ಬೆಂಗಳೂರು: ಈಗಷ್ಟೇ ಕ್ಯಾಬ್, ಆಟೋ, ಬಸ್ ಚಾಲಕರ ಬೇಡಿಕೆ ಈಡೇರಿಕೆಗಳ ಪ್ರತಿಭಟನೆಯನ್ನಯ ತಣ್ಣಗೆ ಮಾಡಿ ಆಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆ ಎದುರಾಗುತ್ತಿದೆ. ಅದುವೇ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯೂ ಒಂದು. ಇದೀಗ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಸರ್ಕಾರದ ಮುಂದೆ ತಮ್ಮ ಗ್ಯಾರಂಟಿ ಬಗ್ಗೆಯೂ ಮನವಿ ಇಡಲು ಹೊರಟಿದ್ದಾರೆ. ಸೆಪ್ಟೆಂಬರ್ 15 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮಡೆಸಲಿದ್ದಾರೆ.
ಇದರ ಜೊತೆಗೆ ಶಿಕ್ಷಣ ಇಲಾಖೆಯ ಆದೇಶದ ವಿರುದ್ಧವೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಗಿಳಿಯಲಿದ್ದಾರೆ. ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲು ಇಲಾಖೆ ಆದೇಶ ಹೊರಡಿಸಿದೆ. ಖಾಸಗಿ ಶಾಲೆಗಳಿಂದ ಸರ್ಜಾರಿ ಶಾಲೆಯತ್ತ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರುವ ಉದ್ದೇಶದಿಂದ ಇಲಾಖೆ ಈ ಆದೇಶ ಹೊರಡಿಸಿದೆ. ಆದರೆ ಇದರಿಂದ ಅಂಗನವಾಡಿಗಳು ಮುಚ್ಚುವ ಸ್ಥಿತಿ ಬರುತ್ತೆ ಎಂದು ಕಾರ್ಯಕರ್ತೆಯರು ಬೇಸರ ಹೊರ ಹಾಕಿದ್ದಾರೆ.
ಈಗಲೇ ಅಂಗನವಾಡಿಗಳು ಅಳಿವಿನಂಚಿನಲ್ಲಿವೆ. ಇನ್ನು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾಗಿ ಬಿಟ್ಟರೆ, ಅಂಗನವಾಡಿಯ ಕಡೆಗೆ ಮಕ್ಕಳು ಸುಳಿಯುವುದೇ ಇಲ್ಲ. ನಂತರದ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗೆ ಬೀಳುವುದು ಗ್ಯಾರಂಟಿ ಎಂಬ ಆತಂಕ ಸಿಬ್ಬಂದಿಗಳಲ್ಲಿ ಕಾಡುತ್ತಿದೆ