿಷ್ಠರಾಗಿದ್ದ ದುನಿತ್ ವೆಲ್ಲಾಲೆ (ಔಟಾಗದೆ 42) ಬ್ಯಾಟಿಂಗ್ ನಲ್ಲೂ ಮಿಂಚಿದರೂ ಶ್ರೀಲಂಕಾ ಗೆಲ್ಲಲಾಗಲಿಲ್ಲ. ಧನಂಜಯ ಡಿ’ಸಿಲ್ವಾ (41) ಆಕರ್ಷಕ ಆಟವಾಡಿದರೂ ಲಂಕಾದ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಈ ಗೆಲುವಿನೊಂದಿಗೆ ಭಾರತ ನಾಲ್ಕು ಅಂಕಗಳೊಂದಿಗೆ ಸೂಪರ್-4 ರ ಅಗ್ರಸ್ಥಾನವನ್ನು ತಲುಪಿತು ಮತ್ತು ಏಷ್ಯಾ ಕಪ್ 2023 ರ ಫೈನಲ್ ಪ್ರವೇಶಿಸಿತು.

ಸ್ಕೋರ್ ವಿವರಗಳು 
ಭಾರತ ಇನಿಂಗ್ಸ್:
1) ರೋಹಿತ್ ಶರ್ಮಾ (ಬಿ) 53;
2) ಗಿಲ್ (ಬಿ) ವೆಲಾಲಾಗೆ 19;
3) ಕೊಹ್ಲಿ (ಸಿ) ಶನಕ (ಬಿ) ವೆಲಾಲಗೆ 3;
4) ಇಶಾನ್ ಕಿಶನ್ (ಸಿ) ವೆಲಲಾಗೆ (ಬಿ) ಅಸಲಂಕಾ 33;
5) ರಾಹುಲ್ (ಸಿ&ಬಿ) ವೆಲಾಲಾಗೆ 39;
6) ಹಾರ್ದಿಕ್ ಪಾಂಡ್ಯ (ಸಿ) ಮೆಂಡಿಸ್ (ಬಿ) ವೆಲಾಲಾಗೆ 5;
7) ಜಡೇಜಾ (ಸಿ) ಮೆಂಡಿಸ್ (ಬಿ) ಅಸಲಂಕಾ 4;
8) ಅಕ್ಷರ್ ಪಟೇಲ್ (ಸಿ) ಸಮರವಿಕ್ರಮ (ಬಿ) ತೀಕ್ಷಣ್ 26;
9) ಬುಮ್ರಾ (ಬಿ) ಅಸಲಂಕಾ 5;
10) ಕುಲದೀಪ್ (ಸಿ) ಧನಂಜಯ (ಬಿ) ಅಸಲಂಕಾ 0;
11)  ಸಿರಾಜ್ (ಔಟಾಗದೆ) 5;

ಎಕ್ಸ್ಟ್ರಾಗಳು 21; ಒಟ್ಟು (49.1 ಓವರ್‌ಗಳಲ್ಲಿ ಆಲೌಟ್) 213.

ವಿಕೆಟ್‌ಗಳ ಪತನ:
1–80, 2–90,  3–91, 4–154,  5–170, 6–172,  7–178, 8–186,  9–186, 10–213

ಬೌಲಿಂಗ್: ರಜಿತಾ 4-0-30-0, ತೀಕ್ಷಣ 9.1-0- 41-1, ಶನಕ 3-0-24-0, ಪತಿರಣ 4-0-31-0, ವೆಲಾಲಗೆ 10-1-40-5, ಧನಂಜಯ 10- 0–28– 0, ಅಸಲಂಕಾ 9–1–18–4.

ಶ್ರೀಲಂಕಾ ಇನಿಂಗ್ಸ್: 
1) ನಿಸಂಕಾ (ಸಿ) ರಾಹುಲ್ (ಬಿ) ಬುಮ್ರಾ 6;
2) ಕರುಣಾರತ್ನೆ (ಸಿ) ಗಿಲ್ (ಬಿ) ಸಿರಾಜ್ 2;
3) ಮೆಂಡಿಸ್ (ಸಿ) (ಉಪ) ಸೂರ್ಯಕುಮಾರ್ (ಬಿ) ಬುಮ್ರಾ 15;
4) ಸಮರವಿಕ್ರಮ (ಸ್ಟಂಪ್ಡ್) ರಾಹುಲ್ (ಬಿ) ಕುಲದೀಪ್ 17;
5) ಅಸಲಂಕಾ (ಸಿ) ರಾಹುಲ್ (ಬಿ) ಕುಲದೀಪ್ 22;
6) ಧನಂಜಯ (ಸಿ) ಗಿಲ್ (ಬಿ) ಜಡೇಜಾ 41;
7) ಶನಕ (ಸಿ) ರೋಹಿತ್ (ಬಿ) ಜಡೇಜಾ 9;
8) ವೆಲಾಲಗೆ (ಔಟಾಗದೆ) 42;
9) ಥಿಕ್ಷನ್ (ಸಿ) (ಉಪ) ಸೂರ್ಯಕುಮಾರ್ (ಬಿ) ಪಾಂಡ್ಯ 2;
10) ರಜಿತಾ (ಬಿ) ಕುಲದೀಪ್ 1;
11) ಪತಿರಾನ (ಬಿ) ಕುಲದೀಪ್ 0;

ಎಕ್ಸ್ಟ್ರಾಗಳು 15; ಒಟ್ಟು (41.3 ಓವರ್‌ಗಳಲ್ಲಿ ಆಲೌಟ್) 172.

ವಿಕೆಟ್‌ಗಳ ಪತನ: 1–7, 2–25, 3–25, 4–68, 5–73, 6–99, 7–162, 8–171, 9–172, 10–172

ಬೌಲಿಂಗ್: ಬುಮ್ರಾ 7-1-30-2, ಸಿರಾಜ್ 5- 2-17-1, ಪಾಂಡ್ಯ 5-0-14-1, ಕುಲದೀಪ್ 9.3- 0- 43-4, ಜಡೇಜಾ 10-0-33-2, ಅಕ್ಷರ 5 –0–29 –0.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment